ಕಾಂಗ್ರೆಸ್ ಉಚಿತ ಭಾಗ್ಯದ ಎದುರು ನಮ್ಮೆಲ್ಲಾ ಕೆಲಸ ಕೊಚ್ಚಿ‌ಹೊಯ್ತು: ಮೌನ ಮುರಿದ ಜೆ.ಸಿ ಮಾಧುಸ್ವಾಮಿ

Published : Jul 03, 2023, 06:16 PM IST
ಕಾಂಗ್ರೆಸ್ ಉಚಿತ ಭಾಗ್ಯದ ಎದುರು ನಮ್ಮೆಲ್ಲಾ ಕೆಲಸ ಕೊಚ್ಚಿ‌ಹೊಯ್ತು: ಮೌನ ಮುರಿದ ಜೆ.ಸಿ ಮಾಧುಸ್ವಾಮಿ

ಸಾರಾಂಶ

ಚುನಾವಣೆ ಮುಗಿದ ಬಳಿಕ ಮೊದಲ ಬಾರಿ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ  ಮೌನ ಮುರಿದಿದ್ದಾರೆ.  ಕೆಲಸ ಮಾಡಿದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ, ಆದರೆ ಜನ ಕಡೆಗಣಿಸಿದ್ದಾರೆ ಎಂದಿದ್ದಾರೆ.‌

ವರದಿ : ಮಹಂತೇಶ್ ಕುಮಾರ್, ಏಷ್ಯನೆಟ್ ಸುವರ್ಣ ನ್ಯೂಸ್,  ತುಮಕೂರು. 

ತುಮಕೂರು (ಜು.3): ಚುನಾವಣೆ ಮುಗಿದ ಬಳಿಕ ಮೊದಲ ಬಾರಿ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ  ಮೌನ ಮುರಿದಿದ್ದಾರೆ. ಚಿಕ್ಕನಾಯಕನಹಳ್ಳಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬೇಸರ ವ್ಯಕ್ತಪಡಿಸಿದ ಮಾಧುಸ್ವಾಮಿ,  ಕೆಲಸ ಮಾಡಿದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ, ಆದರೆ ಜನ ಕಡೆಗಣಿಸಿದ್ದಾರೆ ಎಂದಿದ್ದಾರೆ.‌

ಕೆಲಸ ಮಾಡಿದಕ್ಕೆ ಪ್ರತಿಫಲ ಸಿಗದೇ ಇರೋದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತವಲ್ಲ, ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ  ಮಾಡಿದ ಹಲವು ನಾಯಕರು ಸೋತಿದ್ದಾರೆ. ಯಾಕಂದರೆ ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸ ಅನಿಸಲೇ ಇಲ್ಲ, ಅವರು ಕೊಡುವ ಅಕ್ಕಿ, ಅವರು ಕೊಡುವ ದುಡ್ಡೇ ಶ್ರೇಷ್ಠ ಅನಿಸಿತು.  ಅವರ‌ ಉಚಿತ ಭಾಗ್ಯಗಳ ಮುಂದೆ ನಮ್ಮ ಎಲ್ಲಾ ಕೆಲಸ ಕೊಚ್ಚಿಕೊಂಡು ಹೋಯಿತು ಎಂದರು.

ನಾನು ಕಾಂಗ್ರೆಸ್‌ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ ಟಿ.ವಿ.ಗೆ ಹಾಕಿಸ್ತಾನೆ: ಮಾಧುಸ್ವಾಮಿ ಗರಂ

ನಾವು ಯಾವ ನೀರು ಕುಡಿದಿದ್ದಿವಿ, ಯಾವ ರಸ್ತೆಯಲ್ಲಿ ಓಡಾಡುತಿದ್ದೀವಿ ಅನ್ನೋದನ್ನು ಜನರು ಮರೆತರು, ಇದೇ ರೀತಿ ಉಚಿತ ಭಾಗ್ಯ ಮುಂದುವರೆದರೆ ಮುಂದೆ ಚುನಾವಣೆ ಮಾಡೋದು ತುಂಬಾ ಕಷ್ಟವಾಗುತ್ತದೆ.

