ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಲಿ: ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ

Published : Mar 28, 2026, 10:29 PM IST
Basanagouda Patil Yatnal

ಸಾರಾಂಶ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಿ ಅದನ್ನು ದಲಿತರು, ಹಿಂದುಳಿದ ವರ್ಗಕ್ಕೆ ಕೊಡಲಿ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಕೋಲಾರ (ಮಾ.28): ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ರದ್ದು ಮಾಡಿ ಅದನ್ನು ದಲಿತರು, ಹಿಂದುಳಿದ ವರ್ಗಕ್ಕೆ ಕೊಡಲಿ. ಮುಸ್ಲಿಮರಿಗೆ ಧರ್ಮಾಧಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಗರದಲ್ಲಿ ಶ್ರೀರಾಮಸೇನೆ ಸಂಘಟನೆ ಶೋಭಾಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಂ ಮೀಸಲಾತಿ ರದ್ದುಮಾಡಿ ಹಿಂದೂಗಳಿಗೆ ಹಂಚಬೇಕು. ರಂಜಾನ್ ವೇಳೆ ಎಲ್ಲಾದರೂ ಕಲ್ಲು ಹಾಕಿದ್ದಾರಾ. ಗಣೇಶ ಹಬ್ಬದ ವೇಳೆ ಮಾತ್ರ ಕಲ್ಲು ತೂರಾಟ ಯಾಕೆ. ರಾಮನವಮಿ ವೇಳೆ ಯಾಕೆ ಇವರಿಗೆ ಉರಿಯುತ್ತೆ, ಹಿಂದೂಗಳು ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕು, ಆದರೆ ಮುಸ್ಮಿಮರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ. ರಾಜ್ಯದಲ್ಲಿ ಮುಂದೆ ಹಿಂದೂಪರ ಸರ್ಕಾರ ಅಧಿಕಾರಕ್ಕೆ ಬರಬೇಕು, ನಾಟಕ ಆಡೋರು ಬೇಡ ಎಂದು ಭವಿಷ್ಯ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯಾದರೆ ಖಂಡಿತ ಅಧಿಕಾರಕ್ಕೆ ಬರ್ತಾರೆ. ಮೇನಲ್ಲಿ ಚಿತ್ರದುರ್ಗದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಾಡುತ್ತೇವೆ. ರಾಜ್ಯದಲ್ಲಿ ಪಾಕಿಸ್ತಾನ ಮಾದರಿ ಸರ್ಕಾರವಿದೆ. ಬರೀ ಅಲ್ಪಸಂಖ್ಯತರ ಪರವಾಗಿದೆ. ರಾಜ್ಯ ಬಜೆಟ್‌ನಲ್ಲಿ ದಲಿತರು, ಕುರುಬರು ಸೇರಿ ಯಾವುದೇ ಸಮಾಜಕ್ಕೂ ಅನುದಾನ ನೀಡಿಲ್ಲ ಎಂದು ಅವರು ಟೀಕಿಸಿದರು. ಡಿ.ಕೆ. ಶಿವಕುಮಾರ್ ಸಿಎಂ ಆಗಲು ಬಹಳ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರನ್ನು ಆ ಸಂಬಂಧ ಭೇಟಿಯಾಗಿದ್ದಾರೆ. ಆದರೆ ಅದಕ್ಕೆ ನರೇಂದ್ರ ಮೋದಿ ಒಪ್ಪಿಲ್ಲ. ಅದಕ್ಕಾಗಿ ಇನ್ನೂ ಡಿ.ಕೆ. ಸುರೇಶ್‌ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

ನಾಚಿಕೆಗೇಡಿನ ಸಂಗತಿ

ಬಿಜೆಪಿ ನಮ್ಮನ್ನು ಬೆಳೆಸಿದ ಪಕ್ಷ. ನಾನು ಬಿಎಸ್‌ವೈ ರೀತಿ ಪಕ್ಷಕ್ಕೆ ಮರು ಸೇರ್ಪಡೆ ಆಗೋಲ್ಲ ಎಂದಿದ್ದರು, ನಾನು ಹಾಗೇ ಎಲ್ಲಾ ಹೇಳೊಕಾಗಲ್ಲ. ಉಪ್ಪು ತಿಂದಿದ್ದು ಬಿಜೆಪಿಯಿಂದ. ನಮಗೆಲ್ಲಾ ಐಪಿಎಲ್ ಟಿಕೆಟ್ ಬೇಕು ಎಂದು ಕೇಳುತ್ತಾರೆ ಎಂದರೆ ಎಷ್ಟೊಂದು ನಾಚಿಕೆಗೇಡಿನ ಶಾಸಕರಿದ್ದಾರೆ ನೋಡಿ. ರಾಜ್ಯದಲ್ಲಿ ಆಯಾ ಕ್ಷೇತ್ರದ ಸಮಸ್ಯೆಗಳು, ನೀರಾವರಿ ಯೋಜನೆ, ಕೈಗಾರಿಕೆ ಬಗ್ಗೆ ಚರ್ಚೆಯಾಗಬೇಕು. ಅದು ಬಿಟ್ಟು ಐಪಿಎಲ್‌ ಟಿಕೆಟ್‌ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದರಿಂದ ಶಾಸಕರ ಘನತೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಬಾರಿ ಬಿಜೆಪಿಗೆ 50 ಸಾವಿರ ಮತಗಳ ಅಂತರ ಗೆಲುವು: ಸಂಸದ ಗೋವಿಂದ ಕಾರಜೋಳ
ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಜನರು ರೋಸಿ ಹೋಗಿದ್ದಾರೆ: ಸಂಸದ ಜಗದೀಶ ಶೆಟ್ಟರ್