ಗುಜರಾತ್‌ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರಕ್ಕೆ 50 ಲಕ್ಷ ಸಂಗ್ರಹಿಸಿದ ಜನ

By Suvarna NewsFirst Published Apr 15, 2024, 10:29 AM IST
Highlights

ಗುಜರಾತ್‌ನ ಬನಸ್ಕಾಂಠಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್‌ ಗೆನಿಬೆನ್‌ ಠಾಕೂರ್‌ ಅವರ ಚುನಾವಣಾ ಪ್ರಚಾರಕ್ಕೆ ಆ ಕ್ಷೇತ್ರದ ಜನತೆಯೇ ದೇಣಿಗೆ ರೂಪದಲ್ಲಿ 50 ಲಕ್ಷಕ್ಕೂ ಅಧಿಕ ಹಣ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಅಹಮದಾಬಾದ್‌: ಗುಜರಾತ್‌ನ ಬನಸ್ಕಾಂಠಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಕಾಂಗ್ರೆಸ್‌ ಗೆನಿಬೆನ್‌ ಠಾಕೂರ್‌ ಅವರ ಚುನಾವಣಾ ಪ್ರಚಾರಕ್ಕೆ ಆ ಕ್ಷೇತ್ರದ ಜನತೆಯೇ ದೇಣಿಗೆ ರೂಪದಲ್ಲಿ 50 ಲಕ್ಷಕ್ಕೂ ಅಧಿಕ ಹಣ ನೀಡಿ ಅಚ್ಚರಿ ಮೂಡಿಸಿದ್ದಾರೆ.

ಕಳೆದ 40 ದಿನಗಳ ಹಿಂದೆ ಕ್ಷೇತ್ರದಲ್ಲಿ ಗೆನಿಬೆನ್‌ ತನ್ನ ಪ್ರಚಾರವನ್ನು ಆರಂಭಿಸಿದಾಗ ಪ್ರಚಾರದಲ್ಲಿ ವಾಹನ ಇಂಧನ ವೆಚ್ಚ ಹಾಗೂ ಸಾರ್ವಜನಿಕ ಸಭೆ ನಿರ್ವಹಿಸಿಲು ದೇಣಿಗೆ ರೂಪದಲ್ಲಿ ಹಣ ಸಹಾಯ ಮಾಡಿ ಎಂದು ಜನರಲ್ಲಿ ಕೇಳಿಕೊಂಡಿದ್ದರು. ಅದರಂತೆ ಅನೇಕರು ಧನ ಸಹಾಯಕ್ಕೆ ಮುಂದ್ದಾಗಿದ್ದು, ಒಟ್ಟು 50 ಲಕ್ಷಕ್ಕೂ ಅಧಿಕ ಮೊತ್ತ ದೇಣಿಗೆ ರೂಪದಲ್ಲಿ ಪಡೆದುಕೊಂಡಿದ್ದೇನೆ ಎಂದು ಠಾಕೂರ್‌ ತಿಳಿಸಿದ್ದಾರೆ.  ಠಾಕೂರ್‌ ಅವರು ಬಿಜೆಪಿ ಅಭ್ಯರ್ಥಿ ರೇಖಾ ಚೌಧರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಮೇ.7ರಂದು ಮತದಾನ ನಡೆಯಲಿದೆ.

ಪ್ರಧಾನಿ ಮೋದಿಗೆ ವಾಸ್ತವತೆಯ ಅರಿವಿಲ್ಲ: ಪ್ರಿಯಾಂಕಾ

ಜೈಪುರ: ಪ್ರಧಾನಿ ನರೇಂದ್ರ ಮೋದಿಗೆ ಹಣದುಬ್ಬರ ಮತ್ತು ನಿರುದ್ಯೋಗದ ವಾಸ್ತವಿಕ ಅರಿವಿಲ್ಲ. ಅವರಿಗೆ ಅಧಿಕಾರದ ಮದ ಏರಿರುವುದರಿಂದ ಅವರ ಬಳಿ ಇರುವ ಅಧಿಕಾರಿಗಳು ಮೋದಿಗೆ ಸತ್ಯಾಂಶ ಹೇಳಲು ಹೆದರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಈ ಕುರಿತು ನೈಜ ಪರಿಹಾರ ಕಂಡುಕೊಳ್ಳದೆ ಜನರಿಗೆ ಸಂಬಂಧಪಡದ ಯೋಜನೆಗಳತ್ತ ಗಮನ ಹರಿಸುತ್ತಾರೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಕಿಡಿ ಕಾರಿದರು.

