ಸಿದ್ದರಾಮಯ್ಯನವರ ಸರ್ಕಾರ ಬಹಳ ತಪ್ಪು ಮಾಡಿದೆ. ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರು ಸರ್ಕಾರ ನಡೆಸುವಂತವರು. ಫೇಲ್ಯುವರ್ ಆದಾಗ ಹೈಕೋರ್ಟ್‌ನಿಂದ ಕಪಾಳ ಮೋಕ್ಷ ಆಗಿದೆ. ಸರ್ಕಾರ ನಡೆಸುವಂತಹ ಕಾಂಗ್ರೆಸ್ಸಿನ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ: ಸಂಸದ ಜಗದೀಶ ಶೆಟ್ಟರ್
ಗುಳೇದಗುಡ್ಡ(ಡಿ.24): ಮುಡಾ ಹಗರಣ ಮತ್ತು ವಾಲ್ಮೀಕಿ ಸ್ಕ್ಯಾಮ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ರಾಜೀನಾಮೆ ಕೊಡಬೇಕಾಗಿತ್ತು. ಆದರೆ ಇವತ್ತಿಲ್ಲ ನಾಳೆ ಸಿದ್ಧರಾಮಯ್ಯ ರಾಜೀನಾಮೆ ಕೊಡಲೇ ಬೇಕಾಗುತ್ತದೆ. ಆದರೆ ಅವುಗಳನ್ನು ಮರೆಮಾಚಲು, ಆ ವಿಷಯಗಳನ್ನು ಜನರಿಂದ ಡೈವರ್ಷನ್ (ಗಮನ ಬೇರೆಡೆ ಸೆಳೆಯಲು) ಮಾಡಲು ಈ ರೀತಿ ಸಿ.ಟಿ.ರವಿ ಅವರನ್ನು ಅರೆಸ್ಟ್ ಮಾಡುವುದು, ಬಿಜೆಪಿ ಲೀಡರ್ಸ್‌ಗಳ ಮೇಲೆ ಕೇಸ್ ಹಾಕೋದನ್ನ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್ ಗಂಭೀರ ಆರೋಪ ಮಾಡಿದರು.
ಪಟ್ಟಣದಲ್ಲಿ ಸೋಮವಾರ ಗುಳೇದಗುಡ್ಡದ ಗುರುಸಿದ್ದೇಶ್ವರ ಬೃಹನ್ಮಠದ ಗುರುಬಸವ ದೇವರ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ರಾಜಕೀಯ ಹುನ್ನಾರ. ವಿರೋಧ ಪಕ್ಷದವರನ್ನು ಹಣಿಯುವುದೇ ಕಾಂಗ್ರೆಸ್ ಕೆಲಸವಾಗಿದೆ. ಆದರೆ ಇವತ್ತಿಲ್ಲ ನಾಳೆ ಸಿದ್ಧರಾಮಯ್ಯ ರಾಜೀನಾಮೆ ಕೊಡಲೇ ಬೇಕಾಗುತ್ತದೆ ಎಂದು ಭವಿಷ್ಯ ನುಡಿದರು.
undefined
ಕರ್ನಾಟಕದಲ್ಲಿರುವುದು ಷಂಡ ಸರ್ಕಾರ: ಜಗದೀಶ ಶೆಟ್ಟರ್
ಸಿ.ಟಿ.ರವಿ ಅವರ ಬಂಧನದ ವಿಷಯವಾಗಿ ಸಭಾಪತಿ ಹೊರಟ್ಟಿ ಅವರೇ ಹೇಳಿದ್ದಾರೆ. ಯಾವುದೂ ದಾಖಲೆ ಆಗಿಲ್ಲ ಅಂತ. ವಿಧಾನ ಮಂಡಲದಲ್ಲಿ ನಡೆದಂತಹ ಘಟನೆಗಳು ಅದರ ಸುಪರ್ದಿಯಲ್ಲಿ ಬರುವಂತಹ ವಿಚಾರಗಳಿವು. ಆದರೆ, ಕಾಂಗ್ರೆಸ್ ಸರ್ಕಾರ ಈ ಪ್ರಕರಣದಿಂದ ಎಲ್ಲೋ ಒಂದು ಕಡೆ ಹಾದಿ ತಪ್ಪಿದೆ. ಕಾನೂನು ಮಂತ್ರಿಗಳು ಅವರನ್ನು ಕರೆಯಿಸಿ ಅವರ ತಪ್ಪುಗಳಿಗೆ ಸ್ಥಳದಲ್ಲಿ ತಿಳಿಹೇಳಬೇಕಿತ್ತು ಎಂದು ವಿವರಿಸಿದರು.
