ಯುವ ನಿಧಿ ಯೋಜನೆಗೆ ಬಜೆಟ್‌ನಲ್ಲಿ 2500 ಕೋಟಿ ಬೇಕು: ಸಚಿವ ಶರಣ ಪ್ರಕಾಶ್‌ ಪಾಟೀಲ್‌

Published : Jul 02, 2023, 03:20 AM IST
ಯುವ ನಿಧಿ ಯೋಜನೆಗೆ ಬಜೆಟ್‌ನಲ್ಲಿ 2500 ಕೋಟಿ ಬೇಕು:  ಸಚಿವ ಶರಣ ಪ್ರಕಾಶ್‌ ಪಾಟೀಲ್‌

ಸಾರಾಂಶ

ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲೊಂದಾಗಿರುವ ಯುವನಿಧಿ ಯೋಜನೆಯನ್ನು ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ಸಾಗಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಹೇಳಿದ್ದಾರೆ. 

ಕಲಬುರಗಿ (ಜು.02): ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲೊಂದಾಗಿರುವ ಯುವನಿಧಿ ಯೋಜನೆಯನ್ನು ರಾಜ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯಿಂದ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ಸಾಗಿವೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ ಇಲಾಖೆ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಹೇಳಿದ್ದಾರೆ. ಕಲಬುರಗಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ 2022-23ರಲ್ಲಿ ಪದವಿ/ಡಿಪ್ಲೊಮಾ ಶಿಕ್ಷಣ ಮುಗಿಸಿರುವ 4.50 ಲಕ್ಷ ಯುವಕರಿದ್ದಾರೆ. 

ಪದವಿ ಪಡೆದ ದಿನದಿಂದ 6 ತಿಂಗಳಲ್ಲಿ ಉದ್ಯೋಗ ದೊರಕದೆ ಹೋದಲ್ಲಿ ಅಂಥವರು ಯುವನಿಧಿ ಯೋಜನೆಯ ಫಲಾನುಭವಿಗಳಾಗಲು ಅರ್ಹರಾಗುತ್ತಾರೆ. ಮುಂದಿನ 2 ವರ್ಷ ಕಾಲ ಅವರಿಗೆ ಮಾಸಿಕ .3 ಸಾವಿರ ನೀಡಲಾಗುತ್ತದೆ. ಇದಕ್ಕಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ವಿತರಿಸಲು ವ್ಯವಸ್ಥೆ ಮಾಡಲಾಗುತ್ತದೆ. ಈ ಬಜೆಟ್‌ನಲ್ಲಿ 2,500 ಕೋಟಿ ಯುವನಿಧಿಗೇ ಬೇಕಾಗುತ್ತದೆ ಎಂದರು. ಈಗಾಗಲೇ ಪದವೀಧರರು, ಡಿಪ್ಲೋಮಾ ಆದ ಯುವಕರ ಸಮೀಕ್ಷೆ, ಅಂಕಿ-ಅಂಶ ಎಲ್ಲವನ್ನೂ ಕಲೆ ಹಾಕಲಾಗಿದೆ. ಸೌಲಭ್ಯ ಸರಳವಾಗಿ ಯುವಕರನ್ನು ಹೇಗೆ ತಲುಬೇಕು ಎಂಬುದರ ಕುರಿತು ಚರ್ಚೆಗಳು ಸಾಗಿವೆ ಎಂದರು.

