ಜೆಡಿಎಸ್‌-ಬಿಜೆಪಿ ಮೈತ್ರಿ: ಸಮಯಾನುಸಾರ ಹೊಂದಾಣಿಕೆ ಮಾಡಿಕೊಂಡಿದ್ದು ನಮಗೆ ಹೊಸದಲ್ಲ, ಕಾಶಂಪೂರ

By Kannadaprabha News  |  First Published Sep 28, 2023, 8:02 AM IST

ಕಾಂಗ್ರೆಸ್ ಶಿವಸೇನೆ ಜೊತೆ ಸೇರಿ ಕೂತ್ಕೊಂಡು ಸರ್ಕಾರ ಮಾಡಿದರೆ ಅದು ಹೊಂದಾಣಿಕೆ, ಕೋಮುವಾದಿಯಲ್ಲ. ನಾವು ಮಾಡಿಕೊಂಡರೆ ಅದು ತಪ್ಪಾ ಎಂದು ಪ್ರಶ್ನಿಸಿದ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ 


ತುಮಕೂರು(ಸೆ.28): ದೇಶದಲ್ಲಿ ಸಮಯಾನುಸಾರ ಎಲ್ಲರ ಜೊತೆಯಲ್ಲೂ ಹೊಂದಾಣಿಕೆ ಮಾಡಿಕೊಂಡಿದ್ದು ನಮ್ಮದೇನು ಹೊಸದಲ್ಲ ಎಂದು ಜೆಡಿಎಸ್‌ ಬಿಜೆಪಿ ಮೈತ್ರಿಯನ್ನು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಸಮರ್ಥಿಸಿಕೊಂಡಿದ್ದಾರೆ.

ಅ‍ವರು ಶಿರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಶಿವಸೇನೆ ಜೊತೆ ಸೇರಿ ಕೂತ್ಕೊಂಡು ಸರ್ಕಾರ ಮಾಡಿದರೆ ಅದು ಹೊಂದಾಣಿಕೆ, ಕೋಮುವಾದಿಯಲ್ಲ. ನಾವು ಮಾಡಿಕೊಂಡರೆ ಅದು ತಪ್ಪಾ ಎಂದರು.

Tap to resize

Latest Videos

ಕಾವೇರಿ ಹೆಸರಿನಲ್ಲಿ ಬಿಜೆಪಿ-ಜೆಡಿಎಸ್‌ ರಾಜಕೀಯ ಫಲಿಸಲ್ಲ: ಸಚಿವ ಗುಂಡೂರಾವ್‌

ರಾಜ್ಯ ಹಾಗೂ ಪಕ್ಷದ ಹಿತದೃಷ್ಟಿಯಿಂದ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ಟಾರ್ಗೆಟ್‌ ಕಾಂಗ್ರೆಸ್ ನ್ನು ಸೋಲಿಸುವುದು ಎಂದರು. ನಾವು ಯಾವತ್ತೂ ಜಾತ್ಯಾತೀತನೇ ನಾವೇನು ಜಾತ್ಯಾತೀತ ಬಿಟ್ಟು ಬೇರೆ ಕಡೆ ಹೋಗುತ್ತೀವ ಎಂದರು. ಕಾಂಗ್ರೆಸ್ ನ್ನು ದೇಶದಲ್ಲೇ ಕಿತ್ತು ಹಾಕುತ್ತಾರೆ. 135ಸೀಟು ಇಲ್ಲಿ ಬಂದಿದೆ ಅವರ ಗತ್ತು, ನಡವಳಿಕೆಯೇ‌ ಬದಲಾಗಿದೆ ಎಂದರು. ಒಳ್ಳೇ ರೀತಿ ಸರ್ಕಾರ ಮಾಡುವುದು ಬಿಟ್ಟು ಬೇರೆ ಕಡೆ ಗಮನ ಕೊಡುತ್ತಾರೆ. ಈ ಬಾರಿ ಜನತೆ ಪಾಠ ಕಲಿಸುತ್ತಾರೆ ಎಂದರು.

click me!