ಜನಾರ್ಧನ ರೆಡ್ಡಿ ರಾಜಕೀಯ ಎಂಟ್ರಿಗೆ ಭಾರಿ ಮುನ್ನಡೆ: 4 ಕೋರ್ಟ್ ಕೇಸ್‌ ರದ್ದು

By Sathish Kumar KHFirst Published Dec 7, 2022, 7:27 PM IST
Highlights

ರಾಜ್ಯ ರಾಜಕಾರಣದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಿದ್ಧಗೊಂಡಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಅನುಕೂಲ ಆಗುವಂತೆ ಬೆಂಗಳೂರು 46ನೇ ಸೆಷನ್ಸ್ ನ್ಯಾಯಾಲಯದಲ್ಲಿ ದಾಖಲಾಗಿದ್ದ ಬೇನಾಮಿ ಆಸ್ತಿ ಹೊಂದಿದ ಮತ್ತು ಆಸ್ತಿ ವರ್ಗಾವಣೆ ಕುರಿತ ನಾಲ್ಕು ಪ್ರಕರಣಗಳು ರದ್ದಾಗಿವೆ.

ಬೆಂಗಳೂರು (ಡಿ.7) : ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಮೇಲಿದ್ದ ಅಕ್ರಮ ಆಸ್ತಿ ಗಳಿಕೆಯ 4 ಪ್ರಕರಣಗಳು ಸುಪ್ರೀಂ ಕೋರ್ಟ ಆದೇಶದ ಅನ್ವಯದ ಮೇರೆಗೆ ರದ್ದುಗೊಂಡಿವೆ. ಈ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧಗೊಂಡಿರುವ ಜನಾರ್ದನ ರೆಡ್ಡಿ ಅವರಿಗೆ ದೊಡ್ಡ ರಿಲೀಫ್‌ ಸಿಕ್ಕಂತಾಗಿದೆ.

2009ರಲ್ಲಿ ಬೇನಾಮಿ ಆಸ್ತಿ ಗಳಿಕೆ ಮಾಡಿದ ಆರೋಪ  ಐಟಿ (IT) ಇಲಾಖೆಯಲ್ಲಿ ದಾಖಲಾಗಿದ್ದ ನಾಲ್ಕು ಪ್ರಕರಣಗಳು 2021ರಲ್ಲಿ ಆದಾಯ ತೆರಿಗೆ ಇಲಾಖೆ ಕೇಸ್​ ದಾಖಲಿಸಿತ್ತು, 4 ಪ್ರಕರಣಗಳಲ್ಲಿ ಜಾಮೀನು ಪಡೆದಿದ್ದ ಗಾಲಿ ಜನಾರ್ದನ ರೆಡ್ಡಿಯ ಬೇನಾಮಿ ಹೆಸರಲ್ಲಿ ಆಸ್ತಿ ವಹಿವಾಟು ನಡೆಸಿದ್ದ ಆರೋಪ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಪ್ರಕರಣ ಇತ್ಯರ್ಥವಾಗಿದೆ. ಆಗಸ್ಟ್​ ತಿಂಗಳಲ್ಲಿ ಗಣಪತಿ ಡೀಲ್ಕಾಮ್ ಪ್ರೈವೇಟ್ ಲಿಮಿಟೆಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್​ನಿಂದ ಆದೇಶ ಬಂದಿದೆ. ಈ ಆದೇಶವನ್ನೇ ಮುಂದಿಟ್ಟುಕೊಂಡು ಬೆಂಗಳೂರಿನ 46 ನೇ ಹೆಚ್ಚುವರಿ ಸಿಟಿ ಸಿವಿಲ್ ಆಂಡ್ ಸೆಷನ್ಸ್​ ಕೋರ್ಟ್​ ಜನಾರ್ದನ ರೆಡ್ಡಿಯ ನಾಲ್ಕು ಕೇಸ್​ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈಮೂಲಕ ಮಾಜಿ ಸಚಿವ ರೆಡ್ಡಿ ಒಂದೊಂದೇ ಕೇಸ್​ನಿಂದ ಹೊರ ಬರುತ್ತಿದ್ದಾರೆ.

ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ಶೀಘ್ರ ಗೃಹಪ್ರವೇಶ

ಇನ್ನು 2016ರ ಮೊದಲು ನಮೂದಿಸಿದ ವಹಿವಾಟಿಗೆ ಕ್ರಿಮಿನಲ್ ಕಾನೂನು ಕ್ರಮ ಅಗತ್ಯವಿಲ್ಲ. ಅಂತಹ ಎಲ್ಲಾ ಕಾನೂನು ಕ್ರಮಗಳನ್ನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ಆದೇಶಿಸಲಾಗಿತ್ತು. ಬೇನಾಮಿ ಆಸ್ತಿಯ ಹಳೆಯ ಪ್ರಕರಣ 2016ರ ಕಾನೂನಿನಡಿ ಕ್ರಮ ಕೈಗೊಳ್ಳುವಂತಿಲ್ಲ ಎಂದು ಸೆಷನ್ಸ್ ಕೋರ್ಟ್​ ಡಿಸೆಂಬರ್ 3ರಂದು ರೆಡ್ಡಿ ಮೇಲಿದ್ದ ನಾಲ್ಕು ಕೇಸ್​ ರದ್ದು ಮಾಡಿದೆ ಎಂದು ನ್ಯಾಯಮೂರ್ತಿ ಚಂದ್ರಕಲಾರವರು ಆದೇಶವನ್ನು  ಹೊರಡಿಸಿದ್ದಾರೆ.

