ನಾನೇನು ಈ ಲೋಕ ಬಿಟ್ಟು ಹೋಗಿದೀನಾ: HD Devegowda

Published : Oct 09, 2022, 12:18 AM IST
ನಾನೇನು ಈ ಲೋಕ ಬಿಟ್ಟು ಹೋಗಿದೀನಾ: HD Devegowda

ಸಾರಾಂಶ

ಮೂರು ತಿಂಗಳ ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ. ನನ್ನ ಕಣ್ಣ ಮುಂದೆಯೇ ಈ ಪಕ್ಷ ಅಧಿಕಾರಕ್ಕೆ ಬರುತ್ತೆ. ನಮ್ಮ ಕೊನೆಯ ದಿನವನ್ನು ನಿರ್ಧಾರ ಮಾಡುವವನು ಮೇಲಿದ್ದಾನೆ ಎಂದು ಜನತಾಮಿತ್ರ ಕಾರ್ಯಕ್ರಮದಲ್ಲಿ ಹೇಳಿಕೆ.

ವರದಿ: ಸುರೇಶ್ ಎ ಎಲ್. ಏಷ್ಯಾ ನೆಟ್ ಸುವರ್ಣ ನ್ಯೂಸ್ 

ಬೆಂಗಳೂರು (ಅ.8): ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಬಹಿರಂಗ ಸಮಾರಂಭ ಗಳಲ್ಲಿ ಕಾಣಿಸಿಕೊಂಡು ಬಹಳ ದಿನಗಳೇ ಆಗಿತ್ತು. ಇತ್ತೀಚಿಗೆ ಅನೇಕ ರಾಜಕಾರಣಿ ಗಳು ಅವರ ಮನೆಗೆ ಹೋಗಿ ಆರೋಗ್ಯ ವಿಚಾರಿಸಿಕೊಂಡು ಬರೋದನ್ನು ನೋಡಿ ಅವರ ಆರೋಗ್ಯದ ಬಗ್ಗೆ ಹಲವಾರು ಊಹಾಪೋಹಗಳೂ ಎದ್ದಿದ್ದವು. ಆದರೆ ಜನತಾಮಿತ್ರ ಕಾರ್ಯಕ್ರಮದ ಇಂದಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ದೇವೇಗೌಡರ ಉತ್ಸಾಹ ಕಂಡು ಅವರ ಪಕ್ಷದ ಕಾರ್ಯಕರ್ತ ರಲ್ಲಿ ಹೊಸ ಉತ್ಸಾಹ ಮೂಡಿದೆ. ಇವತ್ತಿನ ಈ ಕಾರ್ಯಕ್ರಮ ಕ್ಕೆ ಒಂದು ಹತ್ತು ನಿಮಿಷಗಳ ಕಾಲ ಬಂದು ಹೋಗಿ ಅಂತಾ ನಮ್ಮ ಪಕ್ಷದ ಮುಖಂಡರು ಕೇಳಿದ್ರು. ಆದ್ರೆ ಬರೀ ಹತ್ತು ನಿಮಿಷ ಯಾಕೆ, ಪೂರ್ತಿ ಕಾರ್ಯಕ್ರಮ ದಲ್ಲಿ ನಾನು ಇರ್ತೀನಿ ಅಂತಾ ಬಂದಿದೀನಿ ಎಂದ ದೇವೇಗೌಡರು, ನಾನೇನು ಈ ಲೋಕ ಬಿಟ್ಟು ಹೋಗಿದೀ‌ನಾ.? ಸ್ವಲ್ಪ ಆರೋಗ್ಯದ ಸಮಸ್ಯೆ ಇದೆ ಅಷ್ಟೆ. ಆದರೆ ದೇವರ ಅನುಗ್ರಹ ದಿಂದ ನಾನು ಆದಷ್ಟು ಬೇಗ ಚೇತರಿಸಿಕೊಳ್ಳುವೆ. ನಾನು ಯಾರಿಗೂ ಏನೂ ಅನ್ಯಾಯ ಮಾಡಿಲ್ಲ. ನಾನು ಪ್ರಧಾನಮಂತ್ರಿ ಆಗಿದ್ದಾಗ ಬೆಂಗಳೂರಿಗೆ ಅನೇಕ ಕಾರ್ಯಕ್ರಮ ಗಳನ್ನು ಕೊಟ್ಟಿದ್ದೇನೆ. ಜನ ಅದೆಲ್ಲಾ ಗಮನದಲ್ಲಿಟ್ಟುಕೊಂಡಿದ್ದಾರೆ. ಈ ಸಲ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಲಿದ್ದಾರೆ. ಭಗವಂತನ ಅನುಗ್ರಹ ನನ್ನ ಮೇಲಿದೆ. ಇನ್ನೂ ಸ್ವಲ್ಪ ಕಾಲ ನಿಮ್ಮ ಜೊತೆ ಇರ್ತೇನೆ.  ಅಷ್ಟೇ ಅಲ್ಲ ಎಲ್ಲಾ ಜಿಲ್ಲೆ ಗಳಿಗೂ ಪ್ರವಾಸ ಹೋಗ್ತೇನೆ. ಪಕ್ಷವನ್ನು ಕಟ್ಟುವ ಕೆಲಸ ಮಾಡ್ತೇನೆ. ನನಗೆ ವಿಶ್ವಾಸ ವಿದೆ ಈ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತೆ.  ನನ್ನ ಕಣ್ಣ ಮುಂದೆಯೇ ಇದು ನಡೆಯುತ್ತೆ. ಹಾಗಂತ ದೇವೇಗೌಡರು ಏರು ದನಿಯಲ್ಲಿ ಮಾತಾಡ್ತಾ ಇದ್ರೆ ಕಾರ್ಯಕರ್ತರು ಜೋರಾಗಿ ಹರ್ಷೋದ್ಗಾರ ಮಾಡ್ತಿದ್ರು.

