ಮೀಸಲಾತಿ ಅನ್ನೋದು ಎಂದಿಗೂ ಧರ್ಮಾಧಾರಿತವಾಗಿ ಇರಬಾರದು. ಹಿಂದುಳಿದ ಸಮುದಾಯಗಳಿಗೆ ಇರಬೇಕು ನಾಳೆ ಯಾವುದೋ ಸರ್ಕಾರ ಬಂದು ಹಿಂದುಗಳಿಗೆ ಮೀಸಲಾತಿ ಕೊಡ್ತೀವಿ ಅಂದ್ರೆ ನಡೆಯುತ್ತಾ? ಎಂದು ಅಮಿತ್ ಶಾ ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿ ತೆಗೆದಿರೋ ವಿಚಾರದ ಬಗ್ಗೆ ಮಾತನಾಡಿದರು.
ಬೆಂಗಳೂರು (ಏ.30): ಚುನಾವಣೆ ಹಂತದಲ್ಲಿ ರಾಜ್ಯದಲ್ಲಿ ಕೋಲಾಹಲಕ್ಕೆ ಹಾಗೂ ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮೀಸಲಾತಿ ವಿಚಾರದ ಬಗ್ಗೆಯೂ ಅಮಿತ್ ಶಾ ಮಾತನಾಡಿದರು. ಆದರೆ, ತಮ್ಮ ಎಲ್ಲಾ ಮಾತುಗಳಲ್ಲಿ ಮುಸ್ಲಿಮರಿಗೆ ಮೀಸಲಾತಿಯನ್ನು ತೆಗೆದಿದ್ದನ್ನು ಸಮರ್ಥನೆ ಮಾಡಿಕೊಂಡ ಅಮಿತ್ ಶಾ, ಇಂಥದ್ದೊಂದು ನಿರ್ಧಾರವನ್ನು ರಾಜ್ಯ ಸರ್ಕಾರ ಒಂದು ವರ್ಷದ ಹಿಂದೆಯೇ ಮಾಡಬೇಕಿತ್ತು ಎಂದು ಅಭಿಪ್ರಾಯಪಟ್ಟರು. ಅದಲ್ಲದೆ, ಧರ್ಮಾಧಾರಿತವಾಗಿ ಮೀಸಲಾತಿ ನೀಡೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ. ಅದರೊಂದಿಗೆ ಓಲೈಕೆ ರಾಜಕಾರಣ, ಮೀಸಲಾತಿ ಏರಿಕೆ ಮಾಡುವ ಸಿದ್ಧರಾಮಯ್ಯ ಅವರ ಮಾತನ್ನು ಟೀಕೆ ಮಾಡಿದರು. ಅಭಿವೃದ್ಧಿ ಮೇಲೆ ಇಷ್ಟೊಂದು ನಂಬಿಕೆ ಇದ್ರೆ.. ಮೀಸಲಾತಿ ಬಗ್ಗೆ ಆತುರದ ನಿರ್ಧಾರಗಳನ್ನ ಏಕೆ ತೆಗೆದುಕೊಳ್ಳಬೇಕಿತ್ತು ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ಅಜಿತ್ ಹನುಮಕ್ಕನವರ್ ಅವರ ಪ್ರಶ್ನೆಗೆ, ಇದನ್ನು ಬೇಗ ತೆಗೆದುಕೊಂಡಿಲ್ಲ. ತುಂಬಾ ತಡವಾಗಿ ತೆಗೆದುಕೊಂಡಿದ್ದೇವೆ. ನಾವು ಇನ್ನೂ ಬೇಗನೇ ತೆಗೆದುಕೊಳ್ಳಬೇಕಿತ್ತು. ಈ ದೇಶದ ಸಂವಿಧಾನದ ಪ್ರಕಾರ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವಂತಿಲ್ಲ. ಧರ್ಮದ ಆಧಾರದಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದ 4 ಪರ್ಸೆಂಟ್ ಮೀಸಲಾತಿ ಸಿಕ್ಕಿದೆ, ಅದು ರದ್ದು ಮಾಡಲೇಬೇಕಿತ್ತು. ಅದನ್ನ ನಾವು ಮಾಡಿದ್ದೇವೆ. ಅದರೆ, ತುಂಬಾ ತಡವಾಗಿ ಆಗಿದೆ. ಒಂದು ವರ್ಷ ಮುಂಚೆಯೇ ಮಾಡಬೇಕಿತ್ತು ಎಂದು ಅಮಿತ್ ಶಾ ಉತ್ತರಿಸಿದರು.
