ಯೋಗಿ ಆದಿತ್ಯನಾಥ್‌ ಕ್ಯಾಬಿನೆಟ್‌ನ ಇಬ್ಬರು ಸಚಿವರು ರಾಜೀನಾಮೆ?

Published : Jul 20, 2022, 12:54 PM IST
ಯೋಗಿ ಆದಿತ್ಯನಾಥ್‌ ಕ್ಯಾಬಿನೆಟ್‌ನ ಇಬ್ಬರು ಸಚಿವರು ರಾಜೀನಾಮೆ?

ಸಾರಾಂಶ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಅವರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಅನುಮಾನಗಳು ಕಾಡಿವೆ. ಜಲಶಕ್ತಿ ಸಚಿವ ದಿನೇಶ್‌ ಖಟಿಕ್ ಹಾಗೂ ಲೋಕೋಪಯೋಗಿ ಸಚಿವ ಜಿತಿನ್‌ ಪ್ರಸಾದ್‌ ಕೂಡ ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿದ್ದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ತಯಾರಿಯಲಿದ್ದಾರೆ. ಗೃಹ ಸಚಿವ ಅಮಿತ್‌ ಶಾಗೆ ರಾಜೀನಾಮೆ ಪತ್ರದೊಂದಿಗೆ ಇನ್ನೊಂದು ಪತ್ರವನ್ನೂ ಅವರು ಸಲ್ಲಿಕೆ ಮಾಡಿದ್ದಾರೆ.  

ಲಕ್ನೋ (ಜುಲೈ 20): ಯೋಗಿ ಸರ್ಕಾರದ ಸಂಪುಟದಲ್ಲಿ ಎಲ್ಲವೂ ಸರಿಯಿಲ್ಲವೇ? ಈ ಪ್ರಶ್ನೆ ಮಂಗಳವಾರ ಸಂಜೆಯಿಂದಲೇ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ನಡುವೆ ಜಲಶಕ್ತಿ (ನೀರಾವರಿ ಮತ್ತು ಜಲಸಂಪನ್ಮೂಲ ಇಲಾಖೆ) ರಾಜ್ಯ ಸಚಿವ ದಿನೇಶ್ ಖಟಿಕ್ ಅವರು ದೇಶದ ಗೃಹ ಸಚಿವ ಅಮಿತ್ ಶಾ ಅವರಿಗೆ ರಾಜೀನಾಮೆ ಪತ್ರದೊಂದಿಗೆ ಇನ್ನೊಂದು ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ. ಆದರೆ, ಇದನ್ನು ಸರ್ಕಾರ ಇನ್ನೂ ದೃಢಪಡಿಸಿಲ್ಲ. ಈ ವರದಿಗಳು ಕೇವಲ ವದಂತಿ ಎಂದು ಸರ್ಕಾರ ಹೇಳಿದೆ. ಇನ್ನೊಂದೆಡೆ ಲೋಕೋಪಯೋಗಿ ಇಲಾಖೆ ಸಚಿವ ಜಿತಿನ್ ಪ್ರಸಾದ್ ಕೂಡ ಸರ್ಕಾರದ ವಿರುದ್ಧಸಿಟ್ಟಿಗೆದ್ದಿದ್ದಾರೆ. ಇಂದು ದೆಹಲಿಯಲ್ಲಿ ಗೃಹ ಸಚಿವ ಶಾ ಅವರನ್ನು ಭೇಟಿ ಮಾಡಲಿದ್ದಾರೆ. ‘ದಲಿತನಾದ ನನ್ನ ಮಾತನ್ನು ಅಧಿಕಾರಿಗಳು ಕೇಳುವುದೇ ಇಲ್ಲ.ಇಲ್ಲಿಯವರೆಗೆ ನಾನು ಹೇಳಿದ ಯಾವ ಕೆಲಸವೂ ಇಲಾಖೆಯಲ್ಲಿ ಆಗಿಲ್ಲ. ದಲಿತ ಸಮಾಜದ ರಾಜ್ಯ ಸಚಿವನಾಗಿದ್ದರೂ ನನ್ನ ಆದೇಶದ ಮೇಲೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇಲಾಖೆ ವತಿಯಿಂದ ಯಾವೆಲ್ಲಾ ಕಾರ್ಯಕ್ರಮಗಳು, ಕಾಮಗಾರಿಗಳು ನಡೆಯುತ್ತಿವೆ ಎನ್ನುವ ಮಾಹಿತಿಯನ್ನು ನನಗೆ ನೀಡಬೇಕಲ್ಲವೆ? ಇಂಥ ಅಧಿಕಾರಿಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ?' ಎಂದು ದಿನೇಶ್‌ ತಮ್ಮ ಪತ್ರದಲ್ಲಿ ಬರೆದ್ದಾರೆ ಎಂದು ಹೇಳಲಾಗಿದೆ.

