BJP Meeting: ಬುಡಕ್ಕೆ ಬರುತ್ತಿದಂತೆಯೇ ಎಸ್ಕೇಪ್ ಆದ್ರಾ ರಮೇಶ್ ಜಾರಕಿಹೊಳಿ?

By Suvarna News  |  First Published Dec 28, 2021, 5:00 PM IST

* ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ
* ಬುಡಕ್ಕೆ ಬರುತ್ತಿದ್ದಂತೆಯೇ ದಿಲ್ಲಿಗೆ ಹಾರಿದ್ರಾ ರಮೇಶ್ ಜಾರಕಿಹೊಳಿ
* ಬೆಳಗಾವಿ ಸೋಲಿನ ಪರಾಮರ್ಶೆಯ ಬಗ್ಗೆ ಸಮಿತಿ ರಚನೆ ಸುದ್ದಿ ಕೇಳ್ತಿದ್ದಂತೆಯೇ ಕಾಲ್ಕಿತ್ತ ಸಾಹುಕಾರ


ಬೆಂಗಳೂರು, (ಡಿ.28): ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಬದಲಾವಣೆ ಮಧ್ಯೆ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ಮಹತ್ವದ ಪಡೆದುಕೊಂಡಿದೆ. ಇಂದಿನಿಂದ (ಡಿ.28) ಎರಡು ದಿನಗಳ ಹುಬ್ಬಳ್ಳಿಯಲ್ಲಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು, ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ನಿರೀಕ್ಷೆಗಳಿವೆ. ಅದರಲ್ಲೂ ಪ್ರಮುಖವಾಗಿ ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ (Belagavi MLC Election) ಬಿಜೆಪಿ ಸೋಲಿನ ಬಗ್ಗೆ ಚರ್ಚೆ ನಡೆಯಲಿದೆ.

MLC Poll Politics: ನನಗೆ ಆದಂಗೆ ರಮೇಶ್ ಜಾರಕಿಹೊಳಿ ಮೇಲೆ ಕ್ರಮ ಏಕಿಲ್ಲ? ಬಿಜೆಪಿ ನಾಯಕ ಪ್ರಶ್ನೆ

Latest Videos

undefined

ಇದರ ಮಧ್ಯೆಯೇ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ(Ramesh Jarkiholi) ಬಿಜೆಪಿ ರಾಜ್ಯ ಕಾರ್ಯಕಾರಿಣಿಗೆ ಗೈರಾಗಿ ದಿಢೀರ್ ದೆಹಲಿಗೆ ಹಾರಿದ್ದಾರೆ. ಸಭೆಯಲ್ಲಿ ಬೆಳಗಾವಿ ಪರಿಷತ್ ಸೋಲಿನ ಬಗ್ಗೆ ಚರ್ಚೆ ಸಾಧ್ಯತೆ ಹಿನ್ನೆಲೆ ಇಂದು(ಮಂಗಳವಾರ) ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ. 

ಮಹಾಂತೇಶ ಕವಟಗಿಮಠ ಸಾಮಾನ್ಯ ನಾಯಕ ಅಲ್ಲ
ಬೆಳಗಾವಿ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲುಕಂಡ ಮಹಾಂತೇಶ ಕವಟಗಿಮಠ ರಾಜ್ಯ ಬಿಜೆಪಿಯ ಪ್ರಮುಖ ನಾಯಕ. ಮಹಾಂತೇಶ್ ದೆಹಲಿ ಬಿಜೆಪಿ ನಾಯಕರು ಮತ್ತು ನಾಗ್ಪುರ ಆರ್ ಎಸ್ ಎಸ ಪ್ರಮುಖರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಯಾವ ಮಟ್ಟಿಗೆ ಅಂದ್ರೆ ಬೆಳಗಾವಿ ಉಪಚುನಾವಣೆ ಟಿಕೆಟ್ ಮಹಾಂತೇಶ್ ಕವಟಗಿ ಅವರಿಗೆ ಇತ್ತು. ಅಷ್ಟರ ಮಟ್ಟಿಗೆ ಪ್ರಭಾವಿ ನಾಯಕರಾಗಿದ್ದಾರೆ. ಅಂತವರನ್ನೇ  ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತಿರುವುದು ಹೈಕಮಾಂಡ್‌ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ.

 ರಮೇಶ್ ಜಾರಕಿಹೊಳಿ ತಮ್ಮ ವೈಯಕ್ತಿಕ ಶಕ್ತಿ ಪ್ರದರ್ಶನಕ್ಕೆ ಹೋಗಿ ಸುಲಭವಾಗಿ ಗೆಲ್ಲಬಹುದಿದ್ದ ಬಿಜೆಪಿಯನ್ನು ಸೋಲಿಸಿದ್ರು ಎನ್ನುವ ಮಾತುಗಳು ಕೇಳಿರುಬತ್ತಿವೆ. ಅಲ್ಲದೇ ಅವರ ವಿರುದ್ಧ ಶಿಸ್ತುಕ್ರಮ ಆಗ್ಬೇಕು ಎನ್ನುವ ಆಗ್ರಹ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕಾರಣಿಯಲ್ಲಿ  ಇದಕ್ಕೆ ಒಂದು ಗತಿ ಕಾಣಿಸಬೇಕೆಂದು ತೀರ್ಮಾನಿಸಲಾಗಿದೆ. ಆದ್ರೆ, ಮೇನ್ ಪಾತ್ರದಾರಿ ರಮೇಶ್ ಜಾರಕಿಹೊಳಿಯೇ ಎಸ್ಕೇಪ್ ಆಗಿದ್ದಾರೆ.