ಈ ವಿಚಾರವೀಗ ಸುಪ್ರೀಂ ಕೋರ್ಟ್‌ನಲ್ಲಿದೆಯಲ್ಲ ಎನ್ನುವ ಪ್ರಶ್ನೆಗೆ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು ಒಳ್ಳೆಯ ವಿಚಾರ ಇದನ್ನು ಸ್ವತಃ ಸುಪ್ರೀಂ ಕೋರ್ಟ್ ನಿರ್ಧಾರ ಮಾಡಲಿದೆ ಎಂದರು. ಕೆಲವರು ಇದನ್ನ ಮತ್ತೊಂದು ರೀತಿಯ ಓಲೈಕೆ ರಾಜಕಾರಣ ಅಂತಾರೆ.. ಅವರು 4% ಮೀಸಲಾತಿ ಕೊಟ್ಟು ಓಲೈಕೆ ಮಾಡಿದ್ರು, ನೀವು ಅದನ್ನು ಕಿತ್ತು ಇನ್ನೊಬ್ಬರಿಗೆ ಕೊಟ್ಟು ಓಲೈಕೆ ಮಾಡುತ್ತಿದ್ದೀರಿ? ಎನ್ನುವ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ, ಮೀಸಲಾತಿ ಕೊಡೋದು, ಬಿಡೋದು ಸಂವಿಧಾನದ ಪ್ರಕಾರ ಆಗಬೇಕು. ಸಂವಿಧಾನದ ಆಧಾರದಲ್ಲಿ ದೇಶ ನಡೆಯಬೇಕು. ಸಂವಿಧಾನದಲ್ಲಿ ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ಅವಕಾಶ ಇದ್ರೆ ಕಾಂಗ್ರೆಸ್ ನಾಯಕರು ಹೇಳಬೇಕು. ಅವರು ಹೇಳಲಿಲ್ಲ ಅಂದ್ರೆ ಇದನ್ನ ಓಲೈಕೆ ರಾಜಕಾರಣ ಅಂತ ಹೇಳಬಹುದು. ಅವರು ಮಾಡಿದ್ದ ತಪ್ಪನ್ನ ನಾವು ಸರಿ ಮಾಡಿದ್ದೇವೆ ಎಂದರು.
ತೆಲಂಗಾಣದಲ್ಲೂ ಅಧಿಕಾರಕ್ಕೆ ಬಂದರೆ, ಮುಸ್ಲಿಂ ಮೀಸಲಾತಿ ತೆಗೆಯೋದಾಗಿ ಹೇಳಿದ್ದೀರಿ, 'ಖಂಡಿತ, ಮುಸ್ಲಿಂ ಮೀಸಲಾತಿ ಅನ್ನೋದು ಸಂವಿಧಾನ ವಿರೋಧಿ. ಮುಸ್ಲಿಂನಲ್ಲಿರೋ ಒಬಿಸಿಯವರಿಗೆ ಮೀಸಲಾತಿ ಸಿಗಬೇಕು. ಮುಸ್ಲಿಂ ಎಂಬ ಕಾರಣಕ್ಕೆ, ಹಿಂದೂ ಎಂಬ ಕಾರಣಕ್ಕೆ, ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಮೀಸಲಾತಿ ಸಿಗಬಾರದು. ಹಿಂದುಳಿದ ಸಮುದಾಯಗಳಿಗೆ ಮೀಸಲಾತಿ ಸಿಗಬೇಕು. ಮುಸ್ಲಿಮರಿಗೆ ಕೊಡ್ತೀವಿ. ಮುಸ್ಲಿಮರಿಗೆ ಕೊಡ್ತೀವಿ ಅಂದ್ರೆ.. ನಾಳೆ ಯಾವುದೋ ಒಂದು ಸರ್ಕಾರ ಬಂದು ಹಿಂದೂಗಳಿಗೆ ಮೀಸಲಾತಿ ಅಂದ್ರೆ ನಡೆಯುತ್ತಾ? ಮಾಡೋದಿಕ್ಕೆ ಆಗೋದಿಲ್ಲ.. ಈ ಪ್ರಶ್ನೆಯನ್ನ ನೀವು ಕಾಂಗ್ರೆಸ್‌ನವರಿಗೆ ಕೇಳಬೇಕು? ಈ ಎಲ್ಲಾ ಮೀಸಲಾತಿಗಳನ್ನು ನೀವು ಕೊಟ್ಟಿದ್ದು ಹೇಗೆ ಅಂತಾ? ಎಂದು ಹೇಳಿದರು.
