
ತುಮಕೂರು, (ಆ.19): ಶಾಸಕ ಸತ್ಯನಾರಾಯಣ್ ಅವರ ಅಕಾಲಿನ ನಿಧನದಿಂದ ತೆರವಾದ ಶಿರಾ ಕ್ಷೇತ್ರದಲ್ಲಿ ಈಗ ರಾಜಕೀಯ ಕಾವು ರಂಗೇರಿದೆ. ಇದಕ್ಕೆ ಕಾರಣ ಕಾಂಗ್ರೆಸ್‌ನೊಳಗಿನ ಒಳ ರಾಜಕೀಯ
ಹೌದು..ಶಾಸಕ ಸತ್ಯನಾರಾಯಣ್ ಅವರ ಸಾವಿನಿಂದ ತೆರವಾಗಿರುವ ಶಿರಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಆಗಲೇ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಫೈಟ್ ಶುರುವಾಗಿದೆ.
ರಾಜ್ಯದಲ್ಲಿ ಮತ್ತೊಂದು ಉಪಚುನಾವಣೆಗೆ ಸಜ್ಜು: ಗರಿಗೆದರಿದ ರಾಜಕೀಯ
ಇದಕ್ಕೆ ಪೂರಕವೆಂಬಂತೆ ಶಿರಾ ರಾಜಕಾರಣದ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನಾಯಕ ಕೆ.ಎನ್. ರಾಜಣ್ಣ, ಸೆ. 27ಕ್ಕೆ ಸತ್ಯನಾರಾಯಣ್ ಅವರ ತಿಥಿ ಇದೆ. ಅದಾದ ಬಳಿಕ ರಾಜಕೀಯ ಚಟುವಟಿಕೆಗಳು ನಡೆಯುತ್ತವೆ ಎಂದು ಹೇಳುವ ಮೂಲಕ ಭಾರೀ ಸಂಚಲನ ಮೂಡಿಸಿದ್ದಾರೆ.
ನಮ್ಮ ಮುಂದಿನ ನಿರ್ದಾರ ಏನಿದ್ದರೂ ಮುಖಂಡರ ಜೊತೆ ಕೂತು ಮಾತನಾಡಿದ ನಂತರವೆ ಎನ್ನುವ ಮೂಲಕ ಶಿರಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ. ಜಯಚಂದ್ರ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜಣ್ಣ ಹಾಗೂ ಜಯಚಂದ್ರ ಒಂದೇ ಪಕ್ಷದಲ್ಲಿದ್ರೂ ಕಟ್ಟಾ ರಾಜಕೀಯ ವಿರೋಧಿಗಳು. ಮಧುಗಿರಿಯಲ್ಲಿ ರಾಜಣ್ಣ ಸೋಲಿಗೆ ಜಯಚಂದ್ರ ಕೂಡ ಕಾರಣ ಎನ್ನುವ ಸುದ್ದಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಸೋಲಿಗೆ ಶಿರಾ ಕ್ಷೆತ್ರದಿಂದ ಸ್ಪರ್ಧಿಸುವ ಮೂಲಕ ರಾಜಣ್ಣ ಜಯಚಂದ್ರ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ. ಆದ್ರೆ, ಶಿರಾ ಬೈ ಎಲೆಕ್ಷನ್ ಟಿಕೆಟ್ ಜಯಚಂದ್ರ ಅವರಿಗೆ ಸಿಗುವ ಎಲ್ಲಾ ಸಾಧ್ಯತೆಗಳು ಹೆಚ್ಚಿವೆ.
ಒಂದು ವೇಳೆ ಹಾಗೆ ಆದರೆ, ರಾಜಣ್ಣ ಪಕ್ಷೇತರ ಇಲ್ಲ ಬಿಜೆಪಿಯಿಂದ ಸ್ಪರ್ಧೆ ಮಾಡಿದರೂ ಅಚ್ಚರಿ ಪಡಬೇಕಿಲ್ಲ. ಒಟ್ಟಿನಲ್ಲಿ ಕೊರೋನಾ ಭೀತಿಯ ಮಧ್ಯೆ ತುಮಕೂರು ಜಿಲ್ಲಾ ರಾಜಕಾರಣ ಕುತೂಹಲ ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.