ಕೊಡಗು: ಅಂಚೆ ಮತಪತ್ರದ ಮೂಲಕ 2,474 ಮಂದಿ ಮತದಾನಕ್ಕೆ ಹೆಸರು ನೋಂದಣಿ

By Kannadaprabha News  |  First Published Apr 27, 2023, 5:05 AM IST

ವಿಧಾನಸಭಾ ಚುನಾವಣೆ ಸಂಬಂಧ ಈಗಾಗಲೇ 80 ವರ್ಷ ಮೇಲ್ಪಟ್ಟವರು ಅಂಚೆ ಮತಪತ್ರ ಮೂಲಕ ಮತದಾನ ಮಾಡುವಂತಾಗಲು ಗುರುತಿಸಲಾಗಿದ್ದು, ಈ ಸಂಬಂಧ ಏಪ್ರಿಲ್‌, 29 ರಿಂದ ಮೇ 6ರ ವರೆಗೆ ಮನೆ ಮನೆಗೆ ತೆರಳಿ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸುವಂತಾಗಬೇಕು ಎಂದು ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದ್ದಾರೆ.


ಮಡಿಕೇರಿ (ಏ.27) : ವಿಧಾನಸಭಾ ಚುನಾವಣೆ ಸಂಬಂಧ ಈಗಾಗಲೇ 80 ವರ್ಷ ಮೇಲ್ಪಟ್ಟವರು ಅಂಚೆ ಮತಪತ್ರ ಮೂಲಕ ಮತದಾನ ಮಾಡುವಂತಾಗಲು ಗುರುತಿಸಲಾಗಿದ್ದು, ಈ ಸಂಬಂಧ ಏಪ್ರಿಲ್‌, 29 ರಿಂದ ಮೇ 6ರ ವರೆಗೆ ಮನೆ ಮನೆಗೆ ತೆರಳಿ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸುವಂತಾಗಬೇಕು ಎಂದು ಸಂಬಂಧಪಟ್ಟಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಬಿ.ಸಿ.ಸತೀಶ ಸೂಚಿಸಿದ್ದಾರೆ.

ನಗರದ ಗಾಂಧಿ ಭವನದಲ್ಲಿ ಸೆಕ್ಟರ್‌ ಅಧಿಕಾರಿಗಳಿಗೆ ಮತ್ತು ಪೋಲಿಂಗ್‌ ಅಧಿಕಾರಿಗಳಿಗೆ ಬುಧವಾರ ನಡೆದ ತರಬೇತಿ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

Latest Videos

undefined

25 ವರ್ಷ ಶಾಸಕನಾಗಿ ಪಿಕ್ನಿಕ್‌ಗೆ ಹೋಗಿದ್ದ ಅಪ್ಪಚ್ಚುರಂಜನ್: ಅಭಿವೃದ್ಧಿಯೇ ಮಾಡಿಲ್ಲ

ಕೊಡಗು(Kodagu) ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟವರು 1992 ಮಂದಿ ಅಂಚೆ ಮತಪತ್ರ ಮೂಲಕ ಮತ ಚಲಾಯಿಸಲು ಮುಂದಾಗಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರ(Madikeri Assembly constituency)ದಲ್ಲಿ 1,010 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರ(Virajapete assembly)ದಲ್ಲಿ 982 ಮಂದಿ, ಹಾಗೆಯೇ ವಿಕಲಚೇತನರು(ಪಿಡಬ್ಲ್ಯುಡಿ) 482 ಮಂದಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 268 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 214 ಮಂದಿ ವಿಕಲಚೇತನರು ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲಿದ್ದು, ಒಟ್ಟಾರೆ 2,474 ಮಂದಿ ಅಂಚೆ ಮತಪತ್ರ ಮೂಲಕ (ನಮೂನೆ-12 ಡಿ) ಮತ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸೆಕ್ಟರ್‌ ಅಧಿಕಾರಿಗಳು ಮತ್ತು ಪೋಲಿಂಗ್‌ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ನಿಯಮಾನುಸಾರ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿಸಿಕೊಂಡು ಬರಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ಚುನಾವಣಾ ಆಯೋಗದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ವಲ್ಪವೂ ಲೋಪ ಉಂಟಾಗದಂತೆ ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ಅವರು ಮಾತನಾಡಿ 80 ವರ್ಷ ಮೇಲ್ಪಟ್ಟಮತಗಟ್ಟೆಗೆ ತೆರಳಲು ಸಾಧ್ಯ ಇಲ್ಲದಿರುವವರಿಗೆ ಅಂಚೆ ಮತಪತ್ರವನ್ನು ನೀಡಿ ಮತ ಚಲಾಯಿಸಲು ಅಗತ್ಯ ಕ್ರಮವಹಿಸಬೇಕಿದೆ ಎಂದರು.