ಮಂಗಳವಾರವೇ ಸೂಚನೆ ನೀಡಿದ್ದ ಸಚಿವರು: ಇನ್ನು ದಿನೇಶ್‌ (Dinesh Khatik) ಹಾಗೂ ಜಿತಿನ್‌ (Jitin Prasad) ಅವರ ರಾಜೀನಾಮೆ ನೀಡಬಹುದು ಎನ್ನುವುದಕ್ಕೆ ಇದೊಂದೆ ಕಾರಣವಲ್ಲ. ಎರಡು ಕಾರಣಗಳು ಇದರ ಹಿಂದಿವೆ. ಮೊದಲ ಸೂಚನೆ ಏನೆಂದರೆ, ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಜಲಶಕ್ತಿ ರಾಜ್ಯ ಸಚಿವ ದಿನೇಶ್ ಖಟಿಕ್ ಲಖನೌನಲ್ಲಿರುವ ತಮ್ಮ ಅಧಿಕೃತ ನಿವಾಸಕ್ಕೆ ಹೋಗಲಿಲ್ಲ. ಸರ್ಕಾರಿ ಕಾರು ಮತ್ತು ಸೆಕ್ಯುರಿಟಿಯನ್ನು ಬಿಟ್ಟು ಮೀರತ್‌ಗೆ ಹೋಗಿದ್ದಾರೆ.  ಇನ್ನು ಲೋಕೋಪಯೋಗಿ ಇಲಾಖೆಯ ಕ್ಯಾಬಿನೆಟ್ ಸಚಿವ ಜಿತಿನ್ ಪ್ರಸಾದ್ ಅವರು ತಮ್ಮ ಒಎಸ್‌ಡಿಯನ್ನು ತೆಗೆದುಹಾಕಿದ್ದರಿಂದ ಕೋಪಗೊಂಡಿದ್ದಾರೆ ಎಂದು ಹೇಳಲಾಗಿದೆ. ಮಂಗಳವಾರ ಇಡೀ ದಿನ ಮಾಧ್ಯಮದಿಂದ ಅವರು ದೂರ ಉಳಿದಿದ್ದರು. ಸಂಪುಟ ಸಭೆಯಲ್ಲೂ ಹಿಂಬದಿಯ ಗೇಟಿನಿಂದ ಬಂದು ಅಲ್ಲಿಂದ ತೆರಳಿದರು. ಮಾಧ್ಯಮಗಳು ಅವರಿಗಾಗಿ ಕಾಯುತ್ತಲೇ ಇದ್ದವು. ಸಂಜೆಯ ಹೊತ್ತಿಗೆ, ಜಿತಿನ್ ತಮ್ಮ ತವರು ಜಿಲ್ಲೆ ಶಹಜಹಾನ್‌ಪುರವನ್ನು ತಲುಪಿದ್ದಾರೆ. ಜಿತಿನ್ ಜೊತೆ ಮಾತನಾಡಲು ಮಾಧ್ಯಮಗಳು ಪ್ರಯತ್ನಿದವಾದರೂ, ಅವರಉ ಕರೆ ಸ್ವೀಕರಿಸಿಲ್ಲ.

