
ಮೂರು ಬಾರಿ ಶಾಸಕರಾಗಿದ್ದ ಬಾಬಾ ಸಿದ್ದಿಕಿ ಅವರ ಹೈ ಪ್ರೊಫೈಲ್ ಕೊಲೆ ಸಂಚಲನ ಮೂಡಿಸಿದೆ. ಮೂವರು ಶೂಟರ್‌ಗಳ ಪೈಕಿ ಇಬ್ಬರು ಸಿಕ್ಕಿಬಿದ್ದಿದ್ದು, ಮೂರನೇ ಆರೋಪಿ ಶಿವ ಇನ್ನೂ ತಲೆಮರೆಸಿಕೊಂಡಿದ್ದಾನೆ. ಆದರೆ ಈ ಕೃತ್ಯ ನಡೆಯುವ ಸರಿಯಾಗಿ 80 ದಿನಗಳ ಮೊದಲು, ತನ್ನನ್ನು ತಾನು ದರೋಡೆಕೋರ ಎಂದು ಬರೆದುಕೊಂಡಿದ್ದ ಶಿವ, ರಾಜಕಾರಣಿಯೊಬ್ಬರನ್ನು ಕೊಲೆ ಮಾಡುವ ಸೂಚನೆಯನ್ನೂ ಕೊಟ್ಟಿದ್ದ. ಇನ್ಸ್ಟಾಗ್ರಾಮ್ನಲ್ಲಿ ಶಿವ, ಯಾರ್ ತೇರಾ ಗ್ಯಾಂಗ್‌ಸ್ಟರ್ ಹೈ ಜಾನಿ ಎನ್ನುವ ಮೂಲಕ ತಾನೊಬ್ಬ ದರೋಡೆಕೋರ ಎಂಬ ಅರ್ಥದಲ್ಲಿ ಬರೆದುಕೊಂಡಿದ್ದ. ಮಾತ್ರವಲ್ಲದೇ, ನಮ್ಮ ಟಾರ್ಗೆಟ್ ನಾಯಕನೂ ಅಲ್ಲ, ಶಾಸಕನೂ ಅಲ್ಲ, ಮಜ್ನು ನಮ್ಮ ವಿಲನ್... ಎಂದು ಹೇಳಿದ್ದ. ಇದಾದ ಬಳಿಕ ಇನ್ನೋರ್ವ ಆರೋಪಿ ಬಾಬಾ ಸಿದ್ದಿಕಿ ಹತ್ಯೆಯ ಉದ್ದೇಶ ನಮ್ಮದಲ್ಲ, ಅವರಿಗೂ ನಮಗೂ ಶತ್ರುತ್ವ ಇಲ್ಲ. ಆದರೆ ಸಲ್ಮಾನ್ ಖಾನ್ ಮತ್ತು ಅಂಡರ್ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಜೊತೆ ನಿಕಟ ಸಂಪರ್ಕ ಹೊಂದಿದ್ದ ಕಾರಣ ಹತ್ಯೆ ಮಾಡಲಾಗುವುದು ಎಂದೂ ಹೇಳಿದ್ದ!
ಇನ್ನು, ಶಿವಕುಮಾರ್ ಕುರಿತು ಹೇಳುವುದಾದರೆ, ಈಗ ಬಹ್ರೈಚ್ ನಿವಾಸಿ, ಇನ್ನೋರ್ವ ಆರೋಪಿ ಕೈಸರ್‌ಗಂಜ್ ಪೊಲೀಸ್ ಠಾಣೆಯ ಗಂದಾರಾ ಗ್ರಾಮದ ಧರ್ಮರಾಜ್ ಹಾಗೂ ಮತ್ತೋರ್ವ ಹರಿಯಾಣದ ಗುರ್‌ಮೈಲ್ ಬಲ್ಜಿತ್ ಸಿಂಗ್. ಶಿವ ಇನ್ನೂ ತಲೆಮರೆಸಿಕೊಂಡಿದ್ದು, ಇನ್ನಿಬ್ಬರನ್ನು ಬಂಧಿಸಲಾಗಿದೆ. ಶಿವ ಮತ್ತು ಧರ್ಮರಾಜ್ ಗ್ರಾಮದ ಬಡ ಕುಟುಂಬದಿಂದ ಬಂದವರಾಗಿದ್ದು, ಕೂಲಿ ಕೆಲಸ ಮಾಡಿ ಹಣ ಸಂಪಾದಿಸಲು ಪುಣೆಗೆ ಹೋಗಿದ್ದರು. ಕುಟುಂಬದ ಸದಸ್ಯರಿಂದ ಹಿಡಿದು ಬಂಧು ಮಿತ್ರರಿಗೂ ಶಿವನ ಕೃತ್ಯದ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ಇನ್ಸ್ಟಾಗ್ರಾಮ್ನಲ್ಲಿ ಆಗಾಗ್ಗೆ ಗ್ಯಾಂಗ್‌ಸ್ಟರ್ ಆಗಿ ಪೋಸ್ ಕೊಡುತ್ತಿದ್ದರು. ಅದರಲ್ಲಿಯೂ ಶಿವ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಆಗಿದ್ದ.
