ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ: ಸಿದ್ದರಾಮಯ್ಯ

By Web DeskFirst Published Dec 11, 2018, 1:32 PM IST
Highlights

ಪಂಚರಾಜ್ಯಗಳ ಫಲಿತಾಂಶಗಳು ಬಹುತೇಕ ಪ್ರಕಟ; ತೆಲಾಂಗಣ, ಛತ್ತೀಸ್ ಗಢ, ಮೀಜೋರಾಂನಲ್ಲಿ ಸ್ಪಷ್ಟ ಜನಾದೇಶ; ಕುತೂಹಲ ಕೆರಳಿಸಿರುವ ರಾಜಸ್ಥಾನ, ಮಧ್ಯಪ್ರದೇಶ

ಬೆಂಗಳೂರು: ರಾಷ್ಟ್ರರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶಗಳು ಬಹುತೇಕ ಹೊರಬಿದ್ದಿವೆ. 

ತೆಲಂಗಾಣದಲ್ಲಿ ಕೆ. ಚಂದ್ರಶೇಖರ್ ರಾವ್ ನೇತೃತ್ವದ ತೆಲಂಗಾಣ ರಾಷ್ಟ್ರೀಯ ಪಕ್ಷ (TRS)  ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿದ್ದರೆ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿದೆ.

ರಾಜಸ್ತಾನ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಇನ್ನೂ ಮ್ಯಾಜಿಕ್ ನಂಬರ್ ಮುಟ್ಟಲು ತೀವ್ರ ಪೈಪೋಟಿ ನಡೆಸುತ್ತಿವೆ. ಮೀಜೋರಾಂನಲ್ಲಿ ಮೀಜೋ ನ್ಯಾಷನಲ್ ಫ್ರಂಟ್ (MNF) ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಇದನ್ನೂ ಓದಿ: ಬಿಜೆಪಿ ಸೋಲಿಸಲು ಸೇರಿದ ಸಭೆಗೆ ಅಖಿಲೇಶ್, ಮಮತಾ ಗೈರು

ಫಲಿತಾಂಶಗಳ ಬಗ್ಗೆ ಕರ್ನಾಟಕ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ, ಎಂದು ಬಿಜೆಪಿಗೆ ಟೀಕಿಸಿದ್ದಾರೆ.

ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.
ಪ್ರಚಾರದ ಗಾಳಿಪಟಗಳು ನೆಲಕ್ಕುರುಳುತ್ತಿವೆ.
ಇದು ಗೆದ್ದು ಬೀಗುವ ಸಮಯ ಅಲ್ಲ.

ಸೈದ್ಧಾಂತಿಕವಾಗಿ ಗಟ್ಟಿಗೊಂಡು ನೆಲದಲ್ಲಿ ಕಾಲೂರಿ ಹೋರಾಟದಲ್ಲಿ ತೊಡಗಬೇಕಾದ ಕಾಲ.

— Siddaramaiah (@siddaramaiah)

ನವಂಬರ್- ಡಿಸೆಂಬರ್ ತಿಂಗಳಿನಲ್ಲಿ ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್‌ಗಢ, ತೆಲಂಗಾಣ ಮತ್ತು ಮೀಜೋರಾಂ ವಿಧಾನಸಭೆಗಳಿಗೆ ವಿವಿಧ ಹಂತಗಳಲ್ಲಿ ಚುನಾವಣೆ ನಡೆದಿತ್ತು. ಈ ಚುನಾವಣೆಗೆಳು ಮುಂದಿನ [2019] ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿದೆ.  

click me!