ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಕೇಂದ್ರ ಸಚಿವರ ವಿರುದ್ಧ ಶಾಸಕರ ಕಿಡಿ

By Kannadaprabha News  |  First Published Aug 10, 2023, 11:30 PM IST

ನನಗೆ ಲಕ್ಕಿ ಶಾಸಕ, ಚುನಾವಣೆಗೂ ಮುನ್ನ ಔರಾದ್‌ಗೆ ಬಂದು ಒಂದೇ ತಿಂಗಳಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡವನು ಎಂದೆಲ್ಲ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವ್ಯಂಗ್ಯವಾಡಿದ್ದು ಖೂಬಾ ಅವರಿಗೆ ಶೋಭೆ ತರುವುದಿಲ್ಲ. ಬಿಜೆಪಿ ನನ್ನ ತಾಯಿಯಿದ್ದಂತೆ, ಕಾರ್ಯಕರ್ತರು ನನ್ನ ಕುಟುಂಬ ಸದಸ್ಯರು. 34 ವರ್ಷದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೇನೆ ಎಂದ ಪ್ರಭು ಚವ್ಹಾಣ್‌ 


ಬೀದರ್‌(ಆ.10):  ನಡು ರಸ್ತೆಯಲ್ಲಿ ನನಗೆ ಗುಂಡು ಹೊಡೆದು ಆರು ತಿಂಗಳಲ್ಲಿ ಉಪಚುನಾವಣೆ ನಡೆಸುವ ಮಾತುಗಳನ್ನು ಕೇಂದ್ರ ಸಚಿವ ಭಗವಂತ ಖೂಬಾ, ಅವರ ಬೆಂಬಲಿಗರು ಆಡಿದ್ದಾರೆಂದು ತಿಳಿದು ಬಂದಿದೆ. ನನ್ನನ್ನು ಮುಗಿಸಿ. ಆದರೆ, ತಾಯಿಯಂತಿರುವ ಪಕ್ಷವನ್ನು ಮುಗಿಸಬೇಡಿ ಎಂದು ಔರಾದ್‌ ಶಾಸಕ, ಮಾಜಿ ಸಚಿವ ಪ್ರಭು ಚವ್ಹಾಣ್‌ ಹೇಳಿದ್ದಾರೆ. 

ಔರಾದ್‌ ಪಟ್ಟಣದ ಸಾಯಿ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಪ್ರಥಮ ಬಿಜೆಪಿ ತಾಲೂಕು ಕಾರ್ಯಕಾರಿಣಿ ಉದ್ಘಾಟಿಸಿ ಖೂಬಾ ಅವರ ವಿರುದ್ಧದ ಮುನಿಸನ್ನು ಪ್ರಭು ಚವ್ಹಾಣ್‌ ಮತ್ತೊಮ್ಮೆ ಹೊರಹಾಕಿದ್ದಾರೆ. ನನಗೆ ಲಕ್ಕಿ ಶಾಸಕ, ಚುನಾವಣೆಗೂ ಮುನ್ನ ಔರಾದ್‌ಗೆ ಬಂದು ಒಂದೇ ತಿಂಗಳಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡವನು ಎಂದೆಲ್ಲ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ವ್ಯಂಗ್ಯವಾಡಿದ್ದು ಖೂಬಾ ಅವರಿಗೆ ಶೋಭೆ ತರುವುದಿಲ್ಲ. ಬಿಜೆಪಿ ನನ್ನ ತಾಯಿಯಿದ್ದಂತೆ, ಕಾರ್ಯಕರ್ತರು ನನ್ನ ಕುಟುಂಬ ಸದಸ್ಯರು. 34 ವರ್ಷದಿಂದ ಬಿಜೆಪಿಯ ಸಕ್ರಿಯ ಕಾರ್ಯಕರ್ತನಾಗಿದ್ದೇನೆ ಎಂದರು.

Tap to resize

Latest Videos

undefined

ಕಾಂಗ್ರೆಸ್‌ ಆಡಳಿತದಲ್ಲಿ ರೈಲಿನ ಸಮಯ ಕೂಡಾ ಬದಲಿಸಲಾಗಿರಲಿಲ್ಲ: ಭಗವಂತ ಖೂಬಾ

ಔರಾದ್‌ ಕ್ಷೇತ್ರಕ್ಕೆ ಸಿಪೆಟ್‌ ಕಾಲೇಜು ತಂದಿದ್ದು ನಾನು, ಮುಖ್ಯಮಂತ್ರಿಯಿಂದ ಶಂಕುಸ್ಥಾಪನೆ ಸಹ ಆಗಿದೆ. ಆದರೆ, ತಮ್ಮ ಇಲಾಖೆಯಿಂದ ಮಂಜೂರಾತಿ ಇಲ್ಲದ ಕಾರಣ ನೆನೆಗುದಿಗೆ ಬಿದ್ದಿದ್ದರೂ ಅದಕ್ಕೂ ನನ್ನನ್ನೇ ಹೊಣೆ ಎಂಬಂತೆ ಮಾತನಾಡಿದ್ದೀರಿ ಎಂದು ಅಸಮಾಧಾನ ಹೊರಹಾಕಿದರು.

click me!