ದಿಟ್ಟ ಕ್ರಮಕ್ಕೆ ಮುಂದಾದ ರಾಜ್ಯ ಸರ್ಕಾರ: SDPI, PFI ಸಂಘಟನೆಗಳಿಗೆ ಕುತ್ತು...!

By Suvarna News  |  First Published Aug 14, 2020, 2:44 PM IST

ರಾಜ್ಯಲ್ಲಿ ಎಸ್‌ಡಿಪಿಐ ನಿಷೇಧಿಸಲು ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಬಗ್ಗೆ ಸಚಿವ ಅಶೋಕ್ ಮಾಹಿತಿ ನೀಡಿದ್ದಾರೆ.


ಬೆಂಗಳೂರು, (ಆ.14): ರಾಜ್ಯದಲ್ಲಿ  ಎಸ್‌ಡಿಪಿಐ ಹಾಗೂ ಪಿಎಫ್ಐ ಸಂಘಟನೆಗಳನ್ನು ನಿಷೇಧಿಸಲು ಬಿಜೆಪಿ ಈ ಹಿಂದೆ ಹೋರಾಟ ಮಾಡಿತ್ತು. ಇದೀಗ ಬೆಂಗಳೂರು ಗಲಭೆ ಬಳಿಕ ರಾಜ್ಯ ಬಿಜೆಪಿ ಸರ್ಕಾರ ಈ ಸಂಘಟನೆಗಳನ್ನ ಬ್ಯಾನ್‌ ಮಾಡಲು ಚಿಂತನೆ ನಡೆಸಿದೆ.

"

Tap to resize

Latest Videos

ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಗಲಭೆ ಸಂಬಂಧ ಗೃಹ ಸಚಿವರ ಜತೆ ಸಮಾಲೋಚನೆ ಮಾಡಲಾಗಿದೆ. ಎಸ್​ಡಿಪಿಐ ನಿಷೇಧದ ಬಗ್ಗೆ ಒಂದು ಹೆಜ್ಜೆ ಮುಂದೆ ಇಡಲಾಗಿದೆ. ಗೃಹ ಇಲಾಖೆಯಿಂದ ಎಸ್​ಡಿಪಿಐ ಕೃತ್ಯಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದ್ದು, ಎಸ್​ಡಿಪಿಐ ಹಾಗೂ ಪಿಎಫ್​ಐ ನಿಷೇಧ ಆಗಲಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ, ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದ್ರೂ ಏಕೆ SDPI ಬ್ಯಾನ್ ಮಾಡ್ತಿಲ್ಲ: ಸತ್ಯಾಂಶ ಬಿಚ್ಚಿಟ್ಟ ಮಾಜಿ ಸಚಿವ

ಡಿಜೆ ಹಳ್ಳಿ ಪ್ರಕರಣ ಕೋಮುಗಲಭೆಯಲ್ಲ. ಅದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಕಾಂಗ್ರೆಸ್ ಶಾಸಕರು ಮತ್ತು ಪಾಲಿಕೆ ಸದಸ್ಯರ ನಡುವಿನ ಮುಸುಕಿನ ಗುದ್ದಾಟದಿಂದ ದೊಂಬಿ ಉಂಟಾಗಿದೆ. ಇದರಲ್ಲಿ ಎಸ್​ಡಿಪಿಐ ಕೈವಾಡವೂ ಇದೆ ಎಂದು ಕಂದಾಯ ಸಚಿವ ಆರ್​. ಅಶೋಕ್​ ಹೇಳಿದರು.

ಬೆಂಗಳೂರು ಗಲಭೆಯ ಪ್ರಕರಣದಲ್ಲಿ ಎಸ್‌ಡಿಪಿಗೆ ನೇರ ಸಂಬಂಧ ಇದೆ. ಅಲ್ಲದೇ ರಾಜ್ಯದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ಮುಖಂಡರ ಹತ್ಯೆಯಲ್ಲಿ ಎಸ್‌ಡಿಪಿಐ ಹಾಗೂ ಪಿಎಫ್ಐನ ಕೈವಾಡ ಇದ್ದು, ಇದಕ್ಕೆ ನಮ್ಮ ಬಳಿ ಸಾಕ್ಷಿ ಇದೆ. ಇದರಿಂದ ಈ ಸಂಘಟನೆ ನಿಷೇಧಿಸಲು ಕೇಂದ್ರಕ್ಕೆ ಶಿಫಾರಸು ಮಾಡಲಾಗುವುದು ಎಂದರು.

click me!