ಸಿನಿಮಾದಲ್ಲಿ ತೋರಿಸೋ ಗ್ಯಾಂಗ್‌ಸ್ಟರ್ ಪಾತ್ರದಿಂದಲೂ ಶಿವ ತುಂಬಾ ಇಂಪ್ರೆಸ್ ಆಗಿದ್ದ ಎನ್ನಿಸುತ್ತದೆ. ಆತನ ಒಂದು ಪೋಸ್ಟ್‌ನಲ್ಲಿ, ಅಜಯ್ ದೇವಗನ್ ಮತ್ತು ಇಮ್ರಾನ್ ಹಶ್ಮಿ ಅವರ ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ ಚಿತ್ರದ ಡೈಲಾಗ್ ಅನ್ನು ಪೋಸ್ಟ್ ಮಾಡಿದ್ದ. ಈ ವಯಸ್ಸು ಸುಧಾರಿಸುವ ಬಗ್ಗೆ ಅಲ್ಲ, ಅದು ಕೆಟ್ಟದಾಗುತ್ತಿದೆ. ಸಮಸ್ಯೆಯೆಂದರೆ ನಾನು ಇನ್ನೂ ಸರಿಯಾಗಿ ಹಾಳಾಗಿಲ್ಲ. ಮಾತ್ರವಲ್ಲದೇ ಕೆಜಿಎಫ್: 2 ಚಿತ್ರದ ಡೈಲಾಗ್ ಅನ್ನು ಉಲ್ಲೇಖಿಸಿ ಬಾಲ್ಕನಿಯಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ... ಶಕ್ತಿಯುತ ಜನರು ಸ್ಥಳಗಳನ್ನು ಶಕ್ತಿಯುತವಾಗಿಸುತ್ತಾರೆ ಎಂದು ಡೈಲಾಗ್ ಬರೆದಿದ್ದ.
ಗ್ರಾಮದ ಶಿವನ ತಾಯಿಯ ಪ್ರಕಾರ, ಆತ ಏಪ್ರಿಲ್ 2024 ರಲ್ಲಿ ಪುಣೆಯ ಸ್ಕ್ರ್ಯಾಪ್ ಯಾರ್ಡ್‌ನಲ್ಲಿ ಕೆಲಸಕ್ಕೆ ಹೋಗಿದ್ದ, Instagram ನಲ್ಲಿನ ಪೋಸ್ಟ್‌ನಲ್ಲಿ, ಆತ ಗೋದಾಮಿನಲ್ಲಿ ಆನ್‌ಲೈನ್ ಆರ್ಡರ್‌ಗಳನ್ನು ಪ್ಯಾಕಿಂಗ್ ಮತ್ತು ಶಿಪ್ಪಿಂಗ್ ಮಾಡುವಲ್ಲಿ ನಿರತ ಎನ್ನುವುದನ್ನು ತೋರಿಸುತ್ತದೆ. ಈ ಘಟನೆಯಲ್ಲಿ ಆತನ ಗ್ರಾಮದ ಧರ್ಮರಾಜ್ ಜತೆಗಿದ್ದ. ಕಳೆದ ಶನಿವಾರ ರಾತ್ರಿ 9.30ಕ್ಕೆ ದಾಳಿಕೋರರು ಬಾಬಾ ಸಿದ್ದಿಕಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಬಿಗ್ಬಾಸ್ಗೆ ಸುದೀಪ್ ಗುಡ್ಬೈ ಹೇಳಲು ಇದೇ ಕಾರಣವಾಯ್ತಾ? ಚರ್ಚೆಗೆ ಗ್ರಾಸವಾಗ್ತಿದೆ ಮಾಜಿ ಸ್ಪರ್ಧಿಯ ಟ್ವೀಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.