ರಾಜ್ಯಸಭಾ ಚುನಾವಣೆ: 2016ರಲ್ಲೂ 8 ಜೆಡಿಎಸ್‌ ಶಾಸಕರಿಂದ ಅಡ್ಡಮತದಾನ

Published : Feb 28, 2024, 06:31 AM IST
ರಾಜ್ಯಸಭಾ ಚುನಾವಣೆ: 2016ರಲ್ಲೂ 8 ಜೆಡಿಎಸ್‌ ಶಾಸಕರಿಂದ ಅಡ್ಡಮತದಾನ

ಸಾರಾಂಶ

ರಾಜ್ಯದಲ್ಲಿ ಅಡ್ಡಮತದಾನ ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಜೆಡಿಎಸ್‌ನ ಎಂಟು ಶಾಸಕರು ಅಂದಿನ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಅಡ್ಡಮತ ಚಲಾಯಿಸಿ ಯಾವುದೇ ಸಂಕಷ್ಟಕ್ಕೆ ಸಿಲುಕದೇ ಪಾರಾಗಿದ್ದನ್ನು ಗಮನಿಸಬೇಕು.

ಬೆಂಗಳೂರು(ಫೆ.28):  ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಪರ ಅಡ್ಡ ಮತದಾನ ಮಾಡಿದ್ದಾರೆ. ಆದರೆ ರಾಜ್ಯದಲ್ಲಿ ಅಡ್ಡಮತದಾನ ಇದೇ ಮೊದಲಲ್ಲ. ಈ ಹಿಂದೆ 2016ರಲ್ಲಿ ಜೆಡಿಎಸ್‌ನ ಎಂಟು ಶಾಸಕರು ಅಂದಿನ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರ ಅಡ್ಡಮತ ಚಲಾಯಿಸಿ ಯಾವುದೇ ಸಂಕಷ್ಟಕ್ಕೆ ಸಿಲುಕದೇ ಪಾರಾಗಿದ್ದನ್ನು ಗಮನಿಸಬೇಕು.

ಜೆಡಿಎಸ್‌ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎಂ.ಫಾರೂಕ್‌ ಅವರಿಗೆ ಮತ ಹಾಕುವಂತೆ ಜೆಡಿಎಸ್‌ ವಿಪ್‌ ಜಾರಿ ಮಾಡಿತ್ತು. ಇದನ್ನು ಲೆಕ್ಕಿಸದೇ ಆಗ ಜೆಡಿಎಸ್‌ ಶಾಸಕರಾಗಿದ್ದ ಜಮೀರ್‌ ಅಹಮದ್ ಖಾನ್, ಚಲುವರಾಯಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಅಖಂಡ ಶ್ರೀನಿವಾಸಮೂರ್ತಿ, ಕೆ.ಗೋಪಾಲಯ್ಯ, ಇಕ್ಬಾಲ್‌ ಅನ್ಸಾರಿ, ಎಚ್‌.ಸಿ.ಬಾಲಕೃಷ್ಣ ಹಾಗೂ ಭೀಮಾ ನಾಯಕ್‌ ಕಾಂಗ್ರೆಸ್‌ ಅಭ್ಯರ್ಥಿ ಪರ ಮತ ಚಲಾಯಿಸಿದ್ದರು.

DK Shivakumar: ಕಾಂಗ್ರೆಸ್‌ಗೆ ಆತ್ಮಸಾಕ್ಷಿಯ ವೋಟು ಹಾಕ್ತಾರೆ, ದುಡ್ಡಿದೆ ಎಂದು ಶಾಸಕರನ್ನ ಬೆದರಿಸಿದ್ರೆ ಆಗಲ್ಲ: ಡಿಕೆಶಿ

ಈ ವೇಳೆ ಈ ಬಂಡಾಯ ಶಾಸಕರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಇವರನ್ನು ಅನರ್ಹಗೊಳಿಸುವಂತೆ ಆಗ್ರಹಿಸಿ ಅಂದಿನ ಜೆಡಿಎಸ್ ಶಾಸಕರಾದ ಬಿ.ಬಿ.ನಿಂಗಯ್ಯ ಮತ್ತು ಸಿ.ಎನ್‌.ಬಾಲಕೃಷ್ಣ ಅವರು ವಿಧಾನಸಭೆಯ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರಿಗೆ ದೂರು ನೀಡಿದ್ದರು. ಈ ದೂರು ಅರ್ಜಿ ವಿಚಾರಣೆ ಮಾಡಿದ ಸ್ಪೀಕರ್‌, ಶಾಸಕರಿಬ್ಬರಿಗೆ ವಿವರಣೆ ನೀಡುವಂತೆ ನೋಟಿಸ್‌ ಜಾರಿ ಮಾಡಿದ್ದರು. ಬಳಿಕ ಇಬ್ಬರು ಶಾಸಕರು ಸ್ಪೀಕರ್‌ಗೆ ವಿವರಣೆ ನೀಡಿದ್ದರು.

ಸುಮಾರು ಎರಡು ವರ್ಷಗಳ ಕಾಲ ಈ ಶಾಸಕರ ಅನರ್ಹತೆ ಅರ್ಜಿ ಸಂಬಂಧ ಯಾವುದೇ ಕ್ರಮ ಆಗಲಿಲ್ಲ. ಈ ನಡುವೆ 2018ರ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ವಿಧಾನಸಭೆ ವಿಸರ್ಜನೆಯಾದ ಹಿನ್ನೆಲೆಯಲ್ಲಿ ಶಾಸಕರ ಅನರ್ಹತೆ ಅರ್ಜಿಗೆ ಸಾಂವಿಧಾನಿಕ ಮೌಲ್ಯವಿಲ್ಲ ಎಂದು ಸ್ಪೀಕರ್‌ ಕೋಳಿವಾಡ ಆ ಅರ್ಜಿಯನ್ನು ವಜಾಗೊಳಿಸಿದರು. ಬಳಿಕ ಆ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