ಸಚಿನ್ ಪೈಲಟ್ ಮುಗ್ಧ ಮುಖದ ವಂಚಕ| ಸಚಿನ್ ಪೈಲಟ್ ಕೆಲಸಕ್ಕೆ ಬಾರದ ವ್ಯಕ್ತಿ: ಗೆಹ್ಲೋಟ್ ವಾಗ್ದಾಳಿ
ಜೈಪುರ(ಜು.21): ಸಚಿನ್ ಪೈಲಟ್‌ಗೆ ಕಾಂಗ್ರೆಸ್‌ನ ಬಾಗಿಲು ಬಹುತೇಕ ಬಂದ್ ಆದಂತಾಗಿದ್ದು, ಇದರ ಸಂಕೇತವಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಚಿನ್ ಮೇಲೆ ಸೋಮವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘ಆತನೊಬ್ಬ ಕೆಲಸಕ್ಕೆ ಬಾರದ ವ್ಯಕ್ತಿ. ಅವರು ಏನೂ ಸಾಧನೆ ಮಾಡಲಿಲ್ಲ. ಆದರೆ ಪಕ್ಷದ ಹಿತದೃಷ್ಟಿಯಿಂದ ಈ ಬಗ್ಗೆ ಮಾತನಾಡದೇ ಸುಮ್ಮನಿದ್ದೆ’ ಎಂದು ಕೆಂಡಕಾರಿದ್ದಾರೆ.
ಪೈಲಟ್ ಪರ ತೀರ್ಪು ಬಂದರೆ, ಕಾಂಗ್ರೆಸ್ ಬಳಿ ಪ್ಲಾನ್ ಬಿ ರೆಡಿ!
ಸೋಮವಾರ ರಾಜಸ್ಥಾನ ಬಿಕ್ಕಟ್ಟಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಗೆಹ್ಲೋಟ್, ‘ಸರ್ಕಾರ ಬೀಳಿಸುವ ಯತ್ನ ನಡೆದಿವೆ ಎಂದು ನಾನು ಈ ಹಿಂದೆ ಹೇಳಿದೆ. ಆದರೆ ಇಂಗ್ಲಿಷ್ ಹಾಗೂ ಹಿಂದಿಯನ್ನು ಚೆನ್ನಾಗಿ ಬಲ್ಲ ಹಾಗೂ ದೇಶದ ಮಾಧ್ಯಮಗಳ ಮೇಲೆ ತುಂಬಾ ಪ್ರಭವ ಇರುವ ‘ಮುಗ್ಧ ಮುಖದ ವ್ಯಕ್ತಿ’ (ಸಚಿನ್) ಈ ಕೃತ್ಯದ ಹಿಂದೆ ಇರಬಹುದು ಎಂದು ಯಾರೂ ನಂಬಿರಲಿಲ್ಲ’ ಎಂದು ಹೇಳಿದರು.
ಯುವ ಪಡೆ ಕೈಕೊಟ್ಟರೆ ನಷ್ಟವಿಲ್ಲ: ಸಿಂಧಿಯಾ, ಪೈಲಟ್‌ಗೆ ರಾಹುಲ್ ಟಾಂಗ್!
‘ಕಳೆದ 7 ವರ್ಷದಿಂದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಬದಲಾಯಿಸುವಂತೆ ಕೇಳದೇ ಇದ್ದ ರಾಜ್ಯವೆಂದರೆ ಅದು ರಾಜಸ್ಥಾನ ಮಾತ್ರ. ಇಲ್ಲಿ ಏನೂ ಕೆಲಸ ಆಗುತ್ತಿಲ್ಲ ಎಂದು ನಮಗೆ ಗೊತ್ತಿತ್ತು. ನಮಗೆ ಆತ ‘ನಿಕಮ್ಮಾ’ (ಕೆಲಸಕ್ಕೆ ಬಾರದವ) ಹಾಗೂ ‘ನಕಾರಾ’ (ಏನೂ ಕೆಲಸ ಮಾಡದವ) ಎಂದು ತಿಳಿದಿತ್ತು. ಆದರೆ ಪಕ್ಷದ ಹಿತದೃಷ್ಟಿಯಿಂದ ಸುಮ್ಮನಿದ್ದೆ’ ಎಂದು ಹೆಸರೆತ್ತದೇ ವಾಗ್ದಾಳಿ ನಡೆಸಿದರು.