ಮೊನ್ನೆ ಸಿಎಂ ಕರೆದ ಸಭೆಯಲ್ಲಿ ನೇರವಾಗ ಯಡಿಯೂರಪ್ಪನವರಿಗೆ ಪ್ರಶ್ನಿಸಿದ್ದ ಬಿಜೆಪಿ ಶಾಸಕ, ಇದೀಗ ಮತ್ತೆ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, (ಜ.06) : ಅಭಿವೃದ್ಧಿ ವಿಚಾರವಾಗಿ ಮಾತನಾಡಲು ಹೆದರುವ ಮಗ ನಾನಲ್ಲ ಎಂದು ಪರೋಕ್ಷವಾಗಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಮತ್ತೆ ಗುಡುಗಿದ್ದಾರೆ.
ಮೊನ್ನೇ ಸಭೆಯಲ್ಲಿ ಯತ್ನಾಳ್, ವಿಜಯೇಂದ್ರ ಅವರ ಹೆಸರು ಪ್ರಸ್ತಾಪ ಮಾಡಿ, ಸಿಎಂ ಬಿಎಸ್ ಯಡಿಯೂರಪ್ಪನವರಿಗೆ ನೇರವಾಗಿ ಪ್ರಶ್ನಿಸಿದ್ದರು. ಈ ಬಗ್ಗೆ ರೇಣುಕಾಚಾರ್ಯ ಸೇರಿದಂತೆ ಸಿಎಂ ಆಪ್ತರು ಯತ್ನಾಳ್ ವಿರುದ್ಧ ಕಿಡಿಕಾರಿದ್ದರು.
undefined
ಇನ್ನು ಈ ಬಗ್ಗೆ ವಿಧಾನಸೌಧದಲ್ಲಿ ಇಂದು (ಬುಧವಾರ) ಮಾತನಾಡಿದ ಯತ್ನಾಳ್, ನಾನು ಮೊನ್ನೆ ಸಭೆಯಲ್ಲಿ ಮಾತಾಡಿದ್ದು ನಿಜ. ಅಭಿವೃದ್ಧಿ ಬಗ್ಗೆ ನಾನು ಮಾತಾಡಿದ್ದೆ. ಹಾಗಾಗಿ ನನಗೆ ಹಿಂಜರಿಕೆ ಇಲ್ಲ, ನಾನು ಹೆದರೋ ಮಗ ಅಲ್ಲ, ಯಾವಾಗ ಬಾಣ ಬಿಡಬೇಕು, ಯಾವಾಗ ಮೌನವಾಗಿರಬೇಕು ಎಂಬುದು ನನಗೆ ಗೊತ್ತಿದೆ ಎಂದು ಸ್ವಪಕ್ಷದ ನಾಯಕರುಗಳಿಗೆ ತಿರುಗೇಟು ನೀಡಿದರು.
ಸಿಎಂ ಸಭೆಯಲ್ಲಿ ವಿಜಯೇಂದ್ರ ಹೆಸ್ರು ಪ್ರಸ್ತಾಪ: ಯತ್ನಾಳ್- ರೇಣುಕಾಚಾರ್ಯ ಜಟಾಪಟಿ
ಯಡಿಯೂರಪ್ಪನವರ ಮನೆಗೆ ನಾನು ಮಂತ್ರಿ ಸಲುವಾಗಿ ಎಂದೂ ಹೋಗಿಲ್ಲ. ಬದಲಾಗಿ ಜನರ ಭಾವನೆಗಳನ್ನು ಹೇಳುವ ಕೆಲಸ ಮಾಡಿದ್ದೇನೆ. ನಾನು ಯಾವುದಕ್ಕೂ ಅಂಜುವ ಮಗ ಅಲ್ಲ. ನಾನು ಉತ್ತರ ಕರ್ನಾಟಕದವನು, ನಾನು ಕ್ಷಮೆ ಯಾಚಿಸ್ತೇನೆ ಅಂತ ಹೇಳೋನೇ ಅಲ್ಲ, ನನ್ನ ಮಾತನ್ನು ಮಾಧ್ಯಮದವರು ತಿರುಚಿದ್ದಾರೆ ಅಂತ ಹೇಳೋನೂ ನಾನಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ನಾನು ಮಾತನಾಡುತ್ತೇನೆ ಜನಪರ ವಿಚಾರಗಳನ್ನೇ ನಾನು ಮಾತನಾಡಿದ್ದೇನೆ ಎಂದು ಹೇಳಿದರು.
ಮೊನ್ನೆ ಕೂಡ ಒಬ್ಬನೇ ಗಲಾಟೆ ಮಾಡಿದ್ದು ಉಳಿದ ಶಾಸಕರು ಎಲ್ಲರೂ ಸುಮ್ಮನಿದ್ದರು ಎಂದರು ಅಲ್ಲದೆ ಹಾದಿ ಬೀದಿಲಿ ಕೆಲವರು ಹೇಳಿಕೆ ಕೊಡುತಿದ್ದಾರಲ್ಲಾ ಯಡಿಯೂರಪ್ಪ ಸಭೆಯಲ್ಲಿ ಒಬ್ಬರೇ ಶಾಸಕರು ಗಲಾಟೆ ಮಾಡಿದ್ದು ಅಂತ ಹಾಗಾಗಿ ಕಾರಜೋಳ ಹೇಳಿದ್ದು ಸತ್ಯ ಇದೆ ಅದರಲ್ಲಿ ಯಾವುದೇ ಸಂದೇಹ ಬೇಡ ಎಂದರು.