
ಬೆಂಗಳೂರು( ಜ. 14) ಶಾಸಕ ಮುನಿರತ್ನ ಅವರಿಗೆ ಕೊನೆ ಕ್ಷಣದಲ್ಲಿ ಮಂತ್ರಿಗಿರಿ ತಪ್ಪಿರುವುದು ದೊಡ್ಡ ಚರ್ಚೆಯ ವಿಚಾರ. ಈ ಬಗ್ಗೆ ಮುನಿರತ್ನ ಅವರೆ ಮಾತನಾಡಿದ್ದಾರೆ.
ನಾನು ಸಚಿವನಾಗಲಿಲ್ಲ ಅಂತ ಪಕ್ಷದ ವಿರುದ್ಧ, ಸಿಎಂ, ವರಿಷ್ಠ ನಾಯಕರ ವಿರುದ್ಧ ಮಾತಾಡುವವನಲ್ಲ. ಕೆಲವರು ಮಾತಾಡ್ತಿರೋದನ್ನ ನೋಡ್ತಿದ್ದೇನೆ.. ಹಾಗೆ ಮಾತನಾಡಬಾರದು.. ನನ್ನ ಪ್ರಕಾರ ಅದು ತಪ್ಪು.. ಕ್ಷೇತ್ರದ ಕೆಲಸ ಮಾಡಿಕೊಳ್ಳಲು ಸಿಎಂ ಯಡಿಯೂರಪ್ಪ ಅವರು ಸಂಪೂರ್ಣ ಸಹಕಾರ ನೀಡ್ತಿದ್ದಾರೆ ಎಂದಿದ್ದಾರೆ.
ಸಿಎಂ ವಿರುದ್ಧವೇ ನೋವು ತೋಡಿಕೊಂಡ ರೇಣುಕಾ
ಸಚಿವನಾಗಬೇಕು ಅಂತಾ ನನ್ನ ಹಣೆಯಲ್ಲಿ ಬರೆದಿದ್ದರೆ ನಾನು ಸಚಿವನಾಗೋದು ಯಾರು ತಪ್ಪಿಸಲಿಕ್ಕೆ ಆಗಲ್ಲ.. ಅದಕ್ಕೆ ದೈವ ಕೃಪೆ ಬೇಕಲ್ವಾ? ಈಗ ಎಸ್.ಬಿ.ಎಮ್ ಇಲ್ಲ.. ವಿಶ್ವೇಶ್ವರಯ್ಯ ಅವರು ಕಟ್ಟಿದ ಎಸ್.ಬಿ.ಎಮ್ ಎಲ್ಲಿದೆ? ಅದು ಈಗ ಎಸ್.ಬಿ.ಐ ಆಗಿದೆ ಎನ್ನುತ್ತ ಸ್ನೇಹಿತರ ವಿಚಾರ ಎತ್ತಿದರು.
ಸ್ನೇಹಿತ ಶಾಸಕರೆಲ್ಲಾ ತುಂಬಾ ಬ್ಯೂಸಿ ಆಗಿದ್ದಾರೆ. ಎಲ್ಲರು ಸಚಿವರಾಗಿದ್ದಾರೆ.. ಅರುಣ್ ಸಿಂಗ್ ಅವರ ಜೊತೆ ಮಾತಾಡಿದ್ದೇನೆ. ಇನ್ನೂ ಒಂದುವರೆ ತಿಂಗಳು ಕಾಯಿರಿ ಅಂತಾ ಅರುಣ್ ಸಿಂಗ್ ಹೇಳಿದ್ದಾರೆ. ನನಗೆ ಏನು ತೊಂದರೆ ಇಲ್ಲ.. ಕ್ಷೇತ್ರದ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಮುನಿರತ್ನ ಹೇಳಿದರು.
ಬೆಳಗ್ಗೆ ಎದ್ದು ಫೋನ್ ಮಾಡಿದ್ರೆ ಒಬ್ಬರು ದಾವಣೆಗೆರೆ ಅಂತಾರೆ. ಇನ್ನೊಬ್ನರು ಕೆಲಸದಲ್ಲಿ ಫುಲ್ ಬ್ಯೂಸಿ. ಬಿಜೆಪಿ ಪಕ್ಷಕ್ಕೆ ಸರ್ಕಾರಕ್ಕೆ ಪಾಪ ಪ್ರಾಮಾಣಿಕವಾಗಿ ದುಡಿಯುತ್ತಿರೋರು ಇವರೇ. ನನಗೆ ಇಡಿ, ಐಟಿ ಗೊತ್ತಿಲ್ಲ.. ಲೋಕಾಯುಕ್ತದ ಹತ್ತಿರಕ್ಕೂ ನಾನು ಹೋಗಿಲ್ಲ. ಇಲ್ಲಿಯ ವರೆಗೂ ಐಟಿ ಒಂದು ನೋಟೀಸ್ ನನಗೆ ಬರದಂತೆ ಟ್ಯಾಕ್ಸ್ ಕಟ್ಟಿಕೊಂಡು ಹೋಗ್ತಿರುವವನು ನಾನು.. ನನ್ನ ಮೇಲೆ ಕೆಲವು ಚುನಾವಣಾ ಪ್ರಕರಣಗಳಿವೆ ಅಷ್ಟೇ. ಚುನಾವಣೆಯಲ್ಲಿ ನಾನು ಗೆಲ್ಲಲು ಮಾಡಿರುವ ತಂತ್ರವನ್ನು ಎಲ್ಲರೂ ಮಾಡುತ್ತಾರೆ.
ಏನೇ ಇದ್ರೂ ಹೈಕಮಾಂಡ್ ಜೊತೆ ಮಾತಾಡಿಕೊಳ್ಳಿ ಎಂಬ ಸಿಎಂ ಹೇಳಿಕೆಗೂ ಪ್ರತಿಕ್ರಿಯೆ ನೀಡಿದ ಮುನಿರತ್ನ ಸಿಎಂ ಬಿಎಸ್ ವೈ ಸರಿಯಾಗಿಯೇ ಹೇಳಿದ್ದಾರೆ.. ಸಿಎಂ ಹೇಳಿದ್ರು ಇವರು ಕೇಳ್ತಿಲ್ಲ ಎಂದ ಮೇಲೆ ಹೈಕಮಾಂಡ್ ಬಳಿಯೇ ಹೋಗಿ ಎಂದಿದ್ದಾರೆ. ಯಾರೇ ಆಗಲಿ ಆಧಾರ ರಹಿತ ಆರೋಪಗಳನ್ನ ಮಾಡಬಾರದು ಎಂದು ಹೇಳುವ ಮೂಲಕ ಮಂತ್ರಿ ಗಿರಿ ತಪ್ಪಿದ ವಿಚಾರ ಮತ್ತು ಸ್ನೇಹಿತರು ನಡೆದುಕೊಳ್ಳುತ್ತಿರುವ ರೀತಿ ತೆರೆದಿಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.