ಜೀವನಪೂರ್ತಿ ಕಳೆದ ಬಿಜೆಪಿ ಗಬ್ಬೆದ್ದು ಹೋಗಿದೆ, ಸಿದ್ಧಾಂತವೇ ಇಲ್ಲದಂತಾಗಿದೆ; ಕೆ.ಎಸ್. ಈಶ್ವರಪ್ಪ

Published : Feb 02, 2025, 01:48 PM ISTUpdated : Feb 02, 2025, 02:16 PM IST
ಜೀವನಪೂರ್ತಿ ಕಳೆದ ಬಿಜೆಪಿ ಗಬ್ಬೆದ್ದು ಹೋಗಿದೆ, ಸಿದ್ಧಾಂತವೇ ಇಲ್ಲದಂತಾಗಿದೆ; ಕೆ.ಎಸ್. ಈಶ್ವರಪ್ಪ

ಸಾರಾಂಶ

ರಾಜ್ಯದಲ್ಲಿ ನಾನು ಜೀವನ ಪೂರ್ತಿ ‌ಕಳೆದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಥೆ ಹಾಳಾಗಿದೆ. ಬಿಜೆಪಿಗೆ ಸಿದ್ದಾಂತವೇ ಇಲ್ಲ ಎಂಬಂತಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ವಿಜಯಪುರ (ಫೆ.02): ರಾಜ್ಯದಲ್ಲಿ ನಾನು ಜೀವನ ಪೂರ್ತಿ ‌ಕಳೆದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಥೆ ಹಾಳಾಗಿದೆ. ಬಿಜೆಪಿಗೆ ಸಿದ್ದಾಂತವೇ ಇಲ್ಲ ಎಂಬಂತಾಗಿದೆ. ಹಿಂದುತ್ವ ಎಂದು ಹೇಳುತ್ತಿದ್ದ ಪಕ್ಷ ಹಾಳಾಗಿ ಹೋಗುತ್ತಿದೆ. ಒಂದು ಕುಟುಂಬದ ಕೈಲಿ ಬಿಜೆಪಿ ಸಿಲುಕಿ ನಲುಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.

ವಿಜಯಪುರ ನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಕಾರಣ ಗಬ್ಬೆದ್ದು ಹೋಗಿದೆ. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಎಲ್ಲ ಪಕ್ಷಗಳು  ಹಾಳಾಗಿವೆ. ಆಯಾ ಪಕ್ಷಗಳ ಕೇಂದ್ರ ನಾಯಕರು ಏನೂ ಮಾಡುತ್ತಿಲ್ಲ. ನಾನು ಜೀವನ ಪೂರ್ತಿ ‌ಕಳೆದ ಬಿಜೆಪಿ ಕಥೆ ಹಾಳಾಗಿದೆ. ಬಿಜೆಪಿಗೆ ಸಿದ್ದಾಂತವೇ ಇಲ್ಲ ಎಂಬಂತಾಗಿದೆ. ಹಿಂದುತ್ವ ಎಂದು ಹೇಳುತ್ತಿದ್ದ ಪಕ್ಷ ಹಾಳಾಗಿ ಹೋಗುತ್ತಿದೆ. ಒಂದು ಕುಟುಂಬದ ಕೈಲಿ ಸಿಕ್ಕಿದೆ ಎಂದು ಪರೋಕ್ಷವಾಗಿ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದ ಶಿಕಾರಿಪುರದಲ್ಲಿ ವಿಜಯೇಂದ್ರ ನಮ್ಮ ಭಿಕ್ಷೆಯಿಂದ ಗೆದ್ದಿದ್ದು ಎಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಅವರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ವಿಜಯೇಂದ್ರ ವಿರುದ್ದ ಸೂಕ್ತ ಅಭ್ಯರ್ಥಿ ಹಾಕದೇ ಇರೋ ಕಾರಣ ಗೆದ್ದಿದ್ದು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ವರಣಾ ವಿಧಾನಸಭಾ ಕ್ಷೇತ್ರದಲ್ಲಿ ನಾನು ಸ್ಪರ್ದೆ ಮಾಡಿದರೆ ಸಿದ್ದರಾಮಯ್ಯ ಗೆಲ್ಲುತ್ತಿರಲಿಲ್ಲ ಎಂದು ವಿಜಯೇಂದ್ರ ಹೇಳುತ್ತಾರೆ. ಇದೆಲ್ಲಾ ಹೊಂದಾಣಿಕೆ ಅಲ್ಲವೇ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ದಿಢೀರ್ ಆಸ್ಪತ್ರೆಗೆ ದಾಖಲು; ಎಲ್ಲ ಕಾರ್ಯಕ್ರಮಗಳೂ ರದ್ದು!

ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಕಲಹ ಉಂಟಾಗುತ್ತಿದೆ. ಕಾಂಗ್ರೆಸ್ ಪಕ್ಷವೂ ಸಹ ಇದಕ್ಕೆ ಹೊರತಾಗಿಲ್ಲ. ಎಐಸಿಸಿ ಆಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿಗೆ ಪಕ್ಷದಲ್ಲಿ ಬೆಲೆಯಿಲ್ಲ. ಖರ್ಗೆ ಮಹಾಕುಂಭ ಮೇಳದ ಬಗ್ಗೆ ಮಾತನಾಡಿದ್ದು ನೋವು ತರಿಸಿದೆ. ಮಲ್ಲಿಕಾರ್ಜುನ ಖರ್ಗೆ ಕುಂಭಮೇಳ ಟೀಕೆ ಮಾಡಿದ್ದಾರೆ. ಸೋನಿಯಾ ಗಾಂಧಿ ಮೆಚ್ಚಿಸೋಕೆ ಮಾತನಾಡಿದ್ಧಾರೆ. 144 ವರ್ಷಗಳ ಬಳಿಕ ಬಂದ ಕುಂಭ ಮೇಳದ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವಮಾನ ಮಾಡಿದ್ದಾರೆ. ಕುಂಭಮೇಳದಲ್ಲಿ ಸ್ನಾನ ಮಾಡಿದರೆ ಬಡವರ ಹೊಟ್ಟೆ ತುಂಬತ್ತಾ ಎಂದು ಖರ್ಗೆ ಮಾತನಾಡುವ ಮೂಲಕ ಹಿಂದೂಗಳಿಗೆ ಅವಮಾನ ಮಾಡಿದ್ದಾರೆ. ಖರ್ಗೆ ಬಾಯಿಮುಚ್ಚಿ ಎಂದು ತಮ್ಮ ಪಕ್ಷದವರಿಗೆ  ಹೇಳುತ್ತಾರೆ. ಆದರೆ ಕುಂಭಮೇಳದ ವಿಚಾರದಲ್ಲಿ ಖರ್ಗೆ ಬಾಯಿ ಮುಚ್ಚಿಕೊಳ್ಳಬೇಕು ಎಂದು ಈಶ್ವರಪ್ಪ ಕಿಡಿಕಾರಿದರು.

ಇದನ್ನೂ ಓದಿ: ಬಡವರನ್ನು ಶೋಷಣೆ ಮಾಡಿದ್ರೇ ಸುಮ್ಮನಿರಲ್ಲ: ಗೃಹ ಸಚಿವ ಪರಮೇಶ್ವರ್‌ ಎಚ್ಚರಿಕೆ

ಡಿ.ಕೆ. ಶಿವಕುಮಾರ ಹಾಗೂ ಸಭಾಪತಿ ಯು.ಟಿ. ‌ಖಾದರ್ ಕುಂಭ ಮೇಳಕ್ಕೆ ಹೋಗಿದ್ದಾರೆ. ಹಾಗಾದರೆ ಅವರನ್ನು ಪಕ್ಷದಿಂದ ಕಿತ್ತು ಹಾಕಿ ಎಂದು ಖರ್ಗೆಗೆ ಸವಾಲು ಹಾಕಿದರು. ಹಸು  ಕೆಚ್ಚಲು  ಕತ್ತರಿಸಿದಾಗ ಗರ್ಭದ ಹಸು ಕತ್ತರಿಸಿದಾಗ, ಬಾಲ ಕತ್ತರಿಸಿದಾಗ ಖರ್ಗೆ ಅವರು ಮಾತನಾಡಲಿಲ್ಲ. ಈಗಾ ಕುಂಭ ಮೇಳದ ಬಗ್ಗೆ ಮಾತನಾಡುತ್ತಾರೆ. ಯಾರು ಹಸು ಕತ್ತರಿಸಿತ್ತಾರೋ, ಬಾಲ ಕತ್ತರಿಸುತ್ತಾ ಗರ್ಭದ ಹಸು ಕತ್ತರಿಸುತ್ತಾರೋ ಅವರ ಕೈ ಕತ್ತರಿಸೋ ಕೆಲಸ ಆಗುತ್ತಿದೆ. ಹಿಂದೂ ಯುವಕರು ಈ ಕೆಲಸ ಮಾಡುತ್ತಾರೆಂದು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ
ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