ಹುಮನಾಬಾದ್: ಮೋದಿ ಕಾರ್ಯಕ್ರಮಕ್ಕೆ ಭೂಮಿ ನೀಡಿದ ವ್ಯಕ್ತಿಗೆ ಕಾಂಗ್ರೆಸ್ ಧಮ್ಕಿ
ಮುಸ್ಲಿಮರ 4 ಪರ್ಸೆಂಟ್ ಮೀಸಲಾತಿ ತೆಗೆದು ಲಿಂಗಾಯತರಿಗೆ 2, ಒಕ್ಕಲಿಗರಿಗೆ 2 ಪರ್ಸೆಂಟ್ ನೀಡಿದ್ದೀರಲ್ಲ ಎನ್ನುವ ಪ್ರಶ್ನೆಗೆ, 'ವಿಷಯ ಹಾಗಲ್ಲ. ನಿಮಗೆ ಪೂರ್ತಿ ವಿಷಯ ಅರ್ಥ ಆಗಿಲ್ಲ. ಮೂವರು ಒಂದು ಬ್ಲಾಕ್‌ನಲ್ಲಿದ್ದರು. ಒಬ್ಬರ ಮೀಸಲಾತಿ ತೆಗೆದರೆ, ಇನ್ನಿಬ್ಬರ ಮೀಸಲಾತಿ ನಾವು ಹೆಚ್ಚು ಮಾಡದೇ ಇದ್ದರೂ ತಾನಾಗಿಯೇ ಆಗುತ್ತದೆಯಲ್ಲ. ಲಿಂಗಾಯತರಿಗೆ 2 ಪರ್ಸೆಂಟ್.. ಒಕ್ಕಲಿಗರಿಗೆ 2 ಪರ್ಸೆಂಟ್ ತಾನಾಗಿಯೇ ಹೆಚ್ಚಾಗುತ್ತದೆ ಎಂದರು.
ಬಿಜೆಪಿಗೆ 40 ಸೀಟು ಎನ್ನುವ ರಾಹುಲ್ ವೈದ್ಯ ಪರೀಕ್ಷೆಗೆ ಒಳಗಾಗಲಿ: ಯಡಿಯೂರಪ್ಪ
ಅಧಿಕಾರಕ್ಕೆ ಬಂದ್ರೆ ಮೀಸಲಾತಿಯನ್ನ 70 ಪರ್ಸೆಂಟ್‌ಗೆ ಏರಿಕೆ ಮಾಡ್ತೀವಿ ಎಂದು ಕಾಂಗ್ರೆಸ್‌ನ ಸಿದ್ದರಾಮಯ್ಯ ಹೇಳಿದ್ದಾರಲ್ಲ, 'ನಿಮಗೂ ಗೊತ್ತು.. ನನಗೂ ಗೊತ್ತು.. ಸುಪ್ರೀಂ ಕೋರ್ಟ್‌ನ 9 ನ್ಯಾಯಮೂರ್ತಿಗಳ ಪೀಠದ ತೀರ್ಪಿದೆ. ಆ ರೀತಿ ಮಾಡೋದಿಕ್ಕೆ ಆಗೋದಿಲ್ಲ. ಸಿದ್ದರಾಮಯ್ಯ ಅವರ ಮಾತನ್ನ ಯಾರು ನಂಬ್ತಾರೆ. ಅವರಿಗೂ ಈ ಬಗ್ಗೆ ಗೊತ್ತಿದೆ.. ಅವರು ಅಸಮಧಾನದಲ್ಲಿ ಇಂಥಾ ಮಾತುಗಳನ್ನ ಹೇಳುತ್ತಿರುತ್ತಾರೆ' ಎಂದರು. ಲಿಂಗಾಯತ ಮುಖ್ಯಮಂತ್ರಿ ಬಗ್ಗೆ ಸಿದ್ಧರಾಮಯ್ಯ ಮಾತಾಡಿದ ವಿಷಯ ಗೊತ್ತಿದ್ಯಾ ನಿಮಗೆ? ಎನ್ನುವ ಪ್ರಶ್ನೆಗೆ 'ಹಾ.. ಅವರು ಅಸಮಾಧಾನದಲ್ಲಿದ್ದಾರೆ.. ಆ ಕೋಪವನ್ನ ತೋರಿಸಿದ್ದಾರೆ ಅಷ್ಟೇ' ಎಂದು ಹೇಳಿದರು.