ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಾರತ ವಿದೇಶದ ಮುಂದೆ ಕೈ ಒಡ್ಡುವ ಸ್ಥಿತಿಯಲ್ಲಿತ್ತು. ಅಂತಹವರು ಮತ್ತೆ ಚುನಾವಣೆ ನಿಮಿತ್ತ ಜನರನ್ನು ಮಳ್ಳು ಮಾಡುವ ಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಟೀಕಿಸಿದರು.
ಕುಕನೂರು (ಅ.16) : ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭಾರತ ವಿದೇಶದ ಮುಂದೆ ಕೈ ಒಡ್ಡುವ ಸ್ಥಿತಿಯಲ್ಲಿತ್ತು. ಅಂತಹವರು ಮತ್ತೆ ಚುನಾವಣೆ ನಿಮಿತ್ತ ಜನರನ್ನು ಮಳ್ಳು ಮಾಡುವ ಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಹಾಲಪ್ಪ ಆಚಾರ್ ಟೀಕಿಸಿದರು. ತಾಲೂಕಿನ ವಟಪರವಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದÜರು.
6 ಜಿಲ್ಲೆಗಳಲ್ಲಿ ಗರ್ಭಿಣಿಯರ ಮನೆಗೆ ಮಾತೃಪೂರ್ಣ ಸೌಲಭ್ಯ: ಸಚಿವ ಹಾಲಪ್ಪ ಆಚಾರ್
undefined
ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ ಭಾರತ ಮೂಲಕ ವ್ಯಾಕ್ಸಿನ್, ಯುದ್ಧ ವಿಮಾನ, ಯುದ್ಧ ಹಡಗು ಹೀಗೆ ಭಾರತದ ಅಗತ್ಯಗಳನ್ನು ನಮ್ಮಲ್ಲೆ ತಯಾರಿಸುತ್ತಿದ್ದಾರೆ. ಅಲ್ಲದೆ ಭಾರತದ ಆರ್ಥಿಕ ಪರಿಸ್ಥಿತಿ ಸಹ ವಿದೇಶಗಳಿಗಿಂತ ಚೆನ್ನಾಗಿದೆ. ಕಾಂಗ್ರೆಸ್ ಈ ಹಿಂದೆ ಭಾರತವನ್ನು ಛಿದ್ರ ಛಿದ್ರ ಮಾಡಿತ್ತು. ಅಲ್ಲದೆ ವಿದೇಶದ ಮುಂದೆ ಕೈ ಒಡ್ಡುವಂತೆ ಮಾಡಿದ್ದರು. ಈಗ ಮತ್ತೆ ಜೋಡೋ ಎಂಬ ಹೆಸರಿನಲ್ಲಿ ಮಳ್ಳು ಮಾಡಲು ಹೊರಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿದೇಶಕ್ಕೆ ಹೋದರೆ ಅವರನ್ನು ವಿದೇಶಿಗರು ರತ್ನಗಂಬಳಿ ಹಾಸಿ ಸ್ವಾಗತಿಸುತ್ತಾರೆ. ಹಿಂದಿನ ಪ್ರಧಾನಿ ಹೋದರೆ ಇವರೇನೋ ಹಾವಾಡಿಗ ದೇಶದವರೇ ಎಂದು ಬಿಂಬಿಸುತ್ತಿದ್ದರು ಎಂದರು.
ಸರ್ಕಾರ ಮನೆ ಬಾಗಿಲಿಗೆ ಸೌಲಭ್ಯ, ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಆಗಮಿಸುತ್ತಿದ್ದು, ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಯ ಕಾರ್ಯಕ್ರಮದ ಸೌಲಭ್ಯಗಳನ್ನು ಜನರು ಸರಿಯಾಗಿ ಪಡೆಯಬೇಕು. ಕೆರೆ ತುಂಬಿಸುವ ಯೋಜನೆ ಕಾರ್ಯ ಕೂಡ ನಡೆಯುತ್ತಿದೆ ಎಂದರು. ತಹಸೀಲ್ದಾರ್ ಚಿದಾನಂದ ಗುರುಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ಎಲ್ಲ ಇಲಾಖೆಯ ಅಧಿಕಾರಿಗಳು ನಿಮ್ಮ ಗ್ರಾಮಕ್ಕೆ ಬಂದಿದ್ದು, ಸಮಸ್ಯೆ ಇದ್ದರೇ ಮನವಿ ಸಲ್ಲಿಸಿ, ಪರಿಹಾರ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಉಮೇಶ ಸಣ್ಣಗೌಡ ಅಧ್ಯಕ್ಷತೆ ವಹಿಸಿದ್ದರು. ತಾಪಂ ಇಒ ರಾಮಣ್ಣ ದೊಡ್ಮನಿ, ಉಪತಹಸೀಲ್ದಾರ್ ಮುರಳೀಧರರಾವ್ ಕುಲಕರ್ಣಿ, ಬಿಇಒ ಪದ್ಮನಾಭ ಕರ್ಣಂ, ಸಿಡಿಪಿಒ ಸಿಂಧೂ ಎಲಿಗಾರ, ಗ್ರಾಪಂ ಉಪಾಧ್ಯಕ್ಷೆ ದುರಗವ್ವ ಅಮಚಟ್ಟಿ, ಸದಸ್ಯರಾದ ಗೌರಮ್ಮ ತಳವಾರ, ಶ್ರೀಕಾಂತಮ್ಮ ಇತರರಿದ್ದರು.
ಅಭಿವೃದ್ಧಿಗೆ ಆದ್ಯತೆ ನೀಡದ ಕಾಂಗ್ರೆಸ್: ಸಚಿವ ಹಾಲಪ್ಪ ಆಚಾರ್
ಸಚಿವ ಸ್ಥಾನಕ್ಕೆ ದುಂಬಾಲು ಬಿದ್ದಿರಲಿಲ್ಲ :
ಶಾಸಕನಾಗಿ ಸೇವೆ ಮಾಡುತ್ತಿದ್ದ ನನಗೆ ರಾಜ್ಯ ಸರ್ಕಾರ ಉನ್ನತ ಇಲಾಖೆ ಖಾತೆ ನೀಡಿದೆ. ನಾನು ಎಂದಿಗೂ ಸಚಿವ ಸ್ಥಾನಕ್ಕೆ ದುಂಬಾಲು ಬಿದ್ದಿರಲಿಲ್ಲ. ಈ ಹಿಂದೆ ಕ್ಷೇತ್ರದಿಂದ ಮಂತ್ರಿಯಾದವರ ಮೇಲೆ ಲ್ಯಾಪ್‌ಟಾಪ್ ಹಾಗೂ ಇನ್ನಿತರೆ ಹಗರಣ ಕೇಳಿ ಬಂದಿದ್ದವು. ನಾನೆಂದಿಗೂ ಆ ರೀತಿ ಭ್ರಷ್ಟಾಚಾರ ಕೆಲಸ ಮಾಡುವುದಿಲ್ಲ. ಅದು ನನ್ನ ರಕ್ತದಲ್ಲಿಲ್ಲ. ಒಂದು ರೂ ಅವ್ಯವಹಾರ ಆಗಿದ್ದರೆ ರಾಜೀನಾಮೆಗೆ ಸಿದ್ಧ ಎಂದು ಸಚಿವ ಆಚಾರ್ ಹೇಳಿದರು.