ತೆರಿಗೆದಾರರ ದುಡ್ಡನ್ನು ನಮಗೆ ಇಷ್ಟ ಬಂದಹಾಗೆ ಮನೆಯಲ್ಲಿ ಕುಂತವರಿಗೆ ಇಷ್ಟ ಬಂದಹಾಗೆ ಹಂಚುತ್ತೇನೆ ಎಂದರೆ ರಾಜ್ಯದ ಪರಿಸ್ಥಿತಿ ಏನಾಗಬೇಡ,ಕೆಲ ವಿದ್ಯಾವಂತ ಉದ್ಯೋಗಸ್ಥ ಯುವಕರು ನನ್ನ ಬಳಿ ಬಂದು ಕೇಳಿದ್ರು. ನಾವು ತೆರಿಗೆ ಕಟ್ಟೋರು ಉಚಿತ ಭಾಗ್ಯದ ವಿರುದ್ಧ ಹೋರಾಟ ಮಾಡಿದ್ರೆ ಮಾತ್ರ ಇದು ನಿಲ್ಲಬಹುದೇನೋ ಎಂದು ಚರ್ಚೆ ಮಾಡಿದ್ರು.‌

ಈಗ ಮೋದಿ ಅಕ್ಕಿ ಕೊಟ್ಟಿಲ್ಲ ಎಂದು ಸುಮ್ಮನೆ ದೂಷಣೆ ಮಾಡುತ್ತಾರೆ.‌ ನಾವೂ ಕೂಡ ರಾಜ್ಯದಲ್ಲಿ ಕನಿಷ್ಠ 7ಕೆ.ಜಿ.ಅಕ್ಕಿ ಕೊಡಬೇಕು ಎಂದು 10 ಬಾರಿ ಪ್ರಯತ್ನ ಪಟ್ವಿದ್ದೇವೆ, ಆದರೆ ಹೆಚ್ಚುವರಿ ಅಕ್ಕಿ ಕೊಡಲು ಪ್ರಧಾನಿ ಮೋದಿ ಒಪ್ಪಿಲ್ಲ, ಬಿಜೆಪಿ ಆಡಳಿತದ ಸಮಯದಲ್ಲೂ ರಾಜ್ಯಕ್ಕೂ ಕೇಂದ್ರ ಹೆಚ್ಚುವರಿ ಅಕ್ಕಿ ಕೊಟ್ಟಿಲ್ಲ, ಆಹಾರ ಭದ್ರತಾ ಕಾಯಿದೆ ಪ್ರಕಾರ ಒಬ್ಬರಿಗೆ ದಿನಕ್ಕೆ 150-200 ಗ್ರಾಂ ಅಕ್ಕಿ ಸಾಕು ಎಂದು ವೈಜ್ಞಾನಿಕವಾಗಿ ಅಂದಾಜಿಸಲಾಗಿದೆ.

117 ವರ್ಷಗಳ ಇತಿಹಾಸ ಇರುವ ಕಾಂತಾರ ಸಿನೆಮಾದ ಜೈಲು ಕಣ್ಮರೆಯಾಗಲು ಕ್ಷಣಗಣನೆ!

ಈ ಆಧಾರದ ಮೇಲೆ  ತಿಂಗಳಿಗೆ 5ಕೆ.ಜಿ. ಅಕ್ಕಿ ಕೊಡಲಾಗುತ್ತಿದೆ. ನಮ್ಮಲ್ಲಿ ದಾಸ್ತಾನು ಇರುವ ಅಕ್ಕಿ ಬರಗಾಲ, ಅತಿವೃಷ್ಟಿ  ಸಂಕಷ್ಟ ಕಾಲದಲ್ಲಿ ಕೊಡಲು ಇಡಲಾಗಿದೆ.  ನಮ್ಮಲ್ಲಿ ಅಕ್ಕಿ ಇದೆ ಎಂದೇಳಿ ಬೇಕಾಬಿಟ್ಟಿ ಹಂಚೋಕಾಗುತ್ತಾ?. ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಮೋದಿ ಅಕ್ಕಿ ಕೊಟ್ಟೆಕೊಡುತ್ತಾರೆ. ಮನೆಯಲ್ಲಿ ಸಂಸಾರ ನಡೆಸೋರು ಕಷ್ಟ ಕಾಲಕ್ಕೆ ಆಗಲಿ ಎಂದೇಳಿ ದುಡ್ಡು ಕೂಡಿಡುತ್ತಾರೆ. ಅದನ್ನು ನಾನು ಸಿನೆಮಾ ನೋಡೋಕೆ ಹೋಗ್ಬೇಕು, ಸ್ವೀಟ್ ತಿನ್ನೋಕೆ ಹೋಗ್ಬೇಕು ಕೊಡು ಅಂದರೆ ಕೊಡಕಾಗುತ್ತಾ? ಎಂದು ರಾಜ್ಯ ಸರ್ಕಾರದ ಉಚಿತ ಭಾಗ್ಯಗಳನ್ನು ಟೀಕಿಸಿದ್ರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