ಸಕ್ರಿಯ ರಾಜಕಾರಣಕ್ಕೆ ಪ್ರವೇಶ:
ಗಣಿ ಅಕ್ರಮದ ಆರೋಪದಿಂದಾಗಿ ರಾಜಕಾರಣದಿಂದ ದೂರ ಉಳಿದಿದ್ದ ಬಳ್ಳಾರಿಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಇದೀಗ ಸಕ್ರಿಯ ರಾಜಕೀಯಕ್ಕೆ ಮರಳಲು ಸನ್ನದ್ಧರಾಗಿದ್ದಾರೆ. ಗಂಗಾವತಿ ತಾಲೂಕಿನ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಯಿಂದಲೇ ರಾಜಕೀಯ ಮರುಜನ್ಮ ಪಡೆಯಲು ಮುಂದಾಗಿರುವ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿಯೇ ಬಿಡಾರ ಹೂಡುತ್ತಿದ್ದು, ಇದಕ್ಕಾಗಿ ಭವ್ಯ ಬಂಗಲೆಯೊಂದನ್ನು ನಿರ್ಮಿಸಿಕೊಂಡಿದ್ದಾರೆ. ಉಳಿದಂತೆ ತಾಲೂಕಿನ ನಾನಾ ದೇವಸ್ಥಾನಗಳಿಗೆ ಸುತ್ತುವುದು ಮತ್ತು ರಾಜಕೀಯ ನಾಯಕರ ಮನೆಗಳಿಗೆ ಭೇಟಿ ನೀಡುವ ಕಾರ್ಯ ಮಾಡುತ್ತಿದ್ದಾರೆ.

ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಸ್ಥಾಪನೆ?: ಬಿಜೆಪಿಯಿಂದ ಮುನಿಸಿಕೊಂಡಿರುವ ರೆಡ್ಡಿ

ಬಿಜೆಪಿ ತೀರ್ಮಾನದ ಮೇಲಿದೆ ಹೊಸ ಪಕ್ಷದ ನಿರ್ಧಾರ: ಇನ್ನು ರಾಜಕೀಯ ಇನ್ನುಂಗ್ಸ್ ಪುನಾರಂಭಿಸಲು ಸಜ್ಜಾಗಿರುವ ಜನಾರ್ಧರ ರೆಡ್ಡಿ ಅವರು, ತಾವು ಪ್ರವಾಸೋದ್ಯಮ ಸಚುವರಾಗಿದ್ದ ಸಂದರ್ಭದಲ್ಲಿ ಗದಗ ಜನರ ಬೇಡಿಕೆಯಾಗಿದ್ದ ಬಸವಣ್ಣನ ಪ್ರತಿಮೆಯ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದಾರೆ ಎಂಬ ಮುನ್ಸೂಚನೆ ನೀಡಿದ್ದರು. ಆದರೆ, ರಾಮುಲು ಮತ್ತು ತಮ್ಮ ನಡುವಿಕ ಸ್ನೇಹ ಸಂಬಂಧ ಹಾಳಾಗಿಲ್ಲ ಎಂದು ತಿಳಿಸಿದ್ದರು. ಆದರೆ, ಬಿಜೆಪಿ ಪಕ್ಷ ಸೇರ್ಪಡೆಗೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಅಥವಾ ಹೊಸ ಪಕ್ಷ ಕಟ್ಟುತ್ತಾರೋ ಎನ್ನುವುದರ ವಿಚಾರದ ಬಗ್ಗೆ ಯಾವುದೇ ಮಾಹಿತಿ ಬಹಿರಂಗ ಮಾಡಿಲ್ಲ. ಆದರೆ, ನನ್ನ ದೇಹದ ತುಂಬೆಲ್ಲಾ ಬಿಜೆಪಿ ಇದ್ದು, ಪಕ್ಷದ ಸೇರ್ಪಡೆ ಬಗ್ಗೆ ಹಿರಿಯರೊಂದಿಗೆ ಚರ್ಚೆ ಮಾಡಿದ್ದು ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ನಂತರ ನನ್ನ ಮುಂದಿನ ನಡೆಯನ್ನು ತಿಳಿಸುವುದಾಗಿ ತಿಳಿಸಿದ್ದಾರೆ.

click me!