ಕುಮಾರಸ್ವಾಮಿ ಬಂದರೆ ಪರಿಹಾರ ಸಿಗೊಲ್ಲ ಅಂದ್ರೆ ನೀವಾದ್ರೂ ಬರಬಹುದಲ್ಲ? ಡಿಕೆಶಿ ಹೇಳಿಕೆಗೆ ಆರ್ ಅಶೋಕ್ ತಿರುಗೇಟು

By Ravi JanekalFirst Published Jul 21, 2024, 10:38 AM IST
Highlights

ಡಿಕೆ ಶಿವಕುಮಾರ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಅವರು ಮನೆ ಬಿಟ್ಟು ಬರಬೇಕು. ಆದರೆ ತಾವು ಬರೊಲ್ಲ, ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗೊಲ್ಲ ಅಂತಾರೆ. ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗೊಲ್ಲ ಅಂತೀರಿ ನೀವಾದರೂ ಬನ್ನಿ ಎಂದು ಡಿಕೆ ಶಿವಕುಮಾರ ಹೇಳಿಕೆಗೆ ವಿಪಕ್ಷ ನಾಯಕ ಆರ್‌ ಅಶೋಕ್ ತಿರುಗೇಟು ನೀಡಿದರು.

ಹಾಸನ (ಜು.21): ಡಿಕೆ ಶಿವಕುಮಾರ ಬಂದರೆ ಪ್ರಯೋಜನ ಆಗುತ್ತೆ ಅಂದರೆ ಅವರು ಮನೆ ಬಿಟ್ಟು ಬರಬೇಕು. ಆದರೆ ತಾವು ಬರೊಲ್ಲ, ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗೊಲ್ಲ ಅಂತಾರೆ. ಕೇಂದ್ರ ಸಚಿವರು ಬಂದರೆ ಪರಿಹಾರ ಸಿಗೊಲ್ಲ ಅಂತೀರಿ ನೀವಾದರೂ ಬನ್ನಿ ಎಂದು ಡಿಕೆ ಶಿವಕುಮಾರ ಹೇಳಿಕೆಗೆ ವಿಪಕ್ಷ ನಾಯಕ ಆರ್‌ ಅಶೋಕ್ ತಿರುಗೇಟು ನೀಡಿದರು.

ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಮಳೆಯಿಂದ ಮನೆಹಾನಿ ಪ್ರದೇಶಕ್ಕೆ ಭೇಟಿ ನೀಡಿದ ವಿಚಾರದ ಬಗ್ಗೆ ಟೀಕಿಸಿದ್ದ ಡಿಕೆ ಶಿವಕುಮಾರ ಹೇಳಿಕೆಗೆ ಹಾಸನ ಜಿಲ್ಲೆಯ ಕೊಲ್ಲಹಳ್ಳಿಯಲ್ಲಿ ಮಾತನಾಡಿದ ಅವರು. ಮಳೆಹಾನಿ ಪ್ರದೇಶಕ್ಕೆ ನೀವು ಬರಲು ಆಗೊಲ್ವ? ನಿಮಗೆ ಬರುವ ಯೋಗ್ಯತೆ ಇಲ್ವ? ನೀವು ಬಂದು ನೆರೆ ಸಂತ್ರಸ್ತರಿಗೆ ಪರಿಹಾರ ಒದಗಿಸಿ ಆಮೇಲೆ ಬೇರೆಯವರಿಗೆ ಬುದ್ಧಿ ಹೇಳಿ. ನೀವು ಕೊಡುತ್ತಿರುವುದು ಎನ್‌ಡಿಆರ್‌ಎಫ್ ಹಣ, ಅದರ ಹೊರತಾಗಿ ಸರ್ಕಾರ ನಯಾಪೈಸೆ ಕೊಟ್ಟಿಲ್ಲ ಎಂದು ಕಿಡಿಕಾರಿದರು.

Latest Videos

ದೇವರ ಕೃಪೆಯಿಂದ ರಾಜ್ಯದಲ್ಲಿ ಮಳೆ ಆಗ್ತಿದೆ: ಡಿಕೆ ಶಿವಕುಮಾರ

ಕುಮಾರಸ್ವಾಮಿ ಬರಲು ರೈಟ್ಸ್ ಇದೆ, ಕೇಳಲು ರೈಟ್ಸ್ ಇದೆ.  ಕೇಂದ್ರ ಮಂತ್ರಿ ಇದ್ದಾರೆ ರಾಷ್ಟ್ರೀಯ ಹೆದ್ದಾರಿ ಕೇಂದ್ರಕ್ಕೆ ಸೇರುತ್ತೆ. ಎಲ್ಲರೂ ಒಕ್ಕೂಟದ ವ್ಯವಸ್ಥೆಯಲ್ಲಿದ್ದೀರಿ. ಕುಮಾರಸ್ವಾಮಿ ಅವರ ಕೈಯಲ್ಲಿ ಆಗೊಲ್ಲ ಅಂದ್ರೆ ನೀವು ಬಂದು ಕೆಲಸ ಮಾಡಿ. ಕುಮಾರಸ್ವಾಮಿ ದೇಶ ಎಲ್ಲಾ ಸುತ್ತಬೇಕು, ಅದರ ನಡುವೆ ಕರ್ನಾಟಕಕ್ಕೆ ಆದ್ಯತೆ ಕೊಟ್ಟು ಬರುತ್ತಿದ್ದಾರೆ, ನಿಮಗೇಕೆ ಬರಲು ಆಗುತ್ತಿಲ್ಲ ಎಂದು ಪ್ರಶ್ನಿಸಿದರು.

ನೀವು ಕನ್ನಡಿಗರಾಗಿದ್ರೆ ಫೋನ್‌ಪೇ ಆ್ಯಪ್‌ ಅನ್‌ಇನ್‌ಸ್ಟಾಲ್‌ ಮಾಡಿ; ಟ್ವಿಟರ್‌ ಟ್ರೆಂಡಿಂಗ್!

ಈ ಸರ್ಕಾರ ಸತ್ತು ಹೋಗಿದೆ. ಸರ್ಕಾರ ಬದುಕಿದ್ದರೆ ತಾನೇ ಏನಾದರೂ ಕೇಳೋದು. ಸರ್ಕಾರ ಸ್ಕ್ಯಾಂಡಲ್‌, ಸ್ಕ್ಯಾಮ್‌ಗಳಲ್ಲಿ ಮುಳುಗಿ ಉತ್ತರ ಕೊಡಲು ಆಗುತ್ತಿಲ್ಲ. ಸರ್ಕಾರ ಬದುಕಿದೆ ಅಂತಾ ಮೊದಲು ತೋರಿಸಲಿ ಆಮೇಲೆ ಮಾತಾಡಲಿ ಎಂದು ತಿರುಗೇಟು ನೀಡಿದರು.

click me!