ಜೆಡಿಎಸ್‌ನಿಂದ ಬಂದವರನ್ನು ಏಕೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇಂಥವರ ಮಾತನ್ನು ನಂಬಿಕೊಂಡು ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದರೆ ಹೋಗಲಿ ಬಿಡಿ, ನಾನೇನು ಮಾಡಲು ಸಾಧ್ಯವಿಲ್ಲ: ಎಚ್.ಡಿ.ರೇವಣ್ಣ
ಹಾಸನ(ಜ.15): ‘ಜೆಡಿಎಸ್ ಬಗ್ಗೆ ಮಾತನಾಡಲ್ಲ, ಏಕೆಂದರೆ ಅದು ಜೋಕರ್ ಇದ್ದಂಗೆ. ಅವರು ಅಧಿಕಾರಕ್ಕೆ ಬರಲ್ಲ’ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವ್ಯಂಗ್ಯಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಗರಂ ಆಗಿದ್ದಾರೆ.
ಹಾಗಿದ್ದ ಮೇಲೆ ಅವರು ಜೆಡಿಎಸ್‌ನಿಂದ ಬಂದವರನ್ನು ಏಕೆ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇಂಥವರ ಮಾತನ್ನು ನಂಬಿಕೊಂಡು ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದರೆ ಹೋಗಲಿ ಬಿಡಿ, ನಾನೇನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿಯಂಥ ಭ್ರಷ್ಟ ಸರ್ಕಾರವನ್ನು 4 ದಶಕದಲ್ಲೇ ನೋಡಿಲ್ಲ: ಸಿದ್ದರಾಮಯ್ಯ ಕಿಡಿ
ಜೆಡಿಎಸ್ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ ಹಾಗೂ ವೈ.ಎಸ್.ವಿ. ದತ್ತ ಅವರು ಪಕ್ಷ ಬಿಡುವುದಾಗಿ ಈವರೆಗೂ ನನ್ನ ಬಳಿ ಹೇಳಿಲ್ಲ. ಆದರೆ, ಪಕ್ಷ ಬಿಡುವುದಿಲ್ಲ ಎಂದು ನನ್ನ ಬಳಿ ಹೇಳಿಕೊಂಡಿದ್ದಾರೆ. ವೈ.ಎಸ್.ವಿ.ದತ್ತ ಅವರಿಗೆ ನಮ್ಮ ಪಕ್ಷದಲ್ಲಿ ಎಂಎಲ್ಸಿ, ಎಂಎಲ್‌ಎ ಎಲ್ಲಾ ಅಧಿಕಾರಗಳನ್ನು ನೀಡಲಾಗಿತ್ತು. ಇದೀಗ ಕಾಂಗ್ರೆಸ್ ಕಡೆ ಅವರಿಗೆ ಒಳಿತಾಗುವುದಿದ್ದರೆ ಹೋಗಲಿ. ಯಾರಾರಯರು ಜೆಡಿಎಸ್ ತೊರೆಯಲು ಹೊರಟಿದ್ದಾರೋ ಅವರಿಗೆಲ್ಲಾ ಶುಭವಾಗಲಿ ಎಂದು ಹಾರೈಸುತ್ತೇನೆ ಎಂದರು.