ಸರ್ಕಾರ ಕೃಷಿ ತಿದ್ದು​ಪಡಿ ಕಾಯ್ದೆಗಳ ರದ್ದುಗೊಳಿಸಿಲಿ: ಕೋಡಿಹಳ್ಳಿ ಚಂದ್ರಶೇಖರ್‌

ಟಾಟಾ ಟೆಕ್ನಾಲಜೀಸ್‌ನಿಂದ ಇನ್ನೂ 30 ಸರ್ಕಾರಿ ಐಟಿಐ ಅಭಿವೃದ್ಧಿಗೆ ಪ್ರಸ್ತಾವನೆ: ಈಗಾಗಲೇ ಕರ್ನಾಟಕದಾದ್ಯಂತ 150 ಸರ್ಕಾರಿ ಸ್ವಾಮ್ಯದ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಇತ್ತೀಚಿನ ಮೂಲಸೌಕರ್ಯ, ಉದ್ಯಮ-ಆಧಾರಿತ ಕೋರ್ಸ್‌ವಾರು ತರಬೇತಿ ಮತ್ತು ಉನ್ನತೀಕರಿಸಲು ಮತ್ತು ಆಧುನೀಕರಿಸಲು ಯೋಜನೆ ಅನುಷ್ಠಾನಗೊಳಿಸಿರುವ ಟಾಟಾ ಟೆಕ್ನಾಲಜೀಸ್‌ ಉದ್ದಿಮೆ ಸಮೂಹದವರು ಈ ವರ್ಷ ರಾಜ್ಯದ ವಿವಿಧ ಭಾಗಗಳಲ್ಲಿರುವ ಇನ್ನೂ 30 ಐಟಿಐಗಳ ಉನ್ನತೀಕರಣಕ್ಕೆ ಮುಂದಾಗಿದ್ದಾರೆ.

150 ಸರ್ಕಾರಿ ಸ್ವಾಮ್ಯದ ಐಟಿಐ ನವೀಕರಿಸಲು ಮತ್ತು ಆಧುನೀಕರಿಸಲು ಸಕಾರ್ರದೊಂದಿಗೆ 10 ವರ್ಷಗಳ ಅವಧಿಗೆ ಒಪ್ಪಂದದ ಆಗಿದೆ. ಟಾಟಾ ಸಂಸ್ಥೆಯವರು ಈ ಯೋಜನೆಯಡಿಯಲ್ಲಿ 4,600 ಕೋಟಿ.ರು ಹೂಡಿಕೆ ಮಾಡಿದ್ದಾರೆ. ಹೊಸತಾಗಿ ಇನ್ನೂ 30 ಐಟಿಐಗಳನ್ನು ಉನ್ನತೀಕರಿಸಲು ಟಾಟಾ ಸಂಸ್ಥೆಯವರಿಗೆ ನೀಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಗಳು ಸಾಗಿದ್ದು ಶೀಘ್ರವೇ ಅಂತಿಮ ನಿರ್ಣಯ ಕೈಗೊಳ್ಳುತ್ತೇವೆಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್‌ ಹೇಳಿದ್ದಾರೆ.

ಗ್ಯಾರಂಟಿ ಯೋಜನೆ ವಿಫಲಗೊಳಿಸಲು ಅಕ್ಕಿ ನೀಡದ ಕೇಂದ್ರ ಸರ್ಕಾರ: ಸಚಿವ ತಿಮ್ಮಾಪುರ

ಕಲಬುರಗಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಾದ್ಯಂತ 270 ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳು ಇವೆ. ಈ ಪೈಕಿ 150 ಅದಾಗಲೇ ಗುರುತಿಸಿ ಟಾಟಾ ಸಂಸ್ಥೆಯ ಸಹಯೋಗದಲ್ಲಿ ಉನ್ನತೀಕರಣ ಸಾಗಿದೆ. ಇದು ಹಂತಹಂತವಾಗಿ ನಡೆಯೋ ಕೆಲಸವಾದ್ದರಿಂದ ಇನ್ನೂ 30 ಐಟಿಐಗಳು ಈ ಸರಣಿಗೆ ಸೇರಿಸುವ ಯೋಚನೆ ಟಾಟಾ ಸಂಸ್ಥೆಯವರು ಮಾಡಿದ್ದಾರೆ. ಸರ್ಕಾರದ ಹಂತದಲ್ಲಿ ಈ ವಿಚಾರ ಚರ್ಚೆಯಲ್ಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಕೃಷ್ಣತತ್ತ್ವ ನಂಬಿದವನೇ ಹೊರತು, ಕಾಂಗ್ರೆಸ್‌ನ ಕಂಸ ಹಿಂಸೆಯನ್ನಲ್ಲ: ಹೆಚ್.ಡಿ.ಕುಮಾರಸ್ವಾಮಿ!
ಬಿಹಾರದಲ್ಲಿ NDA ಗೆಲುವು ನಿಜ, ಆದ್ರೆ ಸೋತಿದ್ದು ಪ್ರಜಾಪ್ರಭುತ್ವ: ತೇಜಸ್ವಿ ಯಾದವ್