ಟಿಕೆಟ್‌ ನಿರ್ಧಾರ ಜನರದ್ದು, ಬಿ ಫಾರ್ಮ್‌ ನಿರ್ಧಾರ ನನ್ನದು: ಎಚ್‌.ಡಿ.ದೇವೇಗೌಡ

By Govindaraj S  |  First Published Dec 30, 2022, 1:00 AM IST

ಜೆಡಿಎಸ್‌ ಅಭ್ಯರ್ಥಿ ಯಾರು ಹಾಗೂ ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ಯಾರಿಗೆ ಬಿ ಫಾರ್ಮ್‌ ನೀಡಬೇಕು ಎಂದು ನಾನು ನಿರ್ಧರಿಸುತ್ತೇನೆ. ಮುಂಬರುವ 2023ರ ಚುನಾವಣೆಯಲ್ಲಿ ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಠನೆ ನೀಡಿದರು.


ಮಾನ್ವಿ (ಡಿ.30): ಜೆಡಿಎಸ್‌ ಅಭ್ಯರ್ಥಿ ಯಾರು ಹಾಗೂ ಯಾರಿಗೆ ಟಿಕೆಟ್‌ ನೀಡಬೇಕು ಎನ್ನುವುದನ್ನು ಜನರು ತೀರ್ಮಾನಿಸುತ್ತಾರೆ. ಯಾರಿಗೆ ಬಿ ಫಾರ್ಮ್‌ ನೀಡಬೇಕು ಎಂದು ನಾನು ನಿರ್ಧರಿಸುತ್ತೇನೆ. ಮುಂಬರುವ 2023ರ ಚುನಾವಣೆಯಲ್ಲಿ ಜೆಡಿಎಸ್‌ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಸ್ಪಷ್ಠನೆ ನೀಡಿದರು. ಪಟ್ಟಣದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಹೋದರ ರಾಜಾ ರಾಮಚಂದ್ರ ನಾಯಕರ ಮದುವೆ ಆರತಕ್ಷತೆ ಮತ್ತು ಸಾಮೂಹಿಕ ವಿವಾಹಗಳ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

ಜೆಡಿಎಸ್‌ ಬಿ ಫಾರ್ಮ್‌ ಕೊಡುವರು ಯಾರು?, ಬಿ ಫಾರ್ಮ್‌ ಕೊಡುವುದು ನಾನು, ನಿಖಿಲ್‌ ಕುಮಾರಸ್ವಾಮಿ ಇಚ್ಛೆಯಂತೆ ಮಂಡ್ಯ, ಕನಕಪುರದಲ್ಲಿ ನಿಲ್ಲುತ್ತಾನೋ ಇಲ್ಲವೊ ಎನ್ನುವ ಉಹಾಪೋಹಾಗಳಿಗೆ ನಾನು ಏನು ಹೇಳಲಿ ಎಂದರು. ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡುವ ವಿಚಾರ ಸಚಿವ ಅಶ್ವತ್‌ ನಾರಾಯಣ ರಾಮಮಂದಿರ ನಿರ್ಮಾಣದ ಬಗ್ಗೆ ಸಾಕಷ್ಟುಚರ್ಚೆ ನಡೆದಿದೆ. ಅಶ್ವತ್‌ ನಾರಾಯಣಗೂ, ರಾಮಮಂದಿರಕ್ಕೂ ಏನು ಸಂಬಂಧ? ಎಂದು ಹೇಳಿ ಕೇಂದ್ರ ಸಚಿವ ಅಮಿತ್‌ ಶಾ ಮಂಡ್ಯಕ್ಕೆ ಬರಲಿ ಬಿಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ನಗೆ ಬೀರಿದರು. ಮದುವೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬರಬೇಕಿತ್ತು. 

