Panchamasali: ಕಾರ್‌ ಡ್ರೈವರ್‌ ಹತ್ಯೆ ಆರೋಪ: ಸಿಬಿಐ ತನಿಖೆಗೆ ವಹಿಸುವಂತೆ ಯತ್ನಾಳ್‌ ಸವಾಲು

By Sathish Kumar KH  |  First Published Jan 15, 2023, 1:34 PM IST

ವಿಜಯಪುರದ ಕಾರ್ ಚಾಲಕ ಹತ್ಯೆ ಆರೋಪದ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದು, ಸಚಿವ ಮುರುಗೇಶ್‌ ನಿರಾಣಿ ಆರೋಪಕ್ಕೆ ಸವಾಲು ಎಸೆದಿದ್ದಾರೆ. 


ವರದಿ - ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ವಿಜಯಪುರ (ಜ.15): ಸಚಿವ ಮುರುಗೇಶ್‌ ನಿರಾಣಿ ಅವರು ನಿನ್ನೆ ವಿಜಯಪುರದ ಕಾರ್ ಚಾಲಕ ಹತ್ಯೆಯಾಗಿತ್ತು. ಆತ ಯಾರು? ಏನು? ಹತ್ಯೆಯ ಬಗ್ಗೆ ಮಾಧ್ಯಮಗಳು ತನಿಖೆ ನಡೆಸಲಿ ಎಂದು ಯತ್ನಾಳ್ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್ ಅವರು ಮುಖ್ಯಮಂತ್ರಿಗೆ ಪತ್ರ ಬರೆದು, ಆರೋಪದ ಈ ಬಗ್ಗೆ ಕೇಂದ್ರ ತನಿಖಾ ದಳ (ಸಿಬಿಐ) ತನಿಖೆಗೆ ವಹಿಸುವಂತೆ ಸವಾಲು ಎಸೆದಿದ್ದಾರೆ. 

Latest Videos

undefined

ಪಂಚಮಸಾಲಿ ಮೀಸಲಾತಿ ಹೋರಾಟದ ಬಗ್ಗೆ ಪರಸ್ಪರ ವಾಗ್ವಾದ ಮತ್ತು ನಿಂದನೆ ಮಾಡಿಕೊಳ್ಳುತ್ತಿದ್ದ ಸಚಿವ ಮುರುಗೇಶ್‌ ನಿರಾಣಿ ಮತ್ತು ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಸಾರ್ವಜನಿಕರಿಗೆ ಆಡಿಕೊಳ್ಳಲು ಆಹಾರವಾಗಿದ್ದರು. ಆದರೆ, ಮೊನ್ನೆ ಯತ್ನಾಳ್‌ ಅವರು ಮುರುಗೇಶ್‌ ನಿರಾಣಿಗೆ ಪಿಂಪ್‌ ಸಚಿವ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ನಿರಾಣಿ, ಬಿಜಾಪುರದ ಅವನು ಅಪ್ಪನಿಗೆ ಹುಟ್ಟಿಲ್ಲ. ವಿಜಯಪುರದಲ್ಲಿ ಕಾರು ಚಾಲಕನ ಕೊಲೆ ಆಗಿದೆ. ಮಾಧ್ಯಮದವರೇ ಇದನ್ನು ಪತ್ತೆ ಹಚ್ಚಬೇಕು ಎಂದು ಯತ್ನಾಳ್‌ ವಿರುದ್ಧ ಆರೋಪ ಮಾಡಿದ್ದರು. ಇಂದು ಶಾಸಕ ಯತ್ನಾಳ್‌, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಈ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆರ ವಹಿಸುವಂತೆ ಹೇಳಿದ್ದಾರೆ. 

Panchamasali: ಅವನು ಅಪ್ಪನಿಗೆ ಹುಟ್ಟಿಲ್ಲ- ಅವನೊಬ್ಬ ಪಿಂಪ್‌: ಹೆಸರೇಳದೇ ಯತ್ನಾಳ್‌ ವಿರುದ್ಧ ಸಚಿವ ನಿರಾಣಿ ಆರೋಪ