ಉಪ ವಿಭಾಗಾಧಿಕಾರಿ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಯತೀಶ್‌ ಉಳ್ಳಾಲ್‌ ಅವರು ಪಿಪಿಟಿ ಮೂಲಕ ಮಾಹಿತಿ ನೀಡಿ, ಈಗಾಗಲೇ ನಮೂನೆ-12 ಡಿ ಯನ್ನು ಸಂಬಂಧಪಟ್ಟಬಿಎಲ್‌ಒಗಳ ಮೂಲಕ ವಿತರಿಸಲು ಕ್ರಮವಹಿಸಲಾಗಿದ್ದು, ಅದರಂತೆ ಅಂಚೆ ಮತಪತ್ರ ಮೂಲಕ ಮತದಾನ ಮಾಡಿಸಿಕೊಂಡು ಬರಬೇಕು ಎಂದರು.

ಪ್ರತಿಯೊಂದು ಮತದಾರರ ಮನೆ ತಲುಪಲು ಅನುಕೂಲವಾಗುವಂತೆ ರೂಟ್‌ ಮ್ಯಾಪ್‌ ತಯಾರಿಸಲಾಗಿದ್ದು, ಪ್ರತೀ ಮಾರ್ಗದಲ್ಲಿ ಇಬ್ಬರು ಪೋಲಿಂಗ್‌ ಅಧಿಕಾರಿಗಳು, ಒಬ್ಬ ಮೈಕ್ರೋ ವೀಕ್ಷಕರು, ಒಬ್ಬ ಪೊಲೀಸ್‌ ಸಿಬ್ಬಂದಿ ಹಾಗೂ ಒಬ್ಬ ವಿಡಿಯೋ ಗ್ರಾಫರನ್ನು ನಿಯೋಜಿಸಲಾಗುತ್ತದೆ ಎಂದರು.

ಪೋಲಿಂಗ್‌ ಅಧಿಕಾರಿಗಳು ಅಂಚೆ ಮತಪತ್ರದ ಮತದಾರರ ಪಟ್ಟಿ, ಅಂಚೆ ಮತಪತ್ರ, ಎನ್ವಲಫ್ಸ್‌, ಪೆನ್‌, ಇಂಕ್‌, ಪ್ಯಾಡ್‌, ಬ್ಲೂಸ್ಟಿಕ್‌, ಕೌಂಟರ್‌ ಫೈಲ್‌ಗಳನ್ನು ಸಾಗಿಸುವ ಕ್ಯಾನ್ವಸ್‌ ಬ್ಯಾಗ್‌, ವೋಟಿಂಗ್‌ ಕಂಪಾರ್ಚ್‌ಮೆಂಟ್‌, ಪೋಸ್ಟಲ್‌ ಬ್ಯಾಲೆಟ್‌ ಟ್ರಂಕ್‌ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬೇಕಿದೆ ಎಂದರು.

ಪೋಲಿಂಗ್‌ ಅಧಿಕಾರಿಗಳು ಮತದಾರರು ನಮೂನೆ-12 ಡಿ ನಲ್ಲಿ ನಮೂದಿಸಿರುವ ವಿಳಾಸಕ್ಕೆ ಭೇಟಿ ನೀಡಬೇಕು. ಮತದಾನದ ಮುಂಚಿತವಾಗಿಯೇ ಬಿಎಲ್‌ಒಗಳ ಮೂಲಕ ಮಾಹಿತಿ ನೀಡಬೇಕು ಎಂದರು.