ಭ್ರಷ್ಟಾಚಾರದ ಕಾರಣಕ್ಕೆ ಜಿತಿನ್‌ ಪ್ರಸಾದ್‌ ಒಎಸ್‌ಡಿ ವಜಾ: ಕಾಂಗ್ರೆಸ್ ನಲ್ಲಿ ಗಾಂಧಿ ಕುಟುಂಬಕ್ಕೆ ಆಪ್ತರು ಹಾಗೂ ಬಲಿಷ್ಠರೆನಿಸಿಕೊಂಡಿದ್ದ ಜಿತಿನ್ ಪ್ರಸಾದ್ ಅವರಿಗೆ ಯೋಗಿ ಸರಕಾರದಲ್ಲಿ (Yogi adityanath) ಬೃಹತ್ ಲೋಕೋಪಯೋಗಿ ಇಲಾಖೆಯನ್ನು ನೀಡಲಾಗಿದೆ. ತಮ್ಮ ಇಲಾಖೆಯಲ್ಲಿ ನಡೆದ ವರ್ಗಾವಣೆ ಅವಧಿಯಲ್ಲಿ ವರ್ಗಾವಣೆಯಲ್ಲಿ ಹಲವು ಪ್ರಮುಖ ಅಕ್ರಮಗಳು ಬಯಲಿಗೆ ಬಂದಿವೆ. ಇದಾದ ಬಳಿಕ ಸಿಎಂ ಸಮಿತಿ ರಚಿಸಿ ತನಿಖೆಗೆ ಒಪ್ಪಿಸಿದ್ದಾರೆ. ವರದಿಯ ನಂತರ, ಅವರ ಒಎಸ್‌ಡಿ (OSD) ಮೇಲೆ ಮೊದಲ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಅನಿಲ್‌ ಪಾಂಡೆ ಅವರನ್ನು ದೆಹಲಿಯಿಂದ ಲಕ್ನೋಗೆ ಇಲಾಖೆಯ ಒಎಸ್‌ಡಿಯಾಗಿ ಜಿತಿನ್‌ ಕರೆತಂದಿದ್ದರು. ಆದರೆ, ಭ್ರಷ್ಟಾಚಾರದ ಆರೋಪದ ಮೇಲೆ ಇವರನ್ನು ಸರ್ಕಾರ ತೆಗೆದುಹಾಕಿದೆ. ಇದು ಜಿತಿನ್‌ ಪ್ರಸಾದ್ ಅವರ ಸಿಟ್ಟಿಗೆ ಕಾರಣವಾಗಿದೆ. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ರನ್ನು ಭೇಟಿ ಮಾಡಿದ್ದಾರೆ. ಬುಧವಾರ ದೆಹಲಿ ತೆರಳಿ ಈ ವಿಚಾರವನ್ನು ಕೇಂದ್ರದ ಗಮನಕ್ಕೂ ತರಲಿದ್ದಾರೆ ಎನ್ನಲಾಗಿದೆ.

100 ದಿನವಾದರೂ ಕಾಮಗಾರಿ ನೀಡದ ಸರ್ಕಾರ: ಜಲಶಕ್ತಿ ರಾಜ್ಯ ಸಚಿವ ದಿನೇಶ್ ಖಟಿಕ್ ತಮ್ಮ ಇಲಾಖೆಯ ಹಿರಿಯ ಸಚಿವ ಸ್ವತಂತ್ರ ದೇವ್ ಸಿಂಗ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲಾಖೆಯ ಅಧಿಕಾರಿಗಳಾಗಲಿ, ಅವರದೇ ಇಲಾಖೆಯ ಹಿರಿಯ ಸಚಿವರಾಗಲಿ ದಿನೇಶ್‌ ಖಾಟಿಕ್‌ ಮಾತನ್ನು ಕೇಳುತ್ತಿಲ್ಲ ಎಂಬ ಆರೋಪವಿದೆ. ಸರಕಾರ 100 ದಿನ ಪೂರೈಸಿದ್ದರೂ ಇವರಿಗೆ ಯಾವುದೇ ಕೆಲಸ ನೀಡಿಲ್ಲ. ಮಂಗಳವಾರ ಸಚಿವ ಸಂಪುಟ ಸಭೆಯಲ್ಲಿ ಖಟಿಕ್‌ ಭಾಗವಹಿಸಿದ್ದರು. ಇದಾದ ಬಳಿಕ ಭ್ರದತಾ ತಂಡ ಹಾಗೂ ಸರ್ಕಾರಿ ಕಾರನ್ನು ಬಿಟ್ಟು ಮೀರತ್ ನ ಗಂಗಾನಗರದಲ್ಲಿರುವ ಅವರ ಮನೆಗೆ ತೆರಳಿದ್ದರು. ಇದಕ್ಕೂ ಮುನ್ನ ಸಂಘಟನಾ ಸಚಿವ ಸುನಿಲ್ ಬನ್ಸಾಲ್ ಅವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು. ಇದರಿಂದ ಕೋಪಗೊಂಡ ಸಚಿವರು 5 ಮಂದಿಗೆ ಪತ್ರವನ್ನೂ ಕಳುಹಿಸಿದ್ದಾರೆ. ಖಟಿಕ್‌ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ತಮ್ಮ ಇಲಾಖೆಯ ಕ್ಯಾಬಿನೆಟ್ ಸಚಿವರ ಜತೆ ದಿನೇಶ್ ಖಟಿಕ್‌ ಹೊಂದಾಣಿಕೆ ಮಾಡಿಕೊಳ್ಳುತ್ತಿರಲಿಲ್ಲ. ಸುಮಾರು 10 ದಿನಗಳ ಹಿಂದೆ ದಿನೇಶ್ ಖಟಿಕ್ ಬಹಳ ಕೋಪಗೊಂಡಿದ್ದರು. ನಂತರ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ದಿನೇಶ್‌ ಖಟಿಕ್‌ ಮನೆಗೆ ತೆರಳಿ ಸಮಾಧಾನ ಮಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!