ಶತ್ರುಘ್ನ ಸಿನ್ಹಾ ಪುತ್ರ ಲವ್ ಸಿನ್ಹಾ,  ಶರದ್ ಯಾದವ್ ಪುತ್ರಿಗೆ ಬಿಗ್‌ ಗಿಫ್ಟ್ ಕೊಟ್ಟ ಕಾಂಗ್ರೆಸ್!

Published : Oct 16, 2020, 03:30 PM ISTUpdated : Oct 16, 2020, 03:32 PM IST
ಶತ್ರುಘ್ನ ಸಿನ್ಹಾ ಪುತ್ರ ಲವ್ ಸಿನ್ಹಾ,  ಶರದ್ ಯಾದವ್ ಪುತ್ರಿಗೆ ಬಿಗ್‌ ಗಿಫ್ಟ್ ಕೊಟ್ಟ ಕಾಂಗ್ರೆಸ್!

ಸಾರಾಂಶ

ಬಿಹಾರದಲ್ಲಿ ವಿಧಾನಸಭೇ ಚುನಾವಣೆ ಕಾವು/ ಅಭ್ಯರ್ಥಿಗಳ ಪಟ್ಟಿ ಘೋಷಿಸಿದ ಕಾಂಗ್ರೆಸ್/ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ಸಿನ್ಹಾ ಮತ್ತು ಲೋಕತಾಂತ್ರಿಕ್ ಜನತಾ ದಳ ಮುಖಂಡ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್‌ಗೆ ಕಾಂಗ್ರೆಸ್ ಟಿಕೆಟ್ 

ಪಾಟ್ನಾ(ಅ. 16) ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್ ರಾಜಕಾರಣದ ತಂತ್ರಗಾರಿಕೆ ಮೆರೆದಿದೆ.  ಹಿಂದಿ ಚಿತ್ರರಂಗದ ಹಿರಿಯ ನಟ ಶತ್ರುಘ್ನ ಸಿನ್ಹಾ ಅವರ ಪುತ್ರ ಲವ್ ಸಿನ್ಹಾ ಮತ್ತು ಲೋಕತಾಂತ್ರಿಕ್ ಜನತಾ ದಳ ಮುಖಂಡ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.

ಬಿಹಾರದಲ್ಲಿ ವಿಧಾನಸಭೆ ಚುನಾವಣೇ ಕಾವು ಜೋರಾಗುತ್ತಿದ್ದು ಎನ್ ಡಿಎ ಮತ್ತು ಮಹಾಘಟಬಂಧನ್ ನಡುವೆ  ಸಮರ ನಿರ್ಮಾಣವಾಗಿದೆ. ಪಾಟ್ನಾ ಸಾಹೀಬ್ ಕ್ಷೇತ್ರದ ವ್ಯಾಪ್ತಿಯ ಬಂಕಿಪೋರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು 37 ವರ್ಷ ವಯಸ್ಸಿನ ಲವ್ ಸಿನ್ಹಾಗೆ ಟಿಕೆಟ್ ನೀಡಲಾಗಿದೆ. 

ಬಿಹಾರದಲ್ಲಿ ಮತ್ತೆ ಎನ್‌ಡಿಎ ಅಧಿಕಾರಕ್ಕೆ; ಟೈಮ್ಸ್ ನೌ ಸಮೀಕ್ಷೆ

ಮಾಜಿ ಸಂಸದ ಕಾಳಿ ಪಾಂಡೆ ಅವರಿಗೆ ಕುಚೈಕೋಟೆ ಟಿಕೆಟ್ ಸಿಕ್ಕಿದೆ.   ಕಾಳಿ ಪಾಂಡೆ ಮತ್ತು ಸುಭಾಷಿಣಿ ಇತ್ತೀಚೆಗಷ್ಟೆ ಕಾಂಗ್ರೆಸ್ ಸೇರ್ಪಡೆಯಾಗಿದ್ದು.  49  ಅಭ್ಯರ್ಥಿಗಳ ಪಟ್ಟಿ ಇಲೀಸ್ ಮಾಡಿದ್ದು ಕಾಂಗ್ರೆಸ್ ಚುನಾವಣಾ ತಂತ್ರಗಾರಿಕೆಯಲ್ಲಿ ಒಂದು ಹೆಜ್ಜೆ ಮುಂದಿದೆ.

ಗುರುವಾರ ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿ ನವೆಂಬರ್ 3 ಮತ್ತು 7 ರಂದು ನಡೆಯಲಿರುವ ಎರಡನೇ ಮತ್ತು ಮೂರನೇ ಹಂತದ ಚುನಾವಣೆ ಕ್ಷೇತ್ರಗಳದ್ದು. ಪ್ರವೇಶ್ ಕುಮಾರ್ ಮಿಶ್ರಾ  ಅವರಿಗೆ ವಾಲ್ಮೀಕಿ ನಗರ ಟಿಕೆಟ್ ನೀಡಿದೆ.

ಅಕ್ಟೋಬರ್ 28 ರಿಂದ ಬಿಹಾರ ಚುನಾವಣೆಗೆ ಕಾಂಗ್ರೆಸ್ ತನ್ನ 21 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.  ಬಿಹಾರದಲ್ಲಿ 'ಮಹಾಗಘಟ್ ಬಂಧನ್' ಅಂಗವಾಗಿ ಕಾಂಗ್ರೆಸ್ ಒಟ್ಟು 70 ಸ್ಥಾನಗಳಿಗೆ ಸ್ಪರ್ಧಿಸುತ್ತಿದ್ದು, ಆರ್‌ಜೆಡಿ ಮೈತ್ರಿಯ ನೇತೃತ್ವ ವಹಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