ಕಾಂಗ್ರೆಸ್ಸಿಗರೇ, ಫೋನಲ್ಲಿ ಮಾತಾಡುವಾಗ ಎಚ್ಚರ: ಬಿಜೆಪಿಗರು ರೆಕಾರ್ಡ್ ಮಾಡಿಕೊಂಡು ಸಿಕ್ಕಿಸ್ತಾರೆ!

Published : Mar 28, 2023, 12:39 AM IST
ಕಾಂಗ್ರೆಸ್ಸಿಗರೇ, ಫೋನಲ್ಲಿ ಮಾತಾಡುವಾಗ ಎಚ್ಚರ: ಬಿಜೆಪಿಗರು ರೆಕಾರ್ಡ್ ಮಾಡಿಕೊಂಡು ಸಿಕ್ಕಿಸ್ತಾರೆ!

ಸಾರಾಂಶ

‘ಚುನಾವಣೆ ಮುಗಿಯುವವರೆಗೂ ದೂರವಾಣಿಯಲ್ಲಿ ಮಾತನಾಡುವಾಗ ಎಚ್ಚರದಿಂದ ಇರಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುವಾಗ ಹತ್ತು ರೀತಿಯಲ್ಲಿ ಯೋಚಿಸಿ ಹಾಕಿ, ಏಕೆಂದರೆ ಬಿಜೆಪಿಯವರು ನಿಮ್ಮ ಕರೆಗಳನ್ನು ದುರ್ಬಳಕೆ ಮಾಡಿಕೊಳ್ಳಲು, ನಿಮ್ಮ ಮಾತು, ಪೋಸ್ಟ್‌ಗಳಿಂದ ಗೊಂದಲ ಸೃಷ್ಟಿಸಲು ಕಾಯುತ್ತಿರುತ್ತಾರೆ..’

ಬೆಂಗಳೂರು (ಮಾ.28) : ‘ಚುನಾವಣೆ ಮುಗಿಯುವವರೆಗೂ ದೂರವಾಣಿಯಲ್ಲಿ ಮಾತನಾಡುವಾಗ ಎಚ್ಚರದಿಂದ ಇರಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುವಾಗ ಹತ್ತು ರೀತಿಯಲ್ಲಿ ಯೋಚಿಸಿ ಹಾಕಿ, ಏಕೆಂದರೆ ಬಿಜೆಪಿಯವರು ನಿಮ್ಮ ಕರೆಗಳನ್ನು ದುರ್ಬಳಕೆ ಮಾಡಿಕೊಳ್ಳಲು, ನಿಮ್ಮ ಮಾತು, ಪೋಸ್ಟ್‌ಗಳಿಂದ ಗೊಂದಲ ಸೃಷ್ಟಿಸಲು ಕಾಯುತ್ತಿರುತ್ತಾರೆ..’

ಇದು, ರಾಜ್ಯ ವಿಧಾನಸಭೆ ಚುನಾವಣೆ(Karnataka Assembly election)ಗೆ ಭಾನುವಾರವಷ್ಟೇ ಮೊದಲ ಪಟ್ಟಿಪ್ರಕಟಿಸಿರುವ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳಿಗೆ ಬೋಧಿಸಿರುವ ಚುನಾವಣಾ ಪಾಠ. ಪ್ರಚಾರದ ಭರದಲ್ಲಿ ಮೈಮರೆಯಬೇಡಿ. ಬಿಜೆಪಿ(BJP)ಯವರ ಮೋಸದ ತಂತ್ರಗಳಿಗೆ ಬಲಿಯಾಗದಂತೆ ಸಾಕಷ್ಟುಎಚ್ಚರವನ್ನೂ ವಹಿಸಬೇಕಾಗುತ್ತದೆ ಎಂದು ಪಕ್ಷದ ನಾಯಕರು ಅಭ್ಯರ್ಥಿಗಳಿಗೆ ಸಲಹೆ ಹಾಗೂ ಚುನಾವಣಾ ಗೆಲುವಿಗೆ ಬೇಕಾದ ಕೆಲ ಪ್ರತಿತಂತ್ರಗಳ ಬಗ್ಗೆ ತರಬೇತಿ ನೀಡಿದ್ದಾರೆ.

