ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರಿಂದ ಗೆಲುವಿನ ಅಂತರ ಜಾಸ್ತಿ: ಹೊರಟ್ಟಿ

By Kannadaprabha News  |  First Published Jun 11, 2022, 6:16 AM IST

*  ಕಳೆದ 42 ವರ್ಷಗಳಿಂದ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ
*  ಶಿಕ್ಷಕರ ಒಳಿತಿಗಾಗಿ ನಿರಂತರ ಹೋರಾಟ ಮಾಡಿದ್ದೇನೆ
*  ಒಬ್ಬ ಶಿಕ್ಷಕನಿಂದ ಲಂಚ ಪಡೆದಿದ್ದೇನೆ ಎಂದು ಹೇಳಿದರೆ ಚುನಾವಣಾ ಕಣದಿಂದಲೇ ಹಿಂದೆ ಸರಿಯುತ್ತೇನೆ 


ಧಾರವಾಡ(ಜೂ.11): ಆರ್ಥಿಕ ಹೊರೆ ಹಿನ್ನೆಲೆಯಲ್ಲಿ ಅತಿಥಿ ಶಿಕ್ಷಕರಿಗೆ ಕಾಲ್ಪನಿಕ ವೇತನ ನೀಡಲು ಸಾಧ್ಯವಿಲ್ಲವೆಂದು ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ತಿರಸ್ಕರಿಸಿತ್ತು. ಆದರೆ, ಈಗ ಕಾಂಗ್ರೆಸ್‌ ಅಭ್ಯರ್ಥಿಯೇ ಕಾಲ್ಪನಿಕ ವೇತನ ಕೊಡಿಸಲು ಬದ್ಧ ಎಂದು ಪ್ರಚಾರದಲ್ಲಿ ಹೇಳುತ್ತಿರುವುದು ರಾಜಕೀಯ ಗಿಮಿಕ್‌ ಅಲ್ಲವೇ? ಎಂದು ಬಸವರಾಜ ಹೊರಟ್ಟಿ ಕೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 42 ವರ್ಷಗಳಿಂದ ಶಿಕ್ಷಕರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದೇನೆ. ಶಿಕ್ಷಕರ ಒಳಿತಿಗಾಗಿ ನಿರಂತರ ಹೋರಾಟ ಮಾಡಿದ್ದೇನೆ. ಒಬ್ಬ ಶಿಕ್ಷಕನಿಂದ ಲಂಚ ಪಡೆದಿದ್ದೇನೆ ಎಂದು ಹೇಳಿದರೆ ಚುನಾವಣಾ ಕಣದಿಂದಲೇ ಹಿಂದೆ ಸರಿಯುತ್ತೇನೆ ಎಂದು ಹೊರಟ್ಟಿಸವಾಲು ಹಾಕಿದರು.

Latest Videos

undefined

ಇತಿಹಾಸ ತಿರುಚಲು ಹೋಗಿ ಪಠ್ಯಪುಸ್ತಕದಲ್ಲಿ ಅವಾಂತರ: ಖಂಡ್ರೆ

ಪಶ್ಚಿಮ ಶಿಕ್ಷಣ ಮತಕ್ಷೇತ್ರದ ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಶಿಕ್ಷಕರಿಂದ ಅಭೂತಪೂರ್ವ ಬೆಂಬಲ ಲಭಿಸಿದೆ. ಶಿಕ್ಷಕರ ಬೆಂಬಲದಿಂದ ನನ್ನ ಆತ್ಮವಿಶ್ವಾಸ ಹೆಚ್ಚಿದೆ. ತಂಡಗಳನ್ನು ಮಾಡಿ ಮತಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಶಿಕ್ಷಕರ ಸಂಘದ ಪ್ರತಿನಿಧಿಗಳು ಸಮನ್ವಯದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದ ಅವರು, 2010ರ ಚುನಾವಣೆ ಹೊರತುಡಿಸಿದರೆ ಉಳಿದ ಆರು ಚುಣಾವಣೆಯಲ್ಲಿ ಮೊದಲ ಸುತ್ತಿನಲ್ಲೆ ಗೆಲುವು ಸಾಧಿಸಿದ್ದೇನೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಬಿಜೆಪಿಯ ಮಾ. ನಾಗರಾಜ ಅವರನ್ನು 3000ಕ್ಕೂ ಅಧಿಕ ಮತಗಳ ಅಂತರದಿಂದ ಪರಾವಭಗೊಳಿಸಿದ್ದೇನೆ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವುದರಿಂದ ಗೆಲುವಿನ ಅಂತರ ಹೆಚ್ಚುವ ವಿಶ್ವಾಸವಿದೆ ಎಂದರು.

