ಸಿಡಿದೆದ್ದ ರೇಣುಕಾಚಾರ್ಯ: ಶಕ್ತಿ ಪ್ರದರ್ಶನಕ್ಕೆ ಮುಂದಾದ ಅತೃಪ್ತ ಶಾಸಕರು

By Suvarna News  |  First Published Jan 17, 2021, 3:58 PM IST

ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಇದೀಗ ಅತೃಪ್ತ ಶಾಸಕರೆಲ್ಲರೂ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.


ದಾವಣಗೆರೆ, (ಜ.17): ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಇದು ಸದ್ಯಕ್ಕೆ ಶಮನವಾಗೋ ಲಕ್ಷಣಗಳು ಕಾಣುತ್ತಿಲ್ಲ.

"

Tap to resize

Latest Videos

ಹೌದು...ಇದಕ್ಕೆ ಪೂರಕವೆಂಬಂತೆ ಅಸಮಾಧಾನಗೊಂಡ ಶಾಸಕರೆಲ್ಲರೂ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

ಬಹಿರಂಗ ಹೇಳಿಕೆ ನೀಡುತ್ತಿರೋ ಅಸಮಾಧಾನಿತ ಶಾಸಕರಿಗೆ ಬಿಜೆಪಿ ಸಾರಥಿ ಪರೋಕ್ಷ ಎಚ್ಚರಿಕೆ 

ಹೊನ್ನಾಳಿಯಲ್ಲಿ ಇಂದು (ಭಾನುವಾರ) ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಅಸಮಾಧಾನಗೊಂಡ ಶಾಸಕರೆಲ್ಲಾ ನನಗೆ ಕಾಲ್ ಮಾಡಿದ್ದು, ನಾವೇಲ್ಲಾ ಒಂದು ಕಡೆ ಸೇರುತ್ತಿದ್ದೇವೆ. ಆದ್ರೆ ಯಾವುದೇ ಹೋಟೆಲ್ ರೇಸಾರ್ಟ್‌ನಲ್ಲಿ ಅಲ್ಲ ಮನೆಗಳಲ್ಲೇ ಸಭೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
 
ಈ ಹಿಂದೆ ರೇಸಾರ್ಟ್ ರಾಜಕಾರಣ ಮಾಡಿ ತಪ್ಪು ಮಾಡಿದ್ದೇವೆ. ಮತ್ತೆ ಅಂತಹ ತಪ್ಪನ್ನು ಮಾಡುವುದಿಲ್ಲ. ನಮ್ಮ ಹೋರಾಟ ಯಡಿಯೂರಪ್ಪನ ವಿರುದ್ದ ಅಲ್ಲ. ಯಡಿಯೂರಪ್ಪ ಯಾವಾಗಲು ನಮ್ಮ ನಾಯಕರೇ. ಅವರ ಬಗ್ಗೆ ಇಲ್ಲದ ಮಾತನಾಡಿದ್ರೆ ಬಾಯಲ್ಲಿ ಹುಳು ಬೀಳುತ್ತೆ. ಸಚಿವ ಸಂಪುಟದಲ್ಲಿ ಆಗಿರುವ ವ್ಯತ್ಯಾಸದ ಬಗ್ಗೆ ನಮ್ಮ ಹೋರಾಟ. ನಾನು ಅತೃಪ್ತರ ನಾಯಕನಲ್ಲ. ರೆಬೆಲ್ ಅಲ್ಲ ಎಂದರು.

click me!