* ಬಸವರಾಜ್ ಬೊಮ್ಮಾಯಿ ಕರ್ನಾಟಕದ ನೂತನ ಸಿಎಂ
* ಬೊಮ್ಮಾಯಿ ಆಯ್ಕೆಗೆ ಪ್ರಮುಖ ಕಾರಣಗಳು
* ಉತ್ತರ ಕರ್ನಾಟಕದ ನಾಯಕನಿಗೆ ಪಟ್ಟ
ಬೆಂಗಳೂರು(ಜು. 27) ಎಸ್ ಆರ್ ಬೊಮ್ಮಾಯಿ ಅವರ ಪುತ್ರ ಬಸವರಾಜ ಸೋಮಪ್ಪ ಬೊಮ್ಮಾಯಿ ಕರ್ನಾಟಕದ ನೂತನ ಸಿಎಂ ಆಗಿ ಆಯ್ಕೆಯಾಗಿದ್ದಾರೆ. ಬುಧವಾರ ಪ್ರಮಾಣ ವಚನಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ. ತಿಂಗಳುಗಳಿಂದ ಸಿಎಂ ರೇಸ್ ನಲ್ಲಿ ಅನೇಕರ ಹೆಸರುಗಳು ಕೇಳಿ ಬರುತ್ತಿದ್ದವು. ಪ್ರಹ್ಲಾದ್ ಜೋಶಿ, ಉದಾಸಿ, ಬೆಲ್ಲದ್, ಸಿಟಿ ರವಿ, ನಿರಾಣಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹೀಗೆ ಹೆಸರುಗಳು ಓಡಾಡುತ್ತಿದ್ದು ಅಂತಿಮವಾಗಿ ಸಿಎಂ ಗಾದಿ ಬೊಮ್ಮಾಯಿ ಪಾಲಾಯಿತು. ಹಾಗಾದರೆ ಬೊಮ್ಮಾಯಿಗೆ ಪ್ಲಸ್ ಆದ ಅಂಶಗಳು ಯಾವವು?
ಲಿಂಗಾಯತ ಸಮುದಾಯ: ರಾಜೀನಾಮೆ ನೀಡಿದ ಬಿಎಸ್ ಯಡಿಯೂರಪ್ಪ ಅವರಂತೆ ಬಸವರಾಜ ಬೊಮ್ಮಾಯಿ ಸಹ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯಕ್ಕೆ ಸೇರಿದವರು. ಬಬಿಜೆಪಿ ಹೈಕಮಾಂಡ್ ಬೇರೆ ಸಮುದಾಯದವರನ್ನು ಸಿಎಂ ಸ್ಥಾನದಲ್ಲಿ ಕುಳ್ಳಿರಿಸಿ ಹೊಸ ಸವಾಲು ಎದುರಿಸಲು ಸಿದ್ಧವಾಗಲಿಲ್ಲ
ಸಿಎಂ ಗಾದಿವರೆಗಿನ ಹಾದಿ; ಬೊಮ್ಮಾಯಿ ಪರಿಚಯ
ಬಿಎಸ್‌ವೈ ಆಶೀರ್ವಾದ: ನಿರ್ಗಮಿತ ನಾಯಕ ಬಿಎಸ್ ಯಡಿಯೂರಪ್ಪ ಅಭಿಪ್ರಾಯವನ್ನು ಸಹಜವಾಗಿಯೇ ಬಿಜೆಪಿ ಹೈಕಮಾಂಡ್ ಕೇಳಿದೆ. ಈ ವೇಳೆ ಯಡಿಯೂರಪ್ಪ ಸಹ ತಮ್ಮ ಎರಡನೇ ಆಯ್ಕೆ ಬೊಮ್ಮಾಯಿ ಎಂದು ತಿಳಿಸಿದ್ದಾರೆ. ಬಿಎಸ್‌ವೈ ಕೆಜೆಪಿ ಕಟ್ಟಿದಾಗ ಅಲ್ಲಿಗೆ ಹೋಗದೆ ಬಿಜೆಪಿಯಲ್ಲೇ ಇದ್ದು ಪಕ್ಷ ನಿಷ್ಠೆ ಮೆರೆದಿದ್ದರು.
ಉತ್ತರ ಕರ್ನಾಟಕ ಭಾಗ: ಉತ್ತರ ಕರ್ನಾಟಕ ಭಾಗದ ನಾಯಕನಿಗೆ ಸಿಎಂ ಸ್ಥಾನ ನೀಡಬೇಕು ಎಂಬುದು ಬಹಳ ದಿನಗಳಿಂದ ಕೇಳಿಬರುತ್ತಿದ್ದ ಮಾತು. ಬಿಜೆಪಿ ಆ ನಿಟ್ಟಿನಲ್ಲಿಯೂ ಹೆಜ್ಜೆ ಇಡುವ ಕೆಲಸ ಮಾಡಿದೆ.
ಮೃದು ನಡವಳಿಕೆ; ಬೊಮ್ಮಾಯಿ ಮೊದಲಿನಿಂದಲೂ ಮೃದು ನಡವಳಿಕೆಯಿಂದ ಇದ್ದವರು. ಜನತಾ ಪರಿವಾರದಿಂದ ಬಿಜೆಪಿಗೆ ಬಂದು ಇಲ್ಲಿಯೂ ಎಲ್ಲರ ಜತೆ ಸ್ನೇಹದಿಂದ ಇದ್ದವರು.