ಮೋದಿಗೆ ಕಮಲ್ ಸವಾಲು.. ಹೊಸ ಸಂಸತ್ ಭವನಕ್ಕೆ ಚೀನಾ ಗೋಡೆ ಹೋಲಿಕೆ!

By Suvarna NewsFirst Published Dec 13, 2020, 6:59 PM IST
Highlights

ನೂತನ ಸಂಸತ್ ಭವನ ನಿರ್ಮಾಣ/ ಕಮಲ್ ಹಾಸನ್ ವಿಡಂಬನಾತ್ಮಕ ಟ್ವೀಟ್/ ಚೀನಾದ ಮಹಾಗೋಡೆಎಗೆ ಸಂಸತ್ ಭವನ ನಿರ್ಮಾಣ ಕೆಲಸ ಹೋಲಿಕೆ/ ಕೊರೋನಾ ಸಂಕಷ್ಟದಲ್ಲಿ ಇರುವಾಗ ಇದೆಲ್ಲ ಬೇಕಿತ್ತಾ?

ಚೆನ್ನೈ (ಡಿ. 13) ನೂತನ ಸಂಸತ್ ಭವನ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಆದರೆ ಇದೆ ವಿಚಾರವನ್ನು ನಟ, ರಾಜಕಾರಣಿ ಕಮಲ್ ಹಾಸನ್ ವಿಭಿನ್ನವಾಗಿ ಪ್ರಶ್ನೆ ಮಾಡಿದ್ದಾರೆ.

ಸೋಶಿಯಲ್ ಮೀಡಿಯಾ ಮುಖೇನ ನೂತನ ಸಂಸತ್ ಭವನ ನಿರ್ಮಾಣದ ಅಗತ್ಯವಿತ್ತೇ ಎಂದು ಅವರು ಪ್ರಶ್ನಿಸಿದ್ದಾರೆ. ಕೊರೊನಾ ವೈರಸ್‌ನಿಂದಾಗಿ ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಜನರಿಗೆ ಉದ್ಯೋಗವಿಲ್ಲ, ಹಸಿವಿನಿಂದ ಬಳಲುತ್ತಿದ್ಧಾರೆ. ಇಂಥಾ ಸಮಯದಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ನೂತನ ಸಂಸತ್ ಭವನ ನಿರ್ಮಿಸುವ ಅಗತ್ಯವಿತ್ತೆ ಎಂದು ಪ್ರಶ್ನೆ ಮಾಡಿದ್ದು ಪ್ರತಿಕ್ರಿಯೆಗಳನ್ನು ಎದುರಿಸಿದ್ದಾರೆ.

ಏಕಾಂಗಿ ಹೋರಾಟಕ್ಕೆ ಮುಂದಾದ ಕಮಲ್ ಹಾಸನ್

ವಿಡಂಬನಾತ್ಮಕವಾಗಿ ಮಾತನಾಡಿರುವ ಕಮಲ್ ಹಾಸನ್,  ನೂತನ ಸಂಸತ್‌ ಭವನವನ್ನು ಚೀನಾದ ಮಹಾ ಗೋಡೆಗೆ ಹೋಲಿಕೆ ಮಾಡಿದ್ದಾರೆ. ಚೀನಾದ ಮಹಾ ಗೋಡೆ ನಿರ್ಮಾಣದ ವೇಳೆ ಸಾವಿರಾರು ಜನರು ಸಾವನ್ನಪ್ಪಿದರು. ಆದ್ರೆ, ಚೀನಾ ದೇಶ ಮಾತ್ರ ಈ ಮಹಾಗೋಡೆಯು ಜನರಿಗೆ ರಕ್ಷಣೆ ಕೊಡುತ್ತೆ  ಎಂದು ವಾದ ಮಾಡಿಕೊಂಡು ಬಂದಿದ್ದರು. ಇದು ಹಾಗೆ ಆಗಿದೆ ಎಂದಿದ್ದಾರೆ.

ತಮಿಳುನಾಡಿನಲ್ಲಿಯೂ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ.  ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್  ಸಹ ಈ ಬಾರಿ ಅದೃಷ್ಟ ಪರೀಕ್ಷೆ ಮಾಡುವ ನಿರೀಕ್ಷೆ ಇದೆ. ಇನ್ನೊಂದು ಕಡೆ  ರಜನೀಕಾಂತ್ ಸಹ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದರೆ ಬಿಜೆಪಿ ನಿರಂತರವಾಗಿ ಪಕ್ಷ ಸಂಘಟನೆ ಕೆಲಸ ಮಾಡುತ್ತಿದೆ. 

click me!