ಈ ಹಿಂದೆ ಸದನದಲ್ಲಿ ಇಂತಹ ಘಟನಾವಳಿಗಳು ಸಾಕಷ್ಟಾಗಿವೆ. ಒಬ್ಬರು ಮತ್ತೊಬ್ಬರ ಮೇಲೆ ಟೀಕೆ, ಸಂಘರ್ಷ ಎಲ್ಲವೂ ನಡೆದಿವೆ. ಅವುಗಳನ್ನು ನಾವು ಸದನದಲ್ಲಿಯೇ ಇತ್ಯರ್ಥ ಮಾಡಿದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಇರಬಹುದು, ಅಥವಾ ಸಭಾಪತಿ ಆಗಿದ್ದಾಗಲೂ ಇರಬಹುದು. ಆದರೆ ಈ ರೀತಿ ಬಹಿರಂಗವಾಗಿ ಇಡೀ ಸಮಾಜಕ್ಕೆ ತಪ್ಪು ಮಾಹಿತಿ ನೀಡುವ ಕೆಲಸ ಮಾಡಲಿಲ್ಲ. ಅದನ್ನು ಕಾಂಗ್ರೆಸ್ ಸರ್ಕಾರ ಇಂದು ಮಾಡಿದೆ ಎಂದು ದೂರಿದರ
ಕಾಂಗ್ರೆಸ್ ಪಾರ್ಟಿ ಎಲ್ಲೋ ಒಂದು ಕಡೆ ಎಡವಿದೆ. ಬಿಜೆಪಿ ಲೀಡರ್ಸ್‌ಗಳನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ಯಾರೋ ಒಬ್ಬರ ಸೆಲ್ಫ್ ಇಂಟ್ರಸ್ಟಿಂದ, ವೈಯಕ್ತಿಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಸಿ.ಟಿ.ರವಿ ಅವರ ಬಂಧನ ಕಾರ್ಯ ನಡೆದಿದೆ. ಬಂಧನ ಮಾಡುವಂತಹ ಅವಶ್ಯಕತೆಯೇ ಇರಲಿಲ್ಲ. ಇದು ಕಾನೂನು ಬಾಹಿರ ಅಂತ ಗೊತ್ತಾದ ಬಳಿಕ ಹೈಕೋರ್ಟ್ ಅವರನ್ನು ಬಿಡುಗಡೆ ಮಾಡಲು ಆದೇಶ ಮಾಡಿತು. ಸಿದ್ದರಾಮಯ್ಯನವರ ಸರ್ಕಾರ ಬಹಳ ತಪ್ಪು ಮಾಡಿದೆ. ಸಿದ್ದರಾಮಯ್ಯನವರು ಮತ್ತು ಡಿ.ಕೆ.ಶಿವಕುಮಾರ ಅವರು ಸರ್ಕಾರ ನಡೆಸುವಂತವರು. ಫೇಲ್ಯುವರ್ ಆದಾಗ ಹೈಕೋರ್ಟ್‌ನಿಂದ ಕಪಾಳ ಮೋಕ್ಷ ಆಗಿದೆ. ಸರ್ಕಾರ ನಡೆಸುವಂತಹ ಕಾಂಗ್ರೆಸ್ಸಿನ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಅನ್ನಭಾಗ್ಯ ನಡೆಸಲು ಆಗದೆ ಬಿಪಿಎಲ್ ಕಾರ್ಡ್ ರದ್ದು: ಜಗದೀಶ ಶೆಟ್ಟರ್
ಗೃಹ ಮಂತ್ರಿಗಳು ಹೇಳುತ್ತಾರೆ ರಾತ್ರಿ ನಡೆದಿದ್ದು ನನಗೇನೂ ಗೊತ್ತಿಲ್ಲ ಅಂತ. ಅಂದಮೇಲೆ ಹೋಂ ಮಿನಿಸ್ಟರ್ ಅವರ ಗಮನಕ್ಕೆ ತರದೆಯೇ ಈ ಬಂಧನದ ಪ್ರಹಸನ ನಡೆದಿದೆ ಅಂದರೆ, ಸ್ಥಳೀಯ ಮಂತ್ರಿ ಅಥವಾ ರಾಜ್ಯದಲ್ಲಿರುವ ಹಿರಿಯ ಮಂತ್ರಿಗಳ ಕುಮ್ಮಕ್ಕಿನಿಂದ ಇದೆಲ್ಲ ನಡೆದಿದೆ ಎಂದು ನನಗೆ ಅನ್ನಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಮಾಜಿ ಶಾಸಕ ರಾಜಶೇಖರ ಶೀಲವಂತ ಹಾಗೂ ಇತರ ಮುಖಂಡರು ಇದ್ದರು.
ಕಾಂಗ್ರೆಸ್ ಪಾರ್ಟಿ ಎಲ್ಲೋ ಒಂದು ಕಡೆ ಎಡವಿದೆ. ಬಿಜೆಪಿ ಲೀಡರ್ಸ್‌ಗಳನ್ನು ಗುರಿಯಾಗಿಸಿಕೊಂಡು ಈ ಕೆಲಸ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ಯಾರೋ ಒಬ್ಬರ ಸೆಲ್ಫ್ ಇಂಟ್ರಸ್ಟಿಂದ, ವೈಯಕ್ತಿಕ ಹಿತಾಸಕ್ತಿ ಕಾಪಾಡುವ ದೃಷ್ಟಿಯಿಂದ ಸಿ.ಟಿ.ರವಿ ಅವರ ಬಂಧನ ಕಾರ್ಯ ನಡೆದಿದೆ. ಬಂಧನ ಮಾಡುವಂತಹ ಅವಶ್ಯಕತೆಯೇ ಇರಲಿಲ್ಲ ಎಂದು ಮಾಜಿ ಸಿಎಂ, ಸಂಸದ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.