ಮೋದಿ ವಿಪಕ್ಷದ ಶಾಸಕರನ್ನು ಕುರಿ ರೀತಿ ಖರೀದಿಸಿ ಕತ್ತರಿಸಿ ತಿನ್ನುತ್ತಾರೆ: ಮಲ್ಲಿಕಾರ್ಜುನ ಖರ್ಗೆ

By Kannadaprabha News  |  First Published Nov 12, 2024, 6:45 AM IST

ಮೋದಿ ಶಾಸಕರನ್ನು ಮೇಕೆಗಳಂತೆ ಇಟ್ಟುಕೊಳ್ಳುತ್ತಾರೆ, ಅವರಿಗೆ ಆಹಾರ ನೀಡುತ್ತಾರೆ ಮತ್ತು ನಂತರ ಅವರನ್ನು ಕತ್ತರಿಸಿ ತಿನ್ನುತ್ತಾರೆ ಎಂದು ಆರೋಪಿಸಿದ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 


ರಾಂಚಿ(ನ.12):  ಪ್ರಧಾನಿ ನರೇಂದ್ರ ಮೋದಿ ಅವರು ಚುನಾಯಿತ ಸರ್ಕಾರ ಗಳನ್ನು ಬೀಳಿಸುವ, ವಿಪಕ್ಷ ಗಳನ್ನು ಹತ್ತಿಕ್ಕುವ ಹಾಗೂ ವಿಪಕ್ಷ ಶಾಸಕರನ್ನು ಕುರಿಯಂತೆ ಖರೀದಿಸಿ ಕತ್ತರಿಸಿ ತಿನ್ನುವ ಚಾಳಿ ಹೊಂದಿದ್ದಾರೆ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

ಸೋಮವಾರ ಜಾರ್ಖಂಡ್ ವಿಧಾನ ಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, 'ಮೋದಿ-ಜಿ ಸರ್ಕಾರಗಳನ್ನು ಬೀಳಿಸುತ್ತಾರೆ. ಶಾಸಕರನ್ನು ಖರೀದಿಸುತ್ತಾರೆ. 

Tap to resize

Latest Videos

undefined

ಅಘಾಡಿಯಿಂದ ಸ್ತ್ರೀಯರಿಗೆ ₹3000, ಫ್ರೀ ಬಸ್‌ ಪ್ರಯಾಣ: ಪ್ರಣಾಳಿಕೆ ಬಿಡುಗಡೆ

ಉನ್ನಾ ಕಾಮ್ ಎಮ್ಮೆಲ್ಲೇಸ್ ಕೋ ಬಕ್ರಿ ಕೆ ಜೈಸೇ ಅಪ್ಪೆ ಪಾಸ್ ರಖ್ ಲೇನಾ, ಪಾಲ್ನಾ ಔರ್ ಫಿರ್‌ಬಾದ್ ಮೇ ಕಾಟ್ ಕರ್‌ಖಾನಾ ಹೈ (ಮೋದಿ ಶಾಸಕರನ್ನು ಮೇಕೆಗಳಂತೆ ಇಟ್ಟುಕೊಳ್ಳುತ್ತಾರೆ, ಅವರಿಗೆ ಆಹಾರ ನೀಡುತ್ತಾರೆ ಮತ್ತು ನಂತರ ಅವರನ್ನು ಕತ್ತರಿಸಿ ತಿನ್ನುತ್ತಾರೆ)' ಎಂದು ಆರೋಪಿಸಿದರು. 

click me!