ಪ್ರತ್ಯೇಕ ಲಿಂಗಾಯತ ಧರ್ಮ ಹಾಗೂ ಸರ್ವೋದಯ ಶಿಕ್ಷಣ ಟ್ರಸ್ಟ್‌ನ ವಿಷಯಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವುದರಿಂದ ಈ ಕುರಿತು ಮಾತನಾಡುವುದು ನ್ಯಾಯಾಂಗ ನಿಂದನೆ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಸೇರುವ ಮುನ್ನ ಅಲ್ಪಸಂಖ್ಯಾತ ಶಿಕ್ಷಕರ ಸಲಹೆ ಪಡೆದುಕೊಂಡಿದ್ದೇನೆ. ನೀವು ಎಲ್ಲಿದ್ದರೂ ನಾವು ನಿಮ್ಮೊಂದಿಗೆ ಇರುತ್ತೇವೆ ಎಂದು ಭರವಸೆ ನೀಡಿದ ಬಳಿಕ ಬಿಜೆಪಿ ಸೇರಿದ್ದೇನೆ. ಅಲ್ಪಸಂಖ್ಯಾತ ಶಿಕ್ಷಕರು ನನ್ನ ವಿರುದ್ಧ ಇದ್ದಾರೆ ಎಂಬುದು ಸತ್ಯಕ್ಕೆ ದೂರ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಮತಗಳಿಲ್ಲ. ಏಳು ಬಾರಿ ನನ್ನ ವೈಯಕ್ತಿಕ ವರ್ಚಸ್ಸಿನಿಂದಲೇ ಜಯಗಳಿಸಿದ್ದೇನೆ ಎಂದು ಹೊರಟ್ಟಿ ಹೇಳಿದರು.

ಮಸೀದಿ ಧ್ವನಿವರ್ಧಕ: ಸಿಎಂ ಬೊಮ್ಮಾಯಿ ಯುಪಿ ಸಿಎಂರಂತೆ ಧೈರ್ಯ ತೋರಲಿ, ಮುತಾಲಿಕ್‌

ಸುದ್ದಿಗೋಷ್ಠಿಯಲ್ಲಿ ಮಹಾಪೌರ ಈರೇಶ ಅಂಚಟಗೇರಿ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಿಕ್ಷಕ ಮುಖಂಡರಾದ ಜಿ.ಆರ್‌. ಭಟ್‌, ಶಾಮ್‌ ಮಲ್ಲನಗೌಡರ ಇದ್ದರು.
ಪಠ್ಯಕ್ರಮದಲ್ಲಿ ಯಾರೂ ರಾಜಕಾರಣ ಮಾಡಬಾರದು. ಅದನ್ನು ಶಿಕ್ಷಣ ಇಲಾಖೆಗೆ ಬಿಡಬೇಕು. ಬಸವಣ್ಣನವರ ವಿಷಯ ಬಂದಾಗ ಅಪಪ್ರಚಾರ ಆಗಬಾರದು ಎಂಬುದು ಮಾತ್ರ ನನ್ನ ನಿಲುವು. ಬೇರೆ ದೇಶಗಳಲ್ಲಿ ಸರ್ಕಾರಗಳು ಬದಲಾದರೂ ಶಿಕ್ಷಣ ನೀತಿ ಬದಲಾಗೋದಿಲ್ಲ. ಆದರೆ, ನಮ್ಮಲ್ಲಿ ಬೇರೆ ಬೇರೆ ಸರ್ಕಾರ, ಮಂತ್ರಿ ಬಂದಾಗ ಬದಲಾಗುತ್ತಿದೆ. ಚುನಾವಣೆ ಮುಗಿದ ಬಳಿಕ ಈಗಿನ ಪಠ್ಯದ ಬಗ್ಗೆ ಅಧ್ಯಯನ ಮಾತನಾಡುತ್ತೇನೆ ಅಂತ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ. 

ಸಿದ್ದರಾಮಯ್ಯಗೆ ವಯಸ್ಸಾಗಿಲ್ಲವೇ?

ಸಿದ್ದರಾಮಯ್ಯ ನನಗಿಂತ ಒಂದು ವರ್ಷ ದೊಡ್ಡವರು. ಅವರಿಗೆ ಮೂರು ಮಕ್ಕಳಿದ್ದಾರೆ. ಹೀಗಾಗಿ ಒಬ್ಬರ ಕಣ್ಣಲ್ಲಿ ಬೊಟ್ಟು ಹಾಕಲು ಹೋದವರು ತಮ್ಮ ಕಣ್ಣುಗಳನ್ನು ನೋಡಿಕೊಳ್ಳಬೇಕು ಎಂದರು. ಜತೆಗೆ ರಾತ್ರಿ ಕಂಡ ಬಾವಿಗೆ ಹೊರಟ್ಟಿ ಹಗಲು ಬಿದ್ದರು ಎಂಬ ಸಿದ್ದರಾಮಯ್ಯನವರ ಮಾತಿಗೆ, ಒಬ್ಬೊಬ್ಬರು ಒಂದು ಕಡೆ ಬೀಳ್ತಾರೆ. ರಾಜಕಾರಣದಲ್ಲಿ ಯಾರನ್ನೂ ವೈರಿ ಎಂದು ತಿಳಿಯಬಾರದು ಎಂದರು.

click me!