ಮೂರೇ ತಿಂಗಳಲ್ಲಿ ವಿಧಾನಸೌಧದ ಮುಂಭಾಗ ಪ್ರತಿಮೆ ಸ್ಥಾಪಿಸಿ ಅಶೋಕ್ ಸಾಧನೆ

124 ಅಭ್ಯರ್ಥಿಗಳ ಮೊದಲ ಪಟ್ಟಿಬಿಡುಗಡೆ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ಸೋಮವಾರ ನಗರದ ಹೊರವಲಯದ ಖಾಸಗಿ ರೆಸಾರ್ಚ್‌ನಲ್ಲಿ ಅಭ್ಯರ್ಥಿಗಳಿಗೆ ವಿಶೇಷ ತರಗತಿ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ(Randeep singh surjewala), ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar), ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಸೇರಿದಂತೆ ಪಕ್ಷದ ಹಲವು ನಾಯಕರು ಭಾಗವಹಿಸಿ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣಾ ಅಖಾಡ ಎಷ್ಟುಗಂಭೀರವಾಗಿದೆ. ಗೆಲುವಿಗಾಗಿ ಯಾವ ರೀತಿಯ ರಣತಂತ್ರಗಳನ್ನು ರೂಪಿಸಬೇಕಾಗುತ್ತದೆ. ಬಿಜೆಪಿಯವರ ಭಷ್ಟಾಚಾರ, ಆಡಳಿತ ವೈಪಲ್ಯಗಳನ್ನು ಜನರ ಮುಂದಿಡುವ ಜತೆಗೆ ಕಾಂಗ್ರೆಸ್‌ನ ಎಲ್ಲ ಗ್ಯಾರಂಟಿ ಯೋಜನೆಗಳ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಎಂದು ಸಲಹೆ ನೀಡಿದರು.

ಇದರ ಜತೆಗೆ ನೀವು ಎಷ್ಟೇ ಪ್ರಚಾರ, ತಂತ್ರಗಾರಿಕೆ ನಡೆಸಿದರೂ ಬಿಜೆಪಿಯವರು ಹೆಣೆಯಬಹುದಾದ ಮೋಸದ ಜಾಲಕ್ಕೆ ಬಿದ್ದರೆ ಎಲ್ಲ ಪ್ರಯತ್ನವೂ ವ್ಯರ್ಥವಾಗುತ್ತದೆ. ಹಾಗಾಗಿ ದೂರವಾಣಿಯಲ್ಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕು. ಯಾರೊಂದಿಗೆ ಮಾತನಾಡುತ್ತಿದ್ದೇವೆ, ಎಷ್ಟುಮಾತನಾಡಬೇಕು, ಯಾವ ವಿಚಾರಗಳನ್ನು ಎಷ್ಟುಇತಿ ಮಿತಿಯಲ್ಲಿ ಮಾತನಾಡಬೇಕು ಎಂಬುದು ಗಮನದಲ್ಲಿರಲಿ. ಬಿಜೆಪಿಯವರು ನಿಮ್ಮ ಕರೆಗಳನ್ನು ರೆಕಾರ್ಡ್‌ ಮಾಡಿಸಿ ಬಹಿರಂಗಪಡಿಸುವ, ಸುಳ್ಳು ಸುದ್ದಿ ಹಬ್ಬಿಸುವ ಸಾಧ್ಯತೆಗಳಿರುತ್ತವೆ. ಅದೇ ರೀತಿ ಚುನಾವಣೆ ವೇಳೆ ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ ಬಳಸಿಕೊಳ್ಳಿ. ಆದರೆ, ಪ್ರತಿ ಪೋಸ್ಟ್‌ಗಳನ್ನು ಹಾಕುವಾಗಲೂ ಎಲ್ಲ ವಿಧದಲ್ಲೂ ಯೋಚಿಸಿ ಪೋಸ್ಟ್‌ ಮಾಡಿ. ಎಚ್ಚರ ತಪ್ಪಿದರೆ ಅವುಗಳನ್ನೇ ದುರ್ಬಳಕೆ ಮಾಡಿ ಗೊಂದಲ ಸೃಷ್ಟಿಸುತ್ತಾರೆ ಎಂದು ನಾಯಕರು ಕಿವಿಮಾತು ಹೇಳಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌ ಗೆದ್ದರೆ ಮತ್ತೆ ಮುಸ್ಲಿಂ ಮೀಸಲು: ಡಿ.ಕೆ.ಶಿವಕುಮಾರ್‌

ಅದೇ ರೀತಿ ತಮ್ಮ ಕ್ಷೇತ್ರದಲ್ಲಿ ಮುಖಂಡರು, ಕಾರ್ಯಕರ್ತರ ನಡುವೆ ಅಸಮಾಧಾನ, ಜಗಳ ಉಂಟಾದರೆ ಕೂಡಲೇ ಶಮತನಗೊಳಿಸಿ. ದೊಡ್ಡದಾಗಲು ಬಿಡಬೇಡಿ. ಇಲ್ಲದಿದ್ದರೆ ಬಿಜೆಪಿಯವರು ಇದರ ಲಾಭ ಪಡೆಯುತ್ತಾರೆ ಎಂದು ಕೂಡ ನಾಯಕರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