ಕೈಗೊಂಬೆ ಸಿಎಂನಿಂದ ಅಧೋಗತಿಗೆ ರಾಜ್ಯ; ನೂತನ ಮುಖ್ಯಮಂತ್ರಿ ಬೊಮ್ಮಾಯಿ ಕುಟುಕಿದ ಕಾಂಗ್ರೆಸ್

By Suvarna NewsFirst Published Jul 27, 2021, 10:22 PM IST
Highlights
  • ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ
  • ಬೊಮ್ಮಾಯಿ ಕಳಪೆ, ಕೈಕೊಂಬೆ ಸಿಎಂ ಎಂದ ಕರ್ನಾಟಕ ಕಾಂಗ್ರೆಸ್
  • ರಾಜ್ಯದ ಭವಿಷ್ಯ ಊಹಿಸಲು ಸಾಧ್ಯ ಎಂದು ಕಾಂಗ್ರೆಸ್ ಟೀಕೆ

ಬೆಂಗಳೂರು(ಜು.27): ಕರ್ನಾಟಕದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಯ್ಕೆಗೆ ಬಿಜೆಪಿ ನಾಯಕರು ಸೇರಿದಂತೆ ಕರ್ನಾಟಕ ಅಭಿನಂದೆ ಸಲ್ಲಿಸುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಬಸವರಾಜ ಬೊಮ್ಮಾಯಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಆದರೆ ಕರ್ನಾಟಕ ಕಾಂಗ್ರೆಸ್ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯನ್ನು ಕುಟುಕಿದೆ.

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆ

ಬಸವರಾಜ ಬೊಮ್ಮಾಯಿ ವಿಫಲ ಗೃಹಮಂತ್ರಿಯಾಗಿದ್ದರು, ಅವರನ್ನೇ ಮುಖ್ಯಮಂತ್ರಿ ಮಾಡಲಾಗಿದೆ. ಕೈಗೊಂಬೆ ಮುಖ್ಯಮಂತ್ರಿಯಿಂದ  ರಾಜ್ಯ ಅಧೋಗತಿಗೆ ಇಳಿಯಲಿದೆ ಎಂದು ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ. 

 

ವಿಫಲ ಗೃಹಮಂತ್ರಿಯನ್ನು ಮುಖ್ಯಮಂತ್ರಿ ಮಾಡಿದರೂ ತಮ್ಮ ವಿಫಲ ಆಡಳಿತವನ್ನು ಮುಂದುವರೆಸುತ್ತಾರೆ.

ಗೃಹ ಖಾತೆಯನ್ನು ಅತೀ ಕಳಪೆಯಾಗಿ ನಿಭಾಯಿಸಿದ್ದ ಅವರನ್ನು ಸಿಎಂ ಮಾಡಲು ಮುಂದಾಗಿದೆ,

ಈ "ಕೈಗೊಂಬೆ ಸಿಎಂ"ನಿಂದ ಮುಂದೆ ರಾಜ್ಯ ಇನ್ನಷ್ಟು ಅಧೋಗತಿಗೆ ಇಳಿಯಲಿದೆ ಎಂಬ ಭವಿಷ್ಯವನ್ನು ನಾವು ಈಗಲೇ ಊಹಿಸಬಹುದು.

— Karnataka Congress (@INCKarnataka)

ಇನ್ನು ದಲಿತರನ್ನು ಸಿಎಂ ಇಚ್ಚಾಶಕ್ತಿಯನ್ನು ಬಿಜೆಪಿ ಯಾಕೆ ತೋರಿಸಿಲ್ಲ. ಕನಿಷ್ಠ ಸಿಎಂ ಹುದ್ದೆ ರೇಸ್‌ನಲ್ಲಿ ದಲಿತ ನಾಯಕರ ಹೆಸರು ಕೇಳಲಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದೆ.

 

' ಅವರೇ, ದಲಿತ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವ ಇಚ್ಛಾಶಕ್ತಿಯನ್ನೇ ತೋರಲಿಲ್ಲವಲ್ಲ ತಾವು?

ಕನಿಷ್ಠ ಸಿಎಂ ಹುದ್ದೆಯ ರೇಸ್‌ನಲ್ಲಿಯೇ ದಲಿತರು ಬರದಿರುವುದೇಕೆ ನಿಮ್ಮ ಪಕ್ಷದಲ್ಲಿ?

ಇತರರಿಗೆ ದಲಿತ ಸಿಎಂ ಮಾಡಿ ಎಂದು ಹುಕುಂ ಹೊರಡಿಸುವ ತಾವು ತಮ್ಮದೇ ಪಕ್ಷದಲ್ಲಿ, ತಮ್ಮದೇ ಅಧ್ಯಕ್ಷಗಿರಿಯಲ್ಲಿ ಮಾಡದಿರುವುದೇಕೆ?

— Karnataka Congress (@INCKarnataka)

ನೂತನ ಸಿಎಂ ಆಗಿ ಬೊಮ್ಮಾಯಿ ಆಯ್ಕೆ; ತಂದೆ ಬಳಿಕ ಮಗ ಮುಖ್ಯಮಂತ್ರಿಯಾದ ಕರ್ನಾಟಕದ 2ನೇ ಜೋಡಿ!

ಬಿಎಸ್ ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಭ್ರಷ್ಟ ಸಿಎಂ ರಾಜೀನಾಮೆ ನೀಡಿದರೆ ಬಿಜೆಪಿ ಮತ್ತೊಬ್ಬ ಭ್ರಷ್ಟ ಸಿಎಂಗೆ ಮಣೆ ಹಾಕಲಿದೆ. ಇದರಿಂದ ಬಿಜೆಪಿ ಸರ್ಕಾರ ತೊಲಗುವುದು ಒಳ್ಳೆಯದು ಎಂದು ಸಿದ್ದರಾಮಯ್ಯ ಹೇಳಿದ್ದರು.

click me!