ಈಗಾಗಲೇ ನೀಡಿರುವ ವಿಳಾಸದಲ್ಲಿ ಭೇಟಿ ಸಮಯದಲ್ಲಿ ಲಭ್ಯವಾಗದಿದ್ದಲ್ಲಿ, ಎರಡನೇ ಬಾರಿ ಭೇಟಿ ನೀಡುವ ಬಗ್ಗೆ ಸಮಯ ಮತ್ತು ದಿನಾಂಕ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು. ಅಂಚೆ ಮತಪತ್ರ ಮೂಲಕ ಮತದಾನ ಮಾಡುವ ಮತದಾರರ ಗುರುತಿನ ಬಗ್ಗೆ ದಾಖಲಿಸಬೇಕು. ಮತದಾರರ ಪಟ್ಟಿಯಲ್ಲಿ ವ್ಯಕ್ತಿಯು ಮತದಾನ ಮಾಡಿರುವ ಬಗ್ಗೆ ಸೂಕ್ತವಾಗಿ ಗುರುತಿಸಬೇಕು ಎಂದು ಯತೀಶ್‌ ಉಳ್ಳಾಲ್‌ ತಿಳಿಸಿದರು.

ಮತದಾರರ ಮನೆಯಲ್ಲಿಯೇ ವೋಟಿಂಗ್‌ ಕಂಪಾರ್ಚ್‌ಮೆಂಟನ್ನು ಸೂಕ್ತ ಸ್ಥಳದಲ್ಲಿ ಇರಿಸಲು ಕ್ರಮ ತೆಗೆದುಕೊಳ್ಳಬೇಕು. ಗೌಪ್ಯ ಮತದಾನದ ಕುರಿತು ಗಮನಹರಿಸಬೇಕು. ಈ ಎಲ್ಲ ಕಾರ್ಯಗಳ ಮೇಲ್ವಿಚಾರಣೆಯನ್ನು ಸೆಕ್ಟರ್‌ ಅಧಿಕಾರಿಗಳು ನಿರ್ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಯತೀಶ್‌ ಉಲ್ಲಾಳ್‌ ಅವರು ತಿಳಿಸಿದರು.

ಮತದಾನ ಪ್ರಾರಂಭದಿಂದ ಪೂರ್ಣಗೊಳ್ಳುವವರೆಗೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ಮತದಾನದ ಸಂಪೂರ್ಣ ಜವಾಬ್ದಾರಿಯನ್ನು ಸೆಕ್ಟರ್‌ ಅಧಿಕಾರಿಗಳು ನಿರ್ವಹಿಸಬೇಕು ಎಂದರು.

ಸಂಬಂಧಪಟ್ಟಮೈಕ್ರೋ ವೀಕ್ಷಕರು ಮತದಾನ ಸೂಕ್ತವಾಗಿ ನಡೆಯುತ್ತಿದೆ ಎಂಬ ಬಗ್ಗೆ ಹಾಗೂ ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿಲ್ಲ ಎಂದು ಖಾತರಿಪಡಿಸಿಕೊಂಡು ವರದಿ ನೀಡಬೇಕು ಎಂದು ಹೇಳಿದರು. ಚುನಾವಣಾಧಿಕಾರಿಗಳಾದ ಶಬಾನಾ ಎಂ.ಶೇಖ್‌, ತಹಸೀಲ್ದಾರರು, ಇತರರು ಇದ್ದರು.

ಕಾಂಗ್ರೆಸ್ ಗೆ ಮತ ಹಾಕಿದರೆ ಅತ್ಯಾಚಾರಿಗಳಿಗೆ ಹಾಕಿದಂತೆ, ಅಡ್ಡಂಡ ಕಾರ್ಯಪ್ಪ ವಿವಾದಾತ್ಮಕ ಹೇಳಿಕೆ!

  • 80 ವರ್ಷ ಮೇಲ್ಪಟ್ಟವರು 1992
  • ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,010
  • ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 982

ವಿಕಲಚೇತನರು 482 ಮಂದಿ

  • ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 268
  • ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 214
  • ಒಟ್ಟು 2,474

 ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!