ನ.6ಕ್ಕೆ ಬೆಂಗಳೂರಿಗೆ ಖರ್ಗೆ, ಪ್ಯಾಲೇಸ್ ಗ್ರೌಂಡ್‌ನಲ್ಲಿ ಸಮಾವೇಶ: ಡಿ.ಕೆ.ಶಿವಕುಮಾರ್

By Govindaraj S  |  First Published Nov 2, 2022, 4:56 PM IST

ಮೊದಲ ಬಾರಿಗೆ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ 6ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದರು. 


ಬೆಂಗಳೂರು (ನ.02): ಮೊದಲ ಬಾರಿಗೆ ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನವೆಂಬರ್ 6ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಅವರಿಗೆ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ಮಾಡಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿಯಲ್ಲಿ ಹೇಳಿದರು. 6ನೇ ತಾರೀಖು ಬೆಳಗ್ಗೆ 10:50ಕ್ಕೆ  ಬೆಂಗಳೂರಿಗೆ ಖರ್ಗೆ ಆಗಮಿಸಲಿದ್ದು, ಮಧ್ಯಾಹ್ನ 2 ಗಂಟೆಗೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ಸರ್ವೋದಯ ಹೆಸರಿನ ಸಮಾವೇಶ ಹಮ್ಮಿಕೊಂಡಿದ್ದೇವೆ. ಅಲ್ಲದೇ ಖರ್ಗೆ ಅವರನ್ನು ಬರಮಾಡಿಕೊಳ್ಳಲು ಸಾವಿರಾರು ಕಾರ್ಯಕರ್ತರು, ಮುಖಂಡರು ಏರ್‌ಪೋರ್ಟ್‌ಗೆ ಹೋಗುತ್ತೇವೆ. ರಾಜ್ಯದ ವಿವಿಧ ಮೂಲೆಯಿಂದ ಜನ ಬರ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ನಾಯಕರು ಸಮಾವೇಶದಲ್ಲಿ ಭಾಗಿಯಾಗ್ತಾರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೂಡ ಆಗಮಿಸುತ್ತಾರೆ. ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆ ಗ ಸಜ್ಜಾಗ್ತಿದೆ. ಎಲ್ಲ ತಯಾರಿಗಳನ್ನೂ ಕೂಡ ಮಾಡಿಕೊಳ್ತಿದ್ದೇವೆ. ಯಾರು ಚುನಾವಣೆಗೆ ಸ್ಪರ್ಧೆ ಮಾಡಲು ಬಯಸುತ್ತಾರೆ ಅಂತವರು ಅರ್ಜಿ ಸಲ್ಲಿಸಬಹುದು. ಅರ್ಜಿಯನ್ನು ಕಾಂಗ್ರೆಸ್ ಕಚೇರಿಯಲ್ಲಿ ಫಾರ್ಮ್ಯಾಟ್ ಮೂಲಕ ಸ್ವೀಕಾರ ಮಾಡಬಹುದು. 5 ಸಾವಿರ ಕೊಟ್ಟು ಅರ್ಜಿ ಪಡೆಯಬಹುದು. ಅರ್ಜಿಯ ಜತೆಯಲ್ಲಿ 2 ಲಕ್ಷ ಡಿಡಿ ಶುಲ್ಕ ನೀಡಬಹುದು. ಎಸ್.ಸಿ, ಎಸ್.ಟಿಯವರಿಗೆ 1 ಲಕ್ಷ ಡಿಡಿ ಮೂಲಕ ಅರ್ಜಿ ಸಲ್ಲಿಸಬಹುದು.  ಬಿಲ್ಡಿಂಗ್ ಫಂಡ್‌ಗೆ ಅದನ್ನು ಬಳಕೆ ಮಾಡಲಾಗುತ್ತದೆ.  ಯಾರು ಕಾಂಗ್ರೆಸ್ ಟಿಕೆಟ್ ಬಯಸುತ್ತೀರೋ ಅವರು ಅರ್ಜಿಯನ್ನು ಹಾಕಬಹುದು. ನಾನೂ ಕೂಡ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅರ್ಜಿ ಹಾಕಬೇಕು ಎಂದು ಡಿಕೆಶಿ ಹೇಳಿದರು.