ದೇಶದ ಜನತೆಗೆ ಸತ್ಯಾಸತ್ಯತೆ ಗೊತ್ತಾಗಬೇಕು:ಸಂಪುಟದ ಸದಸ್ಯರು ಈ ರೀತಿ ಆರೋಪ ಮಾಡಿರುವ ಬಗ್ಗೆ ಸತ್ಯಾಸತ್ಯತೆ ತಿಳಿಯಲಿ. ವಿಜಯಪುರದ ಯಾವುದೋ ಕಾರು ಚಾಲಕನ ಬಗ್ಗೆ ಮಾಧ್ಯಮಗಳ ಮುಂದೆ ಗಂಭೀರ ಆರೋಪ ಮಾಡಿದ್ದಾರೆ. ಇಂತಹ ಆರೋಪದಿಂದ ಸರ್ಕಾರದ ಬಗ್ಗೆ ತಪ್ಪು ಸಂದೇಶ ಬರುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.‌ ದೇಶದ ಜನತೆಗೆ ಇದರ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಬೇಕಿದೆ. ನಮ್ಮ ದೇಶದಲ್ಲಿ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಕೇವಲ 24 ಗಂಟೆಯ ಒಳಗಾಗಿ ಸಿಬಿಐ ತನಿಖೆಗೆ ಶಿಫಾರಸು ಮಾಡಬಹುದು ಎಂದು ಮುಖ್ಯಮಂತ್ರಿಗೆ ಬರೆದಿರುವ ಪತ್ರದಲ್ಲಿ ಯತ್ನಾಳ್‌ ಒತ್ತಾಯ ಮಾಡಿದ್ದಾರೆ.  

ಸುಳ್ಳು ಆರೋಪ ಮಾಡಿದ ಸಚಿವರನ್ನ ವಜಾಗೊಳಿಸಿ: ರಾಜ್ಯದಲ್ಲಿ ಒಬ್ಬ ಜವಾಬ್ದಾರಿಯುತ ಸಚಿವರಾಗಿದ್ದು, ತಮ್ಮದೇ ಪಕ್ಷದ ಒಬ್ಬ ಜನಪ್ರತಿನಿಧಿ ಅಥವಾ ನಾಯಕರ ಮೇಲೆ ಸುಳ್ಳು ಆರೋಪ ಮಾಡಿ ಜನತೆಗೆಗೆ ಯಪ್ಪಿ ಸಂದೇಶ ತಿಳಿಸುತ್ತಿದ್ದಾರೆ. ಜನತೆಗೆ ತಪ್ಪು ಸಂದೇಶ ಸಾರುವ ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸುವಂತೆ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.‌ ಈಗ ಇಬ್ಬರ ಕೆಸರೆರಚಾಟ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ.

Panchamasali ಸಮಾಜಕ್ಕೆ ಅನ್ಯಾಯ ಮಾಡಲ್ಲ: ಮೀಸಲಾತಿ ಕಲ್ಪಿಸುವುದಾಗಿ ಸಿಎಂ ಬೊಮ್ಮಾಯಿ ಭರವಸೆ

ಯತ್ನಾಳ್‌ ಬೆಂಬಲಿಸಿದ ಜಯ ಮೃತ್ಯುಂಜಯ ಶ್ರೀ: ನಿನ್ನೆ ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡುತ್ತಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಶಾಸಕ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರನ್ನು ಬೆಂಬಲಿಸಿದ್ದರು. ಪಂಚಮಸಾಲಿ ಸಮುದಾಯದ ಹಿತಕ್ಕಾಗಿ ಪಕ್ಷದ ಒಳಗಿದ್ದುಕೊಂಡೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರೊಬ್ಬ ಹುಲಿ ಎಂದು ಹೇಳಿಕೆ ನೀಡಿದ್ದರು. ಜೊತೆಗೆ, ಯತ್ನಾಳ್‌ ಅವರನ್ನು ನೋಡಿ ಕಲಿಯಬೇಕು ಎಂದು ಜಯಮೃತ್ಯುಂಜಯ ಶ್ರೀ ಹೇಳಿದ್ದರು.

ಚಿಲ್ಲರೆ ವ್ಯಕ್ತಿ ಬಗ್ಗೆ ಹಬ್ಬದಂದು ಮಾತನಾಡಲ್ಲ: 

ಇಂದು ಸಂಕ್ರಾಂತಿ ಹಬ್ಬ ಇದೆ. ಹಬ್ಬದಂದು ಚಿಲ್ಲರೆಗಳ ಹೇಳಿಕೆಗೆ ಪ್ರತಿಕ್ರಿಯಿಸಲ್ಲ. ನಿರಾಣಿ ಆರೋಪದ ಬಗ್ಗೆ ತನಿಖೆಗೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೀನಿ. 24 ಗಂಟೆ ಒಳಗಾಗಿ ನಿರಾಣಿ ಹೇಳಿಕೆ, ಕೊಲೆ‌ ಆರೋಪದ ತನಿಖೆಗೆ ಆದೇಶ ಕೊಡಬೇಕು. ಆದೇಶ ಕೊಡದೆ ಹೋದಲ್ಲಿ ಅದು ಸರಿ ಇರೊದಿಲ್ಲ. ಆರೋಪ ಸುಳ್ಳಾದರೆ ಸಚಿವರನ್ನ ಸಂಪುಟದಿಂದ ತೆಗೆದು ಹಾಕಬೇಕು ಎಂದು ಆಗ್ರಹ ಮಾಡಿದ್ದೇನೆ.

ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್,

click me!