ನಿಧಾನವಾಗಿ ಬಳ್ಳಾರಿಯಲ್ಲಿ ರೆಡ್ಡಿಗಳ ಹಿಡಿತ ಕಡಿಮೆಯಾಗ್ತಿದೆಯೇ..? ರೆಡ್ಡಿಗಳ ದಬ್ಬಾಳಿಕೆಗೆ ಸಿಡಿದೆದ್ದು ರೆಡ್ಡಿಗಳ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆಯೇ..? ಹೌದು ಮೊನ್ನೆ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಪಕ್ಷವೇ ನನಗೆ ಹೆಚ್ಚು ಕಿರುಕುಳ ನೀಡಿದೆ ಎಂದ ಜನಾರ್ದನ ರೆಡ್ಡಿ ಹೇಳಿಕೆಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ..
ವರದಿ ; ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ (ನ.10) : ನಿಧಾನವಾಗಿ ಬಳ್ಳಾರಿಯಲ್ಲಿ ರೆಡ್ಡಿಗಳ ಹಿಡಿತ ಕಡಿಮೆಯಾಗ್ತಿದೆಯೇ..? ರೆಡ್ಡಿಗಳ ದಬ್ಬಾಳಿಕೆಗೆ ಸಿಡಿದೆದ್ದು ರೆಡ್ಡಿಗಳ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆಯೇ..? ಹೌದು ಮೊನ್ನೆ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಗಿಂತ ಬಿಜೆಪಿ ಪಕ್ಷವೇ ನನಗೆ ಹೆಚ್ಚು ಕಿರುಕುಳ ನೀಡಿದೆ ಎಂದ ಜನಾರ್ದನ ರೆಡ್ಡಿ ಹೇಳಿಕೆಗೆ ಬಿಜೆಪಿ ನಾಯಕರು ಸಿಡಿದೆದ್ದಿದ್ದಾರೆ. ಬಿಜೆಪಿ ಪಕ್ಷಕ್ಕೆ ಜನಾರ್ದನ ರೆಡ್ಡಿ ಸೇರಿದಂತೆ ರೆಡ್ಡಿ ಕುಟುಂಬದವರು ಏನು ಸೇವೆ ಮಾಡಿದ್ದಾರೆ ಅದರ ನಾಲ್ಕರಷ್ಟು ಸವಲತ್ತುಗಳನ್ನು ಪಡೆದಿದ್ದಾರೆ. ಇದೀಗ ಮಾತೃಪಕ್ಷದ ವಿರುದ್ಧವೇ ಹರಿಹಾಯುವ ಮೂಲಕ ಪಕ್ಷ ನೀಡಿದ ಕೊಡುಗೆ ಮರೆತಿದ್ದಾರೆ. ಪಕ್ಷ ಇವರಿಗೆ ಹೆಚ್ಚಿನ ಆದ್ಯತೆ ನೀಡೋ ಅಗತ್ಯವಿಲ್ಲವೆಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಕೆ. ರಾಮಲಿಂಗಪ್ಪ ರೆಡ್ಡಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ..
undefined
ರೆಡ್ಡಿ ಸಹೋದರರ ವಿರುದ್ಧ ಆಕ್ರೋಶ: 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಪರೋಕ್ಷವಾಗಿ ಜನಾರ್ದನ ರೆಡ್ಡಿ ಕಾರಣವಿರಬಹುದು ಆದರೆ ಅದಕ್ಕಿಂತ ನಾಲ್ಕು ಪಟ್ಟು ಪಕ್ಷದಿಂದ ಸಹಕಾರ ಪಡೆದಿದ್ದಾರೆ. ಅಂದು ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ, ಮಂತ್ರಿಯಾದ್ರೆ ಸೋಮಶೇಖರ್ ರೆಡ್ಡಿ ಕೆಎಂಎಫ್ ಅಧ್ಯಕ್ಷರಾಗಿದ್ರು. ಇಷ್ಟೆಲ್ಲ ಅನುಭವಿಸಿದ್ರೂ ಇದೀಗ ಪಕ್ಷದ ವಿರುದ್ಧ ಮಾತನಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಹೀಗಾಗಿ ಜನಾರ್ದನ ರೆಡ್ಡಿ ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡೋ ಅವಶ್ಯಕತೆ ಇಲ್ಲ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಹಾಲಿ ಶಾಸಕ ಸೋಮಶೇಖರ ರೆಡ್ಡಿಗೆ ಟಕೆಟ್ ಕೊಟ್ಟರೆ ಪಕ್ಷಕ್ಕೆ ಕಷ್ಟವಾಗಲಿದೆ. ಲಿಂಗಾಯತ, ಬಲಿಜ, ಕುರುಬ ಸೇರಿ ಇತರೆ ಯಾವುದೇ ಸಮಾಜದ ಮುಖಂಡರಿಗೆ ಟಿಕೆಟ್ ನೀಡಿ ಆದ್ರೆ ರೆಡ್ಡಿಗಳಿಗೆ ಬೇಡವೆಂದು ಪರೋಕ್ಷವಾಗಿ ಪಕ್ಷದ ಮುಖಂಡರಿಗೆ ಸಂದೇಶ ರವಾನೆ ಮಾಡಲಾಗಿದೆ. ಕುಟುಂಬ ರಾಜಕಾರಣ ನಿಲ್ಲಿಸಿ ಎನ್ನುವ ಕೂಗು ಜೋರಾದ ಹಿನ್ನೆಲೆ ರೆಡ್ಡಿ ಸಹೋದರಿರಿಗೆ ಇರುಸು ಮುರುಸಾಗುತ್ತಿದೆ.
