ಅಯೋಧ್ಯೆ ರಾಮಮಂದಿರಕ್ಕೂ ಮುಂಬರುವ ಲೋಕಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ರಾಮನನ್ನು ಮುಖ್ಯ ಪ್ರಚಾರನಾಗಿ ಬಳಸಿಕೊಳ್ಳಬೇಡಿ ಎಂದು ವಿಧಾನಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು.
ಮೈಸೂರು (ಜ.29): ಅಯೋಧ್ಯೆ ರಾಮಮಂದಿರಕ್ಕೂ ಮುಂಬರುವ ಲೋಕಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ರಾಮನನ್ನು ಮುಖ್ಯ ಪ್ರಚಾರನಾಗಿ ಬಳಸಿಕೊಳ್ಳಬೇಡಿ ಎಂದು ವಿಧಾನಪರಿಷತ್ತು ಸದಸ್ಯ ಎಚ್.ವಿಶ್ವನಾಥ್ ತಿಳಿಸಿದರು. ರಾಮ ದೇಶದ ಅಸ್ಮಿತೆ, ಆತ ರಾಜಕೀಯ ವಿಚಾರ ಅಲ್ಲ. ರಾಮ ನಮ್ಮ ಧಮನಿ ಧಮನಿಯಲ್ಲಿ ಇರುವವನು. ಅದರಿಂದ ಲೋಕಸಭೆಗೆ ಅನುಕೂಲವಾಗುತ್ತದೆ ಅನ್ನೋದು ಸರಿಯಲ್ಲ. ನಮ್ಮ ಪ್ರತಿ ಊರಿನಲ್ಲೂ ರಾಮಮಂದಿರ ಕಟ್ಟಿದ್ದಾರೆ. ಅದನ್ನು ಮೋದಿ ಬಂದು ಕಟ್ಟಿಸಿದ್ದರಾ? ಹೆಂಡತಿಯನ್ನು ಬಿಟ್ಟ ರಾಮನಿಗೆ ಹೆಂಡತಿ ತೊರೆದ ಪ್ರಧಾನಿ ಹೇಗೆ? ಎಂದು ಯುವಕನೊಬ್ಬ ನನಗೆ ಸಂದೇಶ ಕಳುಹಿಸಿದ್ದಾನೆ. ನಿಮ್ಮ ಚುನಾವಣೆಗೆ ಮುಖ್ಯ ಪ್ರಚಾರಕನಾಗಿ ರಾಮನನ್ನು ಬಳಸಿಕೊಳ್ಳಬೇಡಿ. ಬಡವರ ಹಸಿವಿನ ಬಗ್ಗೆ, ದೇಶದ ಅಭಿವೃದ್ಧಿ ಬಗ್ಗೆ ಮಾತಾಡಿ ಎಂದು ಅವರು ಒತ್ತಾಯಿಸಿದರು.
ದೇವರಾಜ ಅರಸುಗೆ ಭಾರತರತ್ನ ನೀಡಬೇಕು: ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್. ವಿಶ್ವನಾಥ್ ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು. ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಹೊಸ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿ. ದೇವರಾಜ ಅರಸು ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರವು ನಿರ್ಧರಿಸಿ, ಅದಕ್ಕಾಗಿ 92 ಲಕ್ಷ ರೂ. ಮಂಜೂರು ಮಾಡಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಶಿವರಾಜ್ ತಂಗಡಿಗೆ ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
undefined
ನಿಗಮ ಮಂಡಳಿ ಅಧ್ಯಕ್ಷನಾಗಿರುವುದು ನನಗೆ ಬಯಸದೇ ಬಂದ ಭಾಗ್ಯ: ಶಾಸಕ ರಾಜು ಕಾಗೆ
ವರ್ಷ ಪೂರ್ತಿ ಡಿ. ದೇವರಾಜ ಅರಸು ಹೆಸರಿನಲ್ಲಿ ಕಾರ್ಯಕ್ರಮ ಮಾಡಬೇಕು. ದೇಶಕ್ಕೆ ದೇವರಾಜ ಅರಸು ಹೆಸರೇ ಒಂದು ಶಕ್ತಿ. ಸಾಮಾಜಿಕ ನ್ಯಾಯವನ್ನು ಎತ್ತರದಲ್ಲಿ ಹಿಡಿದವರು ದೇವರಾಜ ಅರಸು. ಜೀತ ಪದ್ಧತಿ ನಿರ್ಮೂಲನೆ ಮಾಡಿದರು. ಹಾಸ್ಟೆಲ್ ವ್ಯವಸ್ಥೆ ಮೂಲಕ ಅಕ್ಷರ ಕ್ರಾಂತಿ ಮಾಡಿದವರು. ಜನ ಮಾನಸದಲ್ಲಿ ಉಳಿದ ಜನನಾಯಕ ದೇವರಾಜ ಅರಸ್ ಎಲ್ಲಾ ಜಾತಿಗೂ ರಾಜಕೀಯ ಅಧಿಕಾರವನ್ನು ಕೊಟ್ಟವರು. ಯುವಕರಿಗೆ ಹೆಚ್ಚಿನ ಆದ್ಯತೆ ನೀಡಿ ಬೆಳೆಸಿದರು. ಹೀಗಾಗಿ, ಅರಸು ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಅವರು ತಿಳಿಸಿದರು. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನಾ ಹೋರಾಟ ಸಮಿತಿಯ ಅಧ್ಯಕ್ಷ ಜಾಕೀರ್ ಹುಸೇನ್, ಡಾ.ವೈ.ಡಿ. ರಾಜಣ್ಣ, ಎಂ. ಚಂದ್ರಶೇಖರ್, ವೆಂಕಟೇಶ್ ಇದ್ದರು.