ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಜೊತೆಗೆ ಮೋದಿಯವರಂಥ ನೀಡಿದ ಭಾರತೀಯ ಜನತಾ ಪಕ್ಷ ಈ ದೇಶದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿ ಪಕ್ಷದಧೆಲ್ಲ ಘೋಷಣೆಗಳನ್ನು ನಿಜಮಾಡಿದೆ. ಕಾಶ್ಮೀರದ 370ನೇ ವಿಧಿ, ತ್ರಿವಳಿ ತಲಾಖ್ ನಿಷೇಧ ಜೊತೆಗೆ ಶ್ರೀರಾಮ ಮಂದಿರ, ಕಾಶಿ ವಿಶ್ವನಾಥ ಮತ್ತು ಉಜ್ಜಯನಿಯ ಸೋಮನಾಥ ದೇವಾಲಯ ಕಾರಿಡಾರ್ ಹಾಗೂ ಕೇದಾರನಾಥ ಸೋಮನಾಥ ದೇವಾಲಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡಿ ಭಾರತದ ಅಧ್ಯಾತ್ಮಿಕತೆಯನ್ನು ಪುನರುಜ್ಜೀವನಗೊಳಿದ್ದು, ಭಾರತೀಯರ ಹೆಮ್ಮೆಯಾಗಿದೆ ಎಂದ ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ
ಬಾಗಲಕೋಟೆ(ಫೆ.07): ದೇಶದ ಸಮಗ್ರ ಅಭಿವೃದ್ಧಿಯ ಕನಸಿನೊಂದಿಗೆ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠ ಹೇಳಿದರು. ಬಿವಿವಿ ಸಂಘದ ನೂತನ ಸಭಾಭವನದಲ್ಲಿ ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ಭಾರತೀಯ ಜನತಾ ಪಕ್ಷದ ವತಿಯಿಂದ ಹಮ್ಮಿಕೊಂಡ ಗ್ರಾಮ ಚಲೋ ಅಭಿಯಾನದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಜೊತೆಗೆ ಮೋದಿಯವರಂಥ ನೀಡಿದ ಭಾರತೀಯ ಜನತಾ ಪಕ್ಷ ಈ ದೇಶದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿ ಪಕ್ಷದಧೆಲ್ಲ ಘೋಷಣೆಗಳನ್ನು ನಿಜಮಾಡಿದೆ. ಕಾಶ್ಮೀರದ 370ನೇ ವಿಧಿ, ತ್ರಿವಳಿ ತಲಾಖ್ ನಿಷೇಧ ಜೊತೆಗೆ ಶ್ರೀರಾಮ ಮಂದಿರ, ಕಾಶಿ ವಿಶ್ವನಾಥ ಮತ್ತು ಉಜ್ಜಯನಿಯ ಸೋಮನಾಥ ದೇವಾಲಯ ಕಾರಿಡಾರ್ ಹಾಗೂ ಕೇದಾರನಾಥ ಸೋಮನಾಥ ದೇವಾಲಯ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ ಮಾಡಿ ಭಾರತದ ಅಧ್ಯಾತ್ಮಿಕತೆಯನ್ನು ಪುನರುಜ್ಜೀವನಗೊಳಿದ್ದು, ಭಾರತೀಯರ ಹೆಮ್ಮೆಯಾಗಿದೆ ಎಂದರು.
undefined
ಎಂಟು ವರ್ಷ ಕೆಲಸ ಮಾಡಿದರೂ ಖಾಯಂಗೊಳಿಸದ ಅನುದಾನಿತ ಶಾಲೆ; ಆತ್ಮಹತ್ಯೆಗೆ ಯತ್ನಿಸಿದ ಶಿಕ್ಷಕ
10 ವರ್ಷಗಳ ಅವಧಿಯಲ್ಲಿ ದೇಶದ ಸಮಗ್ರ ಅಭಿವೃದ್ಧಿಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಮೊತ್ತಮ್ಮೆ ಪ್ರಧಾನಿಯನ್ನಾಗಿಸುವ ನಿಶ್ಚಲವಾದ ಗುರಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರ ಮುಂದಿದೆ. ಕಿಸಾನ್ ಸಮ್ಮಾನ್ ಯೋಜನೆ, ಪಿ.ಎಂ. ಫಸಲ್ ಬಿಮಾ ಯೋಜನೆ, ಡಿಜಿಟಲ್ ಕ್ರಾಂತಿ, ಉಜ್ವಲ್ ಗ್ಯಾಸ್ ಯೋಜನೆ, ಆಯುಷ್ಮಾನ್ ಭಾರತ, ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಗಳನ್ನು ಸಾಕಾರಗೊಳಿಸಿದೆ. ದೇಶದ ಸಮಗ್ರ ಅಭಿವೃದ್ಧಿಗಾಗಿ ಮೋದಿಯವರನ್ನು ಮೊತ್ತಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪ ಮಾಡೋಣ. ಈ ಗ್ರಾಮ ಚಲೋ ಅಭಿಯಾನವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆ ಕುರಿತು ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ಜಿಲ್ಲಾ ಉಪಾಧ್ಯಕ್ಷ ಅಶೋಕ ಲಿಂಬಾವಳಿ ಪ್ರಸ್ತಾವಿಕ ಮಾತನಾಡಿ, ಗ್ರಾಮಚಲೋ ಅಭಿಯಾನ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿಂದು ಗಾಯಕವಾಡ, ಬಸವರಾಜ ಯಂಕಂಚಿ ಮಾತನಾಡಿದರು.
ಬುಜೆಪಿ ಮುಖಂಡರಾದ ಡಾ.ಎಂ.ಎಸ್. ದಡ್ಡೆನ್ನವರ, ಗುಂಡುರಾವ ಶಿಂಧೆ, ಸುರೇಶ ಕೊಣ್ಣೂರ, ಸತ್ಯನಾರಾಯಣ ಹೆಮಾದ್ರಿ, ರಾಜು ನಾಯ್ಕರ, ಸದಾನಂದ ನಾರಾ, ರಾಜು ಮುದೆನೂರ, ಶಿವಾನಂದ ಟವಳಿ, ಬಸವರಾಜ ಅವರಾದಿ, ಜ್ಯೋತಿ ಭಜಂತ್ರಿ, ಸುಜಾತಾ ತತ್ರಾಣಿ, ಸರಸ್ವತಿ ಕುರಬರ, ಶಿವಲೀಲಾ ಪಟ್ಟಣಶೆಟ್ಟಿ, ಶಶಕಲಾ ಮಜ್ಜಗಿ, ಶೋಭಾರಾವ್, ಮುತ್ತು ಸಿಮಿಕೇರಿ, ರಾಜು ಶಿಂತ್ರೆ, ಶರತಗೌಡ ಪಾಟೀಲ, ಮಲ್ಲು ಮುತ್ತಪ್ಪಣ್ಣವರ, ವಿಜಯ ಚೆಟ್ಟರಕಿ, ಕಿರಣಶಿಂಗ ಗಲಗಲಿ ಸೇರಿದಂತೆ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ನಗರಸಭೆ ಸದಸ್ಯರು, ವಾರ್ಡ್ ಅಧ್ಯಕ್ಷರು, ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಅಧ್ಯಕ್ಷರು ಸೇರಿದಂತೆ ಅನೇಕ ಜನರು ಭಾಗಹಿಸಿದ್ದರು.