ಜನತಾ ಮಿತ್ರ ಎಂಬ ಹೆಸರಿನಲ್ಲಿ ಬೆಂಗಳೂರು ಜನರ ಸಮಸ್ಯೆಗಳನ್ನು ಸಂಗ್ರಹ ಮಾಡಿರುವ ಜೆಡಿಎಸ್‌ ಪಕ್ಷ ಮುಂದೆ ಅಧಿಕಾರಕ್ಕೆ ಬಂದ್ರೆ, ಯಾವೆಲ್ಲಾ ಕಾರ್ಯಕ್ರಮ ಗಳನ್ನು ಮಾಡಲಿದ್ದೇವೆ ಎಂಬ ಬಗ್ಗೆ ಜನರಿಗೆ ತಿಳಿಸಿಕೊಡುವ ಉದ್ದೇಶದಿಂದ ಸಮಾವೇಶ ಮಾಡಿತ್ತು. ಕಳೆದ ಮೂರು ತಿಂಗಳಿನಿಂದ ಬೆಂಗಳೂರು ನಗರದ ಮೂಲೆಮೂಲೆಗಳಲ್ಲಿ ಸಂಚರಿಸಿರುವ ಜನತಾಮಿತ್ರ ವಾಹನಗಳು ಜನರ ಸಮಸ್ಯೆ ಗಳನ್ನು ಸಂಗ್ರಹ ಮಾಡಿದ್ದವು.

ನಾನು ಆರೋಗ್ಯದಿಂದ ಇದ್ದೇನೆ, ಕೆಲ ದಿನ ನನ್ನನ್ನು ಯಾರೂ ಭೇಟಿ ಮಾಡಬೇಡಿ: ದೇವೇಗೌಡ

ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡ್ತಿವೆ.ಅಭಿವೃದ್ಧಿ ಹೆಸರಿನಲ್ಲಿ ಪರಸ್ಪರ ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡ್ತಿವೆ. ಜೆಡಿಎಸ್ ಪಕ್ಷಕ್ಕೆ ಒಂದು ಬಾರಿ ಪೂರ್ಣ ಬಹುಮತ ಕೊಡಿ. ನಿಮ್ಮ ಅವಶ್ಯಕತೆ ಗಳನ್ನು ಪೂರೈಸದೇ ಇದ್ದರೆ ಪಕ್ಷವನ್ನೇ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ರು. 

ಚಿತ್ರದುರ್ಗ: ದೇವೇಗೌಡರ ಆರೋಗ್ಯ ವಿಚಾರಿಸಿದ ಶಿವಮೂರ್ತಿ ಶಿವಾಚಾರ್ಯ ಶ್ರೀ

ಚಂಬಲ್ ಕಣಿವೆಯಲ್ಲಿ ಇದ್ದ ಡಕಾಯಿತರು ವಿಧಾನಸೌಧದಲ್ಲಿ ಸೇರಿಕೊಂಡಿದ್ದಾರೆ. ಅವರನ್ನು ಓಡಿಸುವ ಕೆಲಸ ಮಾಡಿ.ಎಂದು ಜನತೆಗೆ ಕರೆ ಕೊಟ್ಟ ಕುಮಾರಸ್ವಾಮಿ, ಈ ಬಾರಿ ನಿಮ್ಮನ್ನು ನಂಬಿದ್ದೇನೆ. ಒಂದೇ ಒಂದು ಸಲ ಜೆಡಿಎಸ್ ಪಕ್ಷಕ್ಕೆ ಪೂರ್ಣ ಬಹುಮತ ಕೊಡಿ ಎಂದು ಮನವಿ ಮಾಡಿದ್ರು...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