
ರಾಮನಗರ (ಜು.7): ಬಿಡದಿ ಟೌನ್‌ಶಿಪ್ ಯೋಜನೆ(Bidadi township plan)ಯನ್ನು ವಿರೋಧಿಸಿ ಜೆಡಿಎಸ್(JDS) ಪಕ್ಷ ಆಗಸ್ಟ್ 9, 10 ಮತ್ತು 11 ಮೂರು ದಿನಗಳ ಕಾಲ ಬೈರಮಂಗಲದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ 38 ಕಿಮೀ ಬೃಹತ್ ಪಾದಯಾತ್ರೆ ನಡೆಸಲು ಸಜ್ಜಾಗಿರುವ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಕೂಡ ಜೆಡಿಎಸ್ ಪಾದಯಾತ್ರೆಗೆ ಕೌಂಟರ್ ನೀಡಲಾರಂಭಿಸಿದೆ.
ಜೆಡಿಎಸ್ ನಡೆಯಲಿರುವ ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್ ಕೊಟ್ಟಿದ್ದು, 'ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ' ಎಂದು ಬರೆದಿರುವ ಬ್ಯಾನರ್ ನನ್ನು ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ನಡೆಯುವ ಹಾಕುವ ಮೂಲಕ ಜೆಡಿಎಸ್ ಕೌಂಟರ್ ನೀಡಿದ್ದಾರೆ.
ಜೆಡಿಎಸ್ ಆರಂಭಿಸಲಿರುವ ಬಿಡದಿ ಬೈರಮಂಗಲ ಕ್ರಾಸ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಬ್ಯಾನರ್ ಅಳಡಿಸಿದ್ದು, ಹೆಚ್‌ಡಿಕೆ ಬಿಎಸ್‌ವೈ ತಮ್ಮ ಪುತ್ರರ ಕೈ ಹಿಡಿದುಕೊಂಡು ಪಾದಯಾತ್ರೆ ನಡೆಸುವ ರೀತಿ ವ್ಯಂಗ್ಯ ಮಾಡಲಾಗಿದೆ.ಬಿಡದಿ ಟೌನ್‌ಶಿಪ್ ರೂವಾರಿಗಳಾದ ಜೆಡಿಎಸ್ ಬಿಜೆಪಿಯವರ ಪ್ರಾಯಶ್ಚಿತ ಯಾತ್ರೆಗೆ ಸ್ವಾಗತ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.
ಸದ್ಯ ಎರಡು ಕಡೆಯ ಕಾರ್ಯಕರ್ತರು ಸೋಶಿಯಲ್ ಮೀಡಿಯಾ ಬಳಸಿಕೊಂಡು ಪರ-ವಿರೋಧ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.