
ಅಮರಾವತಿ: ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಟಿಡಿಪಿ ನಾಯಕ ಹಾಗೂ ನಿಯೋಜಿತ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಈಗ ಕಾಂಗ್ರೆಸ್‌ನ ಗ್ಯಾರಂಟಿ ಮಾದರಿಗಳ ತಮ್ಮ 'ಸೂಪರ್6' ಭರವಸೆಗಳನ್ನು ಈಡೇರಿಸುವ ಒತ್ತಡಕ್ಕೆ ಸಿಲುಕಲಿದ್ದಾರೆ. ಏಕೆಂದರೆ ರಾಜ್ಯದ ಬೊಕ್ಕಸಕ್ಕೆ ಇಷ್ಟು ಹಣ ನೀಡಲು ಸಾಧ್ಯವೇ ಎಂಬ ಪ್ರಶ್ನೆ ಎದ್ದಿದೆ.
ಸಾಮಾಜಿಕ ಪಿಂಚಣಿ ಯೋಜನೆಯಡಿ, ನಾಯ್ಡು ಅವರು ಮಾಸಿಕ ಪಿಂಚಣಿಯನ್ನು ಈಗಿರುವ 3,000 ರು.ಗಳಿಂದ 4,000 ರು.ಗೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ, ಏಪ್ರಿಲ್, ಮೇ ಮತ್ತು ಜೂನ್‌ನ ತಲಾ 1000 ರು. ಹಿಂಬಾಕಿಯನ್ನೂ 65 ಲಕ್ಷ ಫಲಾನುಭವಿಗಳಿಗೆ ತಿಳಿಸಿದ್ದರು. ಇದನ್ನು ಭರಿಸಲು ಈಗ ಜುಲೈ ಒಳಗೆ 4500 ಕೋಟಿ ರು. ಬೇಕು. ಕರ್ನಾಟಕ ರೀತಿ ಮಹಿಳೆಯರಿಗೆ ಉಚಿತ ಸರ್ಕಾರಿ ಬಸ್ ಪ್ರಯಾಣದ ಭರವಸೆ 2ನೇ ಭರವಸೆಯಾಗಿದೆ. ಇದಕ್ಕೆ ಆಂಧ್ರಪ್ರದೇಶ ಸಾರಿಗೆ ನಿಗಮಕ್ಕೆ ಮಾಸಿಕ 450-500 ಕೋಟಿ ರು.ಗಳನ್ನು ಸರ್ಕಾರ ನೀಡಬೇಕು. ಆದರೆ ರಾಜ್ಯದಲ್ಲಿ ಮಾಸಿಕ ಎಷ್ಟು ಮಹಿಳೆಯರು ಸಂಚರಿಸುತ್ತಾರೆ ಎಂಬ ಅಧ್ಯಯನವೇ ಈವರೆಗೂ ಆಗಿಲ್ಲ.
ಮಣಿಪುರ ವಿಚಾರವನ್ನು ಬೇಗ ಇತ್ಯರ್ಥ ಮಾಡಿ, ಹೊಸ ಸರ್ಕಾರದ ಬೆನ್ನಲ್ಲಿಯೇ ಆರೆಸ್ಸೆಸ್ ತಾಕೀತು!
'ಸೂಪರ್‌ಸಿಕ್ಸ್' ಅಡಿಯಲ್ಲಿ ಟಿಡಿಪಿಯು ಪ್ರತಿ ವರ್ಷ ಶಾಲೆಗೆ ಹೋಗುವ ಮಗುವಿಗೆ 15,000 ರು. ನೀಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿತ್ತು, ಇನ್ನು ರಾಜ್ಯದಲ್ಲಿ ಪ್ರತಿ ಮನೆಗೆ ಇಂತಿಷ್ಟು ಉಚಿತ ಎಲ್‌ಪಿಜಿ ಗ್ಯಾಸ್ ಸಿಲಿಂಡರ್, ಪ್ರತಿ ರೈತನಿಗೆ ವಾರ್ಷಿಕ 20 ಸಾವಿರ ರು. ನೀಡುವ ಭರವಸೆಯನ್ನೂ ನಾಯ್ಡು ನೀಡಿದ್ದರು. ಆದರೆ ಈ ಸೂಪರ್ 6 ಗ್ಯಾರಂಟಿಗಳನ್ನು ಭರಿಸಲು ವರ್ಷಕ್ಕೆ 1.21 ಲಕ್ಷ ಕೋಟಿ ರು. ಬೇಕು.
ಇಂದು ಟಿಡಿಪಿ ಶಾಸಕಾಂಗ ಪಕ್ಷದ ಸಭೆ: ನಾಳೆ ಆಂಧ್ರಹೊಸ ಸರ್ಕಾರ ರಚನೆ
ಅಮರಾವತಿ: ಅಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿಡಿಪಿ ಮಂಗಳವಾರ ತನ್ನ ಶಾಸಕಾಂಗ ಪಕ್ಷದ ಸಭೆ ನಡೆಸಿ ಚಂದ್ರಬಾಬು ನಾಯ್ಡುರನ್ನು ನಾಯಕರನ್ನಾಗಿ ಆರಿಸಲಿದೆ. ಸಭೆಯ ಬಳಿಕ ಟಿಡಿಪಿ, ಜನಸೇನಾ ಹಾಗೂ ಬಿಜೆಪಿಯನ್ನೊಳಗೊಂಡ ಎನ್‌ಡಿಎ ಮೈತ್ರಿಕೂಟ ರಾಜಭವನಕ್ಕೆ ತೆರಳಿ ರಾಜ್ಯಪಾಲ ಅಬ್ದುಲ್ ನಜೀ಼ರ್‌ರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ. ಮೂಲಗಳ ಪ್ರಕಾರ ಮಂಗಳವಾರ ರಾತ್ರಿಯೇ ಸಂಪುಟವನ್ನು ಅಂತಿಮಗೊಳಿಸಲಿದ್ದು, ಬುಧವಾರ ಬೆಳಗ್ಗೆ 11:27ಕ್ಕೆ ಚಂದ್ರಬಾಬು ನಾಯ್ಡು ನಗರದ ಗನ್ನಾವರಂ ವಿಮಾನ ನಿಲ್ದಾಣ ಬಳಿಯ ಕೇಸರಪಳ್ಳಿ ಐಟಿ ಪಾರ್ಕ್‌ನಲ್ಲಿ ಪ್ರಮಾಣ ಸ್ವೀಕರಿಸಲಿದ್ದಾರೆ.
ಆಂಧ್ರಪ್ರದೇಶದ 175 ಕ್ಷೇತ್ರಗಳ ವಿಧಾನಸಭೆಯಲ್ಲಿ ಟಿಡಿಪಿ ಭರ್ಜರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ ಎನ್‌ಡಿಎ ಮೈತ್ರಿಕೂಟ 164 ಕ್ಷೇತ್ರಗಳಲ್ಲಿ ಜಯ ಕಂಡಿದೆ.
ಮೊದಲ ದಿನವೇ ಮೋದಿ ಬಂಪರ್ ಕೊಡುಗೆ ಘೋಷಣೆ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.