ಅಗ್ನಿಪಥ್‌ ಯೋಜನೆ: ಹೊಸ ಬಾಂಬ್‌ ಸಿಡಿಸಿದ ಸಚಿವ ಕತ್ತಿ

By Kannadaprabha News  |  First Published Jun 22, 2022, 9:45 AM IST

*  ಅಗ್ನಿಪಥ್‌ ಕಾಂಗ್ರೆಸ್‌ನವರೇ ರೂಪಿಸಿದ ಯೋಜನೆ: ಸಚಿವ ಕತ್ತಿ
*  ಕಾಂಗ್ರೆಸ್‌ಗೆ ಉದ್ಯೋಗವಿಲ್ಲ, ಡಿಕೆಶಿ, ಸಿದ್ದುಗೆ ಬುದ್ಧಿಭ್ರಮಣೆ
*  75 ಸಾವಿರ ಯುವಕರಿಗೆ ನೌಕರಿ ಕೊಡುವ ಉದ್ದೇಶವನ್ನು ಅಗ್ನಿಪಥ್‌ ಹೊಂದಿದೆ
 


ಹುಕ್ಕೇರಿ(ಜೂ.22):  ರಾಜ್ಯ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಕೇಂದ್ರದ ಅಗ್ನಿಪಥ್‌ ಯೋಜನೆಗೆ ಪ್ರತಿಪಕ್ಷ ಕಾಂಗ್ರೆಸ್‌ನಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ ಇದು ಕಾಂಗ್ರೆಸ್‌ನವರೇ ರೂಪಿಸಿದ ಯೋಜನೆ ಎಂದು ಆಹಾರ ಸಚಿವ ಉಮೇಶ ಕತ್ತಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್‌ ಜಲಾಶಯದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್‌ ಯೋಜನೆಯನ್ನು ಕಾಂಗ್ರೆಸ್‌ನವರೇ 1990ರ ಆಚೀಚೆ ಯೋಜನೆಯನ್ನು ಮಾಡಿದವರು. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಅನುಷ್ಠಾನ ಮಾಡುತ್ತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್‌ಗೆ ಉದ್ಯೋಗ ಇಲ್ಲ. ಮಾತ್ರವಲ್ಲ, ಡಿ.ಕೆ.ಶಿವಕುಮಾರ್‌ಗೆ, ಸಿದ್ದರಾಮಯ್ಯಗೂ ಉದ್ಯೋಗ ಇಲ್ಲ. ಅವರಿಗೆ ಬುದ್ಧಿಭ್ರಮಣೆಯಾಗಿದೆ. ಈ ರೀತಿಯಾಗಿ ವಿರೋಧ ಮಾಡುವುದರಲ್ಲಿ ಅರ್ಥವಿಲ್ಲ ಎಂದು ದೂರಿದರು.

Tap to resize

Latest Videos

ಅಗ್ನಿಪಥ: ಯುವಜನತೆಯ ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್ಸಿಗರು: ಸಚಿವ ಕತ್ತಿ

75 ಸಾವಿರ ಯುವಕರಿಗೆ ನೌಕರಿ ಕೊಡುವ ಉದ್ದೇಶವನ್ನು ಅಗ್ನಿಪಥ್‌ ಹೊಂದಿದೆ. ನಾಲ್ಕು ವರ್ಷಗಳ ಕಾಲ ಅವರು ಸೇವೆ ಮಾಡುವುದು ಯೋಜನೆಯಲ್ಲಿದೆ. ಅವರು ದುಡಿದ .11 ಲಕ್ಷ ನಾವು ಕೊಡುವ .11 ಲಕ್ಷ ಸೇರಿಸಿ ನಂತರ ಅವರಿಗೆ ನೀಡುವ ಯೋಜನೆ ಇದೆ ಎಂದು ಸಮರ್ಥಿಸಿಕೊಂಡರು.
 

click me!