ಬೆಳಗಾವಿ ಲೋಕಸಭಾ ಬೈ ಎಲೆಕ್ಷನ್: ಎರಡು ದೊಡ್ಡ ಕುಟುಂಬಗಳ ಮಧ್ಯೆ ಜಂಗಿ ಕುಸ್ತಿ

By Suvarna News  |  First Published Jan 31, 2021, 3:25 PM IST

ಬೆಳಗಾವಿ ಲೋಕಸಭಾ ಉಪಚುನಾವಣೆ ಟಿಕೆಟ್ ವಿಚಾರವಾಗಿ ಎರಡು ದೊಡ್ಡ ಕುಟುಂಬಗಳ ಮಧ್ಯೆ ಶೀತಲ ಸಮರ ಶುರುವಾಗಿದೆ.


ಬೆಳಗಾವಿ, (ಜ.31): ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಆದ್ರೆ, ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಲೇ ಟಿಕೇಟ್‌ಗಾಗಿ ಭಾರೀ ಪೈಪೋಟಿ ಶುರುವಾಗಿದೆ.

ಹೌದು..ಅದರಲ್ಲೂ ಕಾಂಗ್ರೆಸ್‌ನಲ್ಲಿ ಜಾರಕಿಹೊಳಿ ಹಾಗೂ ಹುಕ್ಕೇರಿ ಕುಟುಂಬದ ಮಧ್ಯೆ ಟಿಕೇಟ್ ಪೈಟ್ ಜೋರಾಗಿದೆ. ಇತ್ತ ಪ್ರಕಾಶ್ ಹುಕ್ಕೇರಿ ಮತಗೆ ಟಿಕೇಟ್ ಬೇಕಂತಿದ್ರೆ, ಮತ್ತೊಂದೆಡೆ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ಟಿಕೇಟ್‌ಗಾಗಿ ಭರ್ಜರಿ ಲಾಬಿ ನಡೆಸಿದ್ದಾರೆ.

Latest Videos

undefined

ಪ್ರಕಾಶ್ ಹುಕ್ಕೇರಿ ಹೆಸರು ಶಿಫಾರಸಾಗಿಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದು, ಇದಕ್ಕೆ ಪ್ರಕಾಶ್ ಹುಕ್ಕೇರಿ ಪ್ರತಿಕ್ರಿಯಿಸಿದ್ದು,  ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆಯಾಗಲಿ. ಹೈಕಮಾಂಡ್ ನಿರ್ಣಯ ಕೈಗೊಂಡ ಮೇಲೆ ನಾನು ಮಾತನಾಡುತ್ತೇನೆ ಎಂದು ಖಡಕ್‌ ಆಗಿ ಹೇಳಿದರು.

ಬೆಳಗಾವಿಗೆ ಶಾ ಭೇಟಿ ಬೆನ್ನಲ್ಲೇ ಇವರಿಗೆ ಲೋಕಸಭಾ ಬೈ ಎಲೆಕ್ಷನ್‌ ಟಿಕೆಟ್ ಫಿಕ್ಸ್ ಆಯ್ತಾ?

ನನ್ನ‌ ಹೆಸರು ಶಿಫಾರಸು ಆಗಿಲ್ಲ ಅಂದರೆ ಆಗಿಲ್ಲ. ಕೆಪಿಸಿಸಿ ಕಾರ್ಯಾಧ್ಯಕ್ಷರು ಹೇಳಿದ್ರೆ ಅದಕ್ಕೆ ನಾನು ವಿರೋಧ ಮಾಡಲ್ಲ. ಮಾಡಿಲ್ಲ ಅಂದ್ರೆ ಇಲ್ಲ, ಅವರು ಹೇಳಿದ್ರೆ ಆಯ್ತು ಒಪ್ಪಿಕೊಳ್ಳಬೇಕಾಗುತ್ತೆ ಎಂದರು.

ಇನ್ನು ಬಿಜೆಪಿ ಸಪೋರ್ಟ್ ಮಾಡ್ತೀರಾ ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ಹುಕ್ಕೇರಿ, ನಾನು ಈಗ ಉತ್ತರಿಸಲ್ಲ, ಸುಮ್ಮ‌ನೇ ತೊಂದರೆ ಮಾಡಬೇಡಿ ಎಂದು ತಿಳಿಸಿದರು.

ಸತೀಶ್ ಜಾರಕಿಹೊಳಿ ಹೇಳಿದ್ದಿಷ್ಟು...
ಇನ್ನು ಈ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸತೀಶ್ ಜಾಕಿಹೊಳಿ ಕೂಡ ಪ್ರತಿಕ್ರಿಯೆ ಕೊಟ್ಟಿದ್ದು, ಉಪಚುನಾವಣೆಗೆ ಸ್ಪರ್ಧಿಸುವಂತೆ ರಾಹುಲ್ ಗಾಂಧಿ ಕರೆ ಮಾಡಿದ್ದಾರಾ ಎಂದು ಮಾಧ್ಯಮಗಳ ಪ್ರಶ್ನೆಗೆ, ನನಗೆ ಯಾವುದೇ ರೀತಿಯಿಂದ ಕರೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬೆಳಗಾವಿ, ಬಸವಕಲ್ಯಾಣ, ಮಸ್ಕಿ ಬೈ ಎಲೆಕ್ಷನ್: ಅಭ್ಯರ್ಥಿಗಳ ಪಟ್ಟಿ ಮಾಡಿದ ಕಾಂಗ್ರೆಸ್ 

ಚುನಾವಣೆ ಘೋಷಣೆ ಆದ ಬಳಿಕ ನಾವು ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡುತ್ತೇವೆ. ಯಾರು ಸ್ಪರ್ಧೆ ಮಾಡಬೇಕು ಎನ್ನುವುದು ಹೈಕಮಾಂಡ್ ಗೆ ಬಿಟ್ಟ ವಿಚಾರ. ಪ್ರಕಾಶ ಹುಕ್ಕೇರಿ ಬೆಳಗಾವಿ ಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಆದ್ರೆ, ಅವರದ್ದು ಚಿಕ್ಕೋಡಿ ಲೋಕಸಭೆ ಕ್ಷೇತ್ರ , ಆ ಭಾಗಕ್ಕೆ ಸಿಮೀತವಾಗಿದ್ದಾರೆ. ಬೆಳಗಾವಿ ಲೋಕಸಭೆಗೆ ಮೂರು ನಾಲ್ಕು ಹೆಸರುಗಳಿವೆ. ಯಾವುದು ಇನ್ನೂ ಅಂತಿಮವಾಗಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪ್ರಕಾಶ್ ಹುಕ್ಕೇರಿ ಸ್ಪರ್ಧೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಒಟ್ಟಿನಲ್ಲಿ ಒಳಗಿಂದೊಳಗೆ ಹುಕ್ಕೇರಿ ಹಾಗೂ ಜಾರಕಿಹೊಳಿ ಕಟುಂಬದ ಮಧ್ಯೆ ಶೀತಲ ಸಮರ ಶುರುವಾಗಿದ್ದು, ಟಿಕೆಟ್ ಸಿಗದಿದ್ದರೆ ಪ್ರಕಾಶ್ ಹುಕ್ಕೇರಿ ಬಂಡಾಯವೇಳ್ತಾರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

click me!