Belagavi MLC Result:ಸ್ವಪ್ರತಿಷ್ಠೆಗಾಗಿ ಬಿಜೆಪಿಯನ್ನೇ ಸೋಲಿಸಿದ್ರಾ ರಮೇಶ್ ಜಾರಕಿಹೊಳಿ?

ತಪ್ಪಿಸಿಕೊಂಡು ಹೋದ್ರಾ ಜಾರಕಿಹೊಳಿ?
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಕಾರ್ಯಕಾರಣಿ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆಯಾಗಲಿದೆ. ಅಲ್ಲದೇ ರಮೇಶ್ ಜಾರಕಿಹೊಳಿ ಅವರ ಬುಡಕ್ಕೆ ಬರಲಿದೆ. ಇದನ್ನ ತಿಳಿದೇ ಸಾಹುಕಾರ ದಿಲ್ಲಿಗೆ ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಇಷ್ಟು ದಿನ ಬಿಟ್ಟು ಕಾರ್ಯಕರಣೆ ಸಭೆ ನಡೆಯುತ್ತಿರುವಾಗಲೇ ದಿಲ್ಲಿಗೆ ಹೋಗಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಸೋಲಿನ ಪರಾಮರ್ಶೆಯ ಬಗ್ಗೆ ಸಮಿತಿ ರಚಿಸುವುದಾಗಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ ಹೇಳ್ತಿದ್ದಂತೆ ರಾಜ್ಯ ಉಸ್ತುವಾರಿ ಆಗಮಿಸಿದ್ರೂ ಭೇಟಿ ಆಗದ ಶಾಸಕ ರಮೇಶ್‌ ನವದೆಹಲಿಗೆ ತೆರಳಿದ್ದಾರೆ. ನವದೆಹಲಿಯಲ್ಲಿ ಬಿಜೆಪಿ ವರಿಷ್ಠರನ್ನ ಭೇಟಿಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಬಿಜೆಪಿ ನಾಯಕರ ಪ್ರಶ್ನೆ
ಬೆಳಗಾವಿಯಲ್ಲಿ ಬಿಜೆಪಿ ಅಧಿಕೃತ ಅಭ್ಯರ್ಥಿಯ ವಿರುದ್ಧ ಸೋದರರನ್ನು ಪಕ್ಷೇತರವಾಗಿ ನಿಲ್ಲಿಸಿ ಗೆಲ್ಲಿಸಿದ ಮಾಜಿ ಸಚಿವ ರಮೇಶ ಜಾರಕಿಹೊಳಿಗೆ(Ramesh Jarkiholi) ಇಲ್ಲದ ಶಿಕ್ಷೆ ನನಗೇಕೆ ? ಎಂದು ಧಾರವಾಡ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದಿಂದ ಅಮಾನತುಗೊಂಡಿರುವ ಮಲ್ಲಿಕಾರ್ಜುನ ಹಾವೇರಿ(Mallikarjun Haveri) ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ಇನ್ನು ಮತ್ತೋರ್ವ ಬಿಜೆಪಿ ನಾಯಕ ಎ ಮಂಜು ಅವರ ಪುತ್ರ ಕಾಂಗ್ರೆಸ್‌ನಿಂದ ಕೊಡುಗು ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇದರಿಂದ ಎ. ಮಂಜು ಅವರ ನೀಡಲಾಗಿದ್ದ ಪಕ್ಷದ ಎಲ್ಲಾ ಜವಾಬ್ದಾರಿಗಳನ್ನ ಹಿಂಪಡೆಯಲಾಗಿದೆ. ಇದಕ್ಕೆ ಮಂಜು ಪ್ರತಿಕ್ರಿಯಿಸಿ ರಮೇಶ್ ಜಾರಕಿಹೊಳಿ ವಿರುದ್ಧ ಏಕೆ ಕ್ರಮವಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮವಾಗುತ್ತಾ?
ಪ್ರಭಾವಿ ನಾಯಕ ಸೋಲಿಗೆ ರಮೇಶ್ ಜಾರಕಿಹೊಳಿ ಕಾರಣ ಎಂದು ಪಕ್ಷದ ವಲಯದಲ್ಲಿ ಚರ್ಚೆಯಾಗುತ್ತಿದೆ. ದಿರಿಂದ ಮಾಸ್ ಲೀಡರ್ ಎಂದೇ ಬಿಂಬಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಮೇಲೆ ಬಿಜೆಪಿ ಹೈಕಮಾಂಡ್ ಶಿಸ್ತು ಕ್ರಮ ಕೈಗೊಳ್ಳುತ್ತಾ? ಅಶಿಸ್ತನ್ನು ಸಹಿಸದ ಬಿಜೆಪಿ ಪ್ರಭಾವಿ ನಾಯಕನ ಎದುರು ಹಾಕಿಕೊಳ್ಳುತ್ತಾ? ಎನ್ನುವುದನ್ನು ಕಾದುನೋಡಬೇಕಿದೆ.

click me!