Tap to resize

Latest Videos

Mandya: ದೇವೇಗೌಡರ ಬೆನ್ನಿಗೆ ಚೂರಿ ಹಾಕೋಲ್ಲ: ಶಾಸಕ ಸಿ.ಎಸ್‌.ಪುಟ್ಟರಾಜು

ಆದರೆ, ತುಮಕೂರು ಜಿಲ್ಲೆಯಲ್ಲಿ ಪಂಚರತ್ನ ಕಾರ್ಯಕ್ರಮದಲ್ಲಿ ಇರುವುದರಿಂದ ಬರಲು ಆಗಿಲ್ಲ. ಕೋಲಾರ ಜಿಲ್ಲೆಯಿಂದ ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮ ಶುರು ಮಾಡಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಿಖಿಲ್‌ ಕುಮಾರಸ್ವಾಮಿ ಸಹ ಬರಬೇಕಾಗಿತ್ತು. ಬೇರೆ ಕಾರಣದಿಂದ ಸಮಾರಂಭಕ್ಕೆ ಬರಲು ಆಗಲಿಲ್ಲ. ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ನೀವು ಮದುವೆ ಕಾರ್ಯಕ್ರಮಕ್ಕೆ ಹೋಗಲೇ ಬೇಕು ಎಂದಾಗ ನಾನು ಒಪ್ಪಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು. ಈ ವೇಳೆ ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ, ಶಾಸಕ ರಾಜಾವೆಂಕಟಪ್ಪನಾಯಕ, ಸಿಂಧನೂರು ಶಾಸಕ ವೆಂಕಟರಾವ್‌ ನಾಡಗೌಡ ಇದ್ದರು.

ದೇವೇಗೌಡ, ಕುಮಾರಸ್ವಾಮಿ ಸಾಧನೆ ಮನೆಗಳಿಗೆ ತಲುಪಿಸಿ: ಪ್ರಧಾನಿಯಾಗಿ ಎಚ್‌.ಡಿ.ದೇವೇಗೌಡರು ಮತ್ತು ಮುಖ್ಯಮಂತ್ರಿಯಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾಡಿದ ಸಾಧನೆಗಳು ಹಾಗೂ 2023 ಚುನಾವಣೆಯ ಪ್ರಣಾಳಿಕೆ ತಿಳಿಸಲು ಜೆಡಿಎಸ್‌ ಪಕ್ಷದಿಂದ ‘ರಾಜ್ಯಕ್ಕೆ ಕುಮಾರಣ್ಣ ದಾಸರಹಳ್ಳಿಗೆ ಮಂಜಣ್ಣ’ ಕಾರ್ಯಕ್ರಮದಲ್ಲಿ ಕ್ಷೇತ್ರದಾದ್ಯಂತ ಮನೆ ಮನೆಗೆ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಥಳೀಯ ಶಾಸಕ ಆರ್‌.ಮಂಜುನಾಥ್‌ ತಿಳಿಸಿದರು. 

ಒಗ್ಗಟ್ಟಿನಿಂದ ಶ್ರಮಿಸಿ ಜೆಡಿಎಸ್‌ ಅಧಿಕಾರಕ್ಕೆ ತನ್ನಿ: ಎಚ್‌.ಡಿ.ದೇವೇಗೌಡ

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವರದ ಗಣಪತಿ ನಗರದಲ್ಲಿ ಮನೆ ಮನೆಗೆ ಮಂಜಣ್ಣ ಕಾರ್ಯಕ್ರಮದಲ್ಲಿ ಜೆಡಿಎಸ್‌ ಕಾರ್ಯಕರ್ತರು ಕಬ್ಬಿನ ಹಾರ ಹಾಕುವ ಮೂಲಕ ಶಾಸಕ ಅರ್‌.ಮಂಜುನಾಥ್‌ ಅವರನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡರು. ಬಳಿಕ ಮಾತನಾಡಿದ ಶಾಸಕರು, ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ 24 ಗಂಟೆಯೊಳಗೆ ಎಲ್ಲಾ ರೈತರ ಸಾಲ ಸಂಪೂರ್ಣ ಮನ್ನಾ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಗಳನ್ನು ಜನರಿಗೆ ತಿಳಿಸಲಾಗುವುದು ಎಂದು ಹೇಳಿದರು. ಕಿರಣ್‌ ಮಂಜುನಾಥ್‌, ಶೃತಿ ಕಿರಣ್‌, ಜೆಡಿಎಸ್‌ ವಕ್ತಾರ ಚರಣ್‌ಗೌಡ, ವರದರಾಜು, ಶಕೀಲ್‌ ಅಹಮದ್‌, ಜೆಡಿಎಸ್‌ ಕಾರ್ಯಕರ್ತರು ಮಹಿಳಾ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

click me!