ಹುಲಿಗೆ ಬೇಟೆಗೆ ಸಿದ್ಧವಾದರೆ ಯಾರೂ ತಡೆಯಲಾಗದು: ಜನಾರ್ದನ ರೆಡ್ಡಿ
ಕುಟುಂಬ ರಾಜಕಾರಣ ನಿಲ್ಲಿಸಿ ಕಾರ್ಯಕರ್ತರನ್ನು ರಕ್ಷಿಸಿ: ಹೌದು, ಕುಟುಂಬ ರಾಜಕೀಯ ನಿಲ್ಲಿಸಿ ಕಾರ್ಯಕರ್ತರ ರಕ್ಷಸಿ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಕಳೆದ ಹಲವು ದಿನಗಳಿಂದ ತೆರೆ ಮರೆಯಲ್ಲಿ ಕಾರ್ಯಕರ್ತರು ಸಂಘಟನೆ ಗೊಳ್ಳುತ್ತಿದ್ದು, ಯಾವಾಗ ಬೇಕಾದರೂ ಸ್ಫೋಟಗೊಳ್ಳಬಹುದಾಗಿದೆ. ಇನ್ನೂ ರೆಡ್ಡಿ ಸಹೋದರರ ಭಯಕ್ಕೆ ಮುಖಂಡರು ಕಾರ್ಯಕರ್ತರು ಬಳ್ಳಾರಿಯಲ್ಲಿ ಹೊರಬರಲಾಗದೇ ಭಯ ಭೀತರಾಗಿದ್ದಾರೆ. ಹೀಗಾಗಿ ಈ ಎಲ್ಲಾ ಆತಂಕವನ್ನು ಪಕ್ಷದ ಮುಖಂಡರು ದೂರ ಮಾಡೋ ನಿಟ್ಟಿನಲ್ಲಿ ಟಿಕೆಟ್ ಬದಲಾವಣೆ ಮಾಡಬೇಕೆಂದು ರಾಮಲಿಂಗಪ್ಪ ಆಗ್ರಹಿಸಿದ್ದಾರೆ.
ಬಳ್ಳಾರಿ: ಕಾಂಗ್ರೆಸ್ ಸೇರ್ತಾರಾ ಮಾಜಿ ಸಚಿವ ಜನಾರ್ದನ ರೆಡ್ಡಿ?
ಮನೆ ಮಂದಿಗೆಲ್ಲ ಪಕ್ಷ ಅಧಿಕಾರ ಕೊಟ್ಟಿತ್ತು!: ಬಿಜೆಪಿ ಋಣ ತೀರಿಸಲು ರೆಡ್ಡಿ ಸಹೋದರರು ಎಷ್ಟು ಸೇವೆ ಮಾಡಿದರೂ ತೀರಿಸಲು ಆಗದು. ರೆಡ್ಡಿಗಳಿಂದ ಬಿಜೆಪಿಗೆ ಎಷ್ಟು ಲಾಭವಾಗಿದೆಯೋ ಅದರ ಎರಡರಷ್ಟು ಲಾಭ ಪಕ್ಷದಿಂದ ಪಡೆದಿದ್ದು ಈ ಬಾರಿಯೂ ಹರಪನಹಳ್ಳಿಯಲ್ಲಿ ಕರುಣಾಕರ ರೆಡ್ಡಿ ಮತ್ತು ಬಳ್ಳಾರಿಯಲ್ಲಿ ಸೋಮಶೇಖರ್ ರೆಡ್ಡಿ ಆಕಾಂಕ್ಷಿಯಾಗಿದ್ದಾರೆ ಮತ್ತೊಮ್ಮೆ ಇವರಿಗೆ ಟಿಕೆಟ್ ಕೊಟ್ರೇ ಸಾಮಾನ್ಯ ಕಾರ್ಯಕರ್ತನ ಪರಿಸ್ಥಿತಿ ಏನು..? ಇಂತಹಾವರಿಗೆ ಟಿಕೆಟ್ ಕೊಡಬೇಕು ಎಂದೇನಿಲ್ಲ ಯಾರಾದರೂ ಕಾರ್ಯಕರ್ತರಿಗೆ ಕೊಡಿ ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಇನ್ನೂ ರೆಡ್ಡಿಗಳು ಕಾರ್ಯಕರ್ತರ ಮೇಲೆ ಅವಲಂಬಿಸಿಲ್ಲ ಪಿಎಗಳ ಮೇಲೆ ಅವಲಂಬಿಸಿದ್ದಾರೆ. ವಿಜಯನಗರ ಜಿಲ್ಲೆ ರಚನೆಗೆ ಸೋಮಶೇಖರ ರೆಡ್ಡಿ ಕಾರಣವಾಗಿದ್ದಾರೆ. ಜಿಲ್ಲೆ ವಿಭಜನೆಗೆ ಸೂಕ್ತ ವೇದಿಕೆಯಲ್ಲಿ ವಿರೋಧಿಸಿಲ್ಲ. ಆನಂದ ಸಿಂಗ್ ಮೇಲಿನ ತೆರೆಮರೆಯಲ್ಲಿ ಮುನಿಸು ಜಿಲ್ಲೆ ವಿಭಜನೆಗೆ ಕಾರಣವಾಯಿತು ಎಂದು ಆರೋಪಿಸಲಾಗಿದೆ.