* ಚುನಾವಣೆಗೆ ಆರೆಂಟು ತಿಂಗಳಿದೆ, ಈಗ ಸಂಪುಟ ವಿಸ್ತರಣೆ ನಿಷ್ಪ್ರಯೋಜಕ
* ಈ ಹಿಂದೆ ಪಂಚರಾಜ್ಯ ಚುನಾವಣೆ ಅಂದ್ರು, ಈಗ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಎನ್ನುತ್ತಿದ್ದಾರೆ
* ಪ್ರಧಾನಿ ಮೋದಿ ಹೆಸರಲ್ಲಿ ಚುನಾವಣೆ ಎದುರಿಸುತ್ತೇವೆ
ರಾಯಚೂರು(ಜು.02): ಚುನಾವಣೆ ನೆಪದಲ್ಲಿ ಸಚಿವರ ಸಂಪುಟ ವಿಸ್ತರಣೆ ಮುಂದೂಡಲಾಗಿದೆ. ಚುನಾವಣೆಗಿನ್ನು ಕೇವಲ 6-8 ತಿಂಗಳು ಬಾಕಿ ಉಳಿದಿದೆ. ಈ ಹಂತದಲ್ಲಿ ಸಂಪುಟ ವಿಸ್ತರಣೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಹೊಸದಾಗಿ ಸಚಿವರಾದವರು ಅಧಿಕಾರ ನಿರ್ವಹಿಸಲು ಸಮಯವೇ ಸಿಗುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಈ ಹಿಂದೆ ಪಂಚರಾಜ್ಯ ಚುನಾವಣೆ ಅಂದ್ರು, ಈಗ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಾನಗರ ಪಾಲಿಗೆ ಚುನಾವಣೆ, ಉಪಚುನಾವಣೆ ಬರುತ್ತವೆ. ಹೀಗಾಗಿ ಇನ್ನು ಸಚಿವ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟರು.
ಮಂತ್ರಿ ಸ್ಥಾನಕ್ಕಾಗಿ 10 ಕೋಟಿ ಪಡೆದ ಸ್ವಾಮೀಜಿ: ಯತ್ನಾಳ
ಇದೇ ವೇಳೆ, ಮುಂಬರುವ 2023ನೇ ಸಾಲಿನ ವಿಧಾನಸಭಾ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುವ ಶಕ್ತಿ ರಾಜ್ಯದ ಯಾವುದೇ ನಾಯಕರಿಗಿಲ್ಲ. ಹೀಗಾಗಿ ಪ್ರಧಾನಿ ಮೋದಿ ಹೆಸರಲ್ಲಿ ಎದುರಿಸುತ್ತೇವೆ ಎಂದು ಹೇಳಿದ್ದಾರೆ ಎಂದು ಟಾಂಗ್ ನೀಡಿದರು.