Tap to resize

Latest Videos

ತಾಕತ್ತಿದ್ದರೆ ಭ್ರಷ್ಟಾಚಾರ ಬಗ್ಗೆ ತನಿಖೆ ನಡೆಸಿ: ಸಿಎಂಗೆ ಡಿಕೆಶಿ ಸವಾಲು

ಸದ್ಯ ವಲಸೆ ಹೋದವರಿಗೂ ಮುಕ್ತ ಆಹ್ವಾನವಿದ್ದು, ನಾನು ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ಮಾತನಾಡ್ತಿದ್ದೇನೆ. ಯಾರು ಬೇಕಾದರೂ ಬರಬಹುದು. ಅಪ್ಲಿಕೇಶನ್ ಹಾಕುವವರಿಗೆ ಮುಕ್ತ ಅವಕಾಶವಿದೆ. ಯಾರು ಬೇಕಾದ್ರೂ ಬರಲಿ ನೋ ಪ್ರಾಬ್ಲಂ, ಮೊದಲು ಅವರು ಅರ್ಜಿ ಹಾಕಲಿ, ಆಮೇಲೆ ನಮ್ಮ ಕಮಿಟಿ ಪರಿಶೀಲಿಸುತ್ತದೆ. ಮತ್ತೆ ಮೆಂಬರ್ ಶಿಪ್‌ಗೆ ಆಹ್ವಾನ ಕೊಡುತ್ತಿದ್ದೇವೆ. ಬಹಳಷ್ಟು ಜನರು ಪಕ್ಷ ಸೇರಬೇಕು ಅಂತ ಚರ್ಚೆ ನಡೆಸಿದ್ದಾರ. ಯಾರ ಹೆಸರು‌ ನಾನು ಹೇಳಲ್ಲ. ಮುಕ್ತವಾಗಿ ಸಿದ್ಧಾಂತ ಒಪ್ಪಿ ಬರಬಹುದು. ಅಲ್ಲಂ ವೀರಭದ್ರಪ್ಪ ಕಮಿಟಿ ಇದೆ. ಅರ್ಜಿ ಪರಿಶೀಲನೆ ಮಾಡಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಕಟೀಲು ಅವರ ಮನೆ ರಿಪೇರಿ ಮಾಡಿಕೊಳ್ಳಲಿ: ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಡಿಕೆಶಿ ಗರಂ

ಇನ್ನು ಕರ್ನಾಟಕ ರತ್ನ ಗೌರವ ಪ್ರಧಾನ  ಕಾರ್ಯಕ್ರಮದಲ್ಲಿ ಅವ್ಯವಸ್ಥೆ ವಿಚಾರವಾಗಿ ಸರ್ಕಾರವನ್ನು ಡಿ.ಕೆ.ಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ. ನಿನ್ನೆ ಯಾಕೆ ಸ್ಟೇಜ್ ಹಾಗಾಯ್ತು, ಸ್ಟೇಜ್ ಕಥೆ ಏನಾಯ್ತು? ವೆರಿ ಸಾರಿ ಫಾರ್ ಸ್ಟೇಜ್ ಆರ್ಗನೈಸೆಷನ್. ನಿನ್ನೆ ಆದ ವ್ಯವಸ್ಥೆ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ ಬಳಿಕ ನಾವು ಮಾತಾಡ್ತೇವೆ. ಕರ್ನಾಟಕ ರತ್ನ ರಾಜಕುಮಾರ್‌ಗೆ ನೀಡಿದ ಕಾಲದಲ್ಲಿ ನಾನೂ ಇದ್ದೆ ಎಂದು ಹೇಳಿದರು.  ಸಚಿವ ಶ್ರೀರಾಮುಲು ನದಿ ಪಕ್ಕದಲ್ಲಿ ಮಲಗಿ ಧರಣಿ ನಡೆಸಿದ ವಿಚಾರವಾಗಿ ಶ್ರೀರಾಮನೇ ಅಲ್ಲಿ ಮಲಗಿದ್ದಾನೆ ಅಂದ್ರೆ ರಾಮ ರಾಜ್ಯದ ಪರಿಸ್ಥಿತಿ ಏನಾಗಿದೆ ನೀವೇ ನೋಡಿ. ಯಾಕೆ ರಾಮುಲು ಪರಿಸ್ಥಿತಿ ಹೀಗಾಯ್ತು ಅಂತ ಜನಾರ್ಧನ ರೆಡ್ಡಿಯನ್ನೇ ಕೇಳಬೇಕು. ರಾಮುಲು ಹಾಗೆ ಮಲಗಿಯೇ ಇರಲಿ ಬಿಡಿ ಎಂದು ವ್ಯಂಗ್ಯವಾಡಿದರು.

click me!