
ಬೆಳಗಾವಿ, (ಜ.17): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅಸಮಾಧಾನಿತ ಶಾಸಕರಿಗೆ ದೆಹಲಿಗೆ ಬರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಲಾವ್ ನೀಡಿದ್ದಾರೆ.
"
ಹೌದು...ಸಚಿವ ಸ್ಥಾನ ಕೈತಪ್ಪಿರುವುದರಿಂದ ಅಸಮಾಧಾನಗೊಂಡಿರುವ ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜೊತೆ ಬೆಳಗಾವಿಯಲ್ಲಿ ಅಮಿತ್ ಶಾ ಅವರನ್ನ ಭೇಟಿ ಮಾಡಿದರು.
ಸಿಡಿದೆದ್ದ ರೇಣುಕಾಚಾರ್ಯ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಅತೃಪ್ತ ಶಾಸಕರು
ಈ ವೇಳೆ ಅಸಮಾಧಾನ ಶಾಸಕರ ಪ್ರತಿನಿಧಿಯಾಗಿ ಹೋಗಿದ್ದ ಶಾಸಕ ಅರವಿಂದ್ ಬೆಲ್ಲದ್‌ಗೆ ದೆಹಲಿಗೆ ಬನ್ನಿ ಮಾತಾಡೋಣ ಎಂದು ಅಮಿತ್ ಶಾ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಅಮಿತ್ ಶಾ ಊಟ ಮಾಡುತ್ತಿದ್ದಂತೆ ಪ್ರತ್ಯೇಕ ಮಾತುಕತೆ ಮಾಡಬೇಕೆಂದುಕೊಂಡು ಕೆಲ ಶಾಸಕರು ಬಂದಿದ್ದರು. ಆದ್ರೆ, ಅರವಿಂದ್ ಬೆಲ್ಲದ್ ಕೇವಲ ಹಾರ ಹಾಕಿ ವಾಪಾಸ್ ಆಗಿದ್ದು, ಅಸಮಾಧಾನಿತ ಶಾಸಕರುಗಳಿಗೆ ನಿರಾಸೆಯಾಗಿದೆ.
ಹಾಗಾದ್ರೆ, ಸಿ.ಟಿ.ರವಿ ನೇತೃತ್ವದಲ್ಲಿ ದೆಹಲಿಯಲ್ಲಿ ಶಮನವಾಗುತ್ತಾ ರೆಬಲ್ ಶಾಸಕರ ಅಸಮಾಧಾನ ಎನ್ನುವುದನ್ನು ಕಾದುನೋಡಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.