ಆಂಧ್ರದ ಹಿಂದೂಪುರದಲ್ಲಿ ಶ್ರೀರಾಮುಲು ಸೋದರಿ ಕರ್ನಾಟಕದ ಜೆ ಶಾಂತಾ ಸ್ಪರ್ಧೆ

ಅಶೋಕ್‌ ಗೆಹ್ಲೋಟ್‌ ಪುತ್ರ ವೈಭವ್‌ ಪರ ಪ್ರಚಾರ ಕೈಗೊಂಡ ವೇಳೆ ಮಾತನಾಡಿ, ‘ದೇಶದಲ್ಲಿ ಪ್ರಧಾನಿ ಮೋದಿ ಏನೇ ಮಾತನಾಡಿದರೂ ಜನತೆಯ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮಾತನಾಡುತ್ತಾರೆ. ಅವರಿಗೆ ದೇಶದಲ್ಲಿರುವ ನೈಜ ಹಣದುಬ್ಬರ ಮತ್ತು ನಿರುದ್ಯೋಗದ ಅಗಾಧತೆಯ ಪ್ರಮಾಣದ ಅರಿವು ಇಲ್ಲವೇ ಇಲ್ಲ. ಹೀಗಾಗಿ ಅವರು ತಮ್ಮನ್ನು ತಾವು ಉಬ್ಬೇರಿಸಿ ಮಾತನಾಡುತ್ತಾರೆ’ ಎಂದು ಟೀಕಿಸಿದರು.

ಈ ಚುನಾವಣೆ ಮನುವಾದಿ ಸಿದ್ಧಾಂತದ ವಿರುದ್ಧ ಹೋರಾಟ: ಖರ್ಗೆ

ನಾಗ್ಪುರ: 2024ರ ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಹೋರಾಟವಲ್ಲ. ಬದಲಿಗೆ ಆಡಳಿತ ಪಕ್ಷದ ಮನುವಾದಿ ಸಿದ್ಧಾಂತದ ವಿರುದ್ಧದ ಹೋರಾಟವೆಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯ ವಿರುದ್ಧ ಸ್ಪರ್ಧಿಸಿರುವ ಕಾಂಗ್ರೆಸ್‌ನ ವಿಕಾಸ್ ಠಾಕ್ರೆ ಪರ ಪ್ರಚಾರ ಮಾಡಿ ಅವರು ಮಾತನಾಡಿದರು.

ಚುನಾವಣೆ ಎಫೆಕ್ಟ್‌: ಬಾಡಿಗೆ ವಿಮಾನ, ಕಾಪ್ಟರ್‌ಗೆ ಭಾರಿ ಬೇಡಿಕೆ

‘ಒಂದು ವೇಳೆ ಈ ಚುನಾವಣೆಯಲ್ಲಿ, ಆರೆಸ್ಸೆಸ್‌ , ಬಿಜೆಪಿ ಗೆದ್ದರೆ ಅವರು ಸಂವಿಧಾನವನ್ನು ಮುಗಿಸಿಬಿಡುತ್ತಾರೆ. ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಏನೂ ಮಾಡಲಿಲ್ಲ. ಆದರೆ ಅಂಬೇಡ್ಕರ್ ಮತ್ತು ರಾಮ ಮಂದಿರದ ವಿಚಾರವನ್ನಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಅಂಬೇಡ್ಕರ್ ಫೋಟೋ ಬಿಡಿ, ಇವರು ತಮ್ಮ ಕಛೇರಿಗಳಲ್ಲಿ ರಾಷ್ಟ್ರ ಧ್ವಜವನ್ನು ಕೂಡ ಇಟ್ಟುಕೊಂಡಿಲ್ಲ’ ಎಂದು ವಾಗ್ದಾಳಿ ನಡೆಸಿದರು.

click me!