
ಬೆಂಗಳೂರು(ಮಾ.22): ಯುಗಾದಿ ಹಬ್ಬದ ದಿನವಾದ ಬುಧವಾರ ಪ್ರಕಟಿಸಲು ಉದ್ದೇಶಿಸಿದ್ದ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿಯು ಒಂದು ದಿನ ಮುಂದೂಡಿಕೆ ಕಂಡಿದೆ. ಮಾ.23ರಂದು (ಗುರುವಾರ) 126 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ವಾಸ್ತವವಾಗಿ ಯುಗಾದಿ ಹಬ್ಬದ (ಮಾ. 22) ದಿನ ಸಂಜೆ ಪಕ್ಷದ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲು ಕಾಂಗ್ರೆಸ್ ನಾಯಕತ್ವ ಉದ್ದೇಶಿಸಿತ್ತು. ಆದರೆ, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಯುಗಾದಿ ದಿನ ಬೆಂಗಳೂರಿನಲ್ಲೇ ಇದ್ದು ಸಮಾಲೋಚನೆಗಳನ್ನು ನಡೆಸುತ್ತಾರೆ. ಸಂಜೆ ದೆಹಲಿಗೆ ತೆರಳುತ್ತಾರೆ. ಹೀಗಾಗಿ, ಒಂದು ದಿನ ತಡವಾಗಿ ಪಟ್ಟಿ ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಮೂಲಗಳು ಹೇಳುತ್ತವೆ.
'ನಿರಾಣಿ ಮುಖ್ಯಮಂತ್ರಿ ಆಗಿಸುವ ಸಂಕಲ್ಪ ಮಾಡಿ'
ಈ ಮೂಲಗಳ ಪ್ರಕಾರ, ಸಂಖ್ಯಾಶಾಸ್ತ್ರ ಆಧರಿಸಿಯೇ 126 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಒಳಗೊಂಡ ಮೊದಲ ಪಟ್ಟಿಬಿಡುಗಡೆಯಾಗಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಯಕ್ಷಪ್ರಶ್ನೆಗೂ ಈ ಪಟ್ಟಿಯಲ್ಲೇ ಉತ್ತರ ದೊರೆಯುವ ಸಂಭವವಿದೆ. ಎಐಸಿಸಿ ಮೂಲಗಳ ಪ್ರಕಾರ, ಮೊದಲ ಪಟ್ಟಿಯಲ್ಲೇ ಸಿದ್ದರಾಮಯ್ಯ ಅವರ ಹೆಸರನ್ನು ವರುಣ ಕ್ಷೇತ್ರದಿಂದ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.
ಉಳಿದಂತೆ, ಹಾಲಿ ಶಾಸಕರಿರುವ ಐದು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್ ಘೋಷಣೆಯಾಗಲಿದೆ.
ವಿಳಂಬವಾಗಿದ್ದು ಏಕೆ?
ಬುಧವಾರ ಯುಗಾದಿ ಹಬ್ಬ ಇದ್ದು, ಇಂದೇ ಪ್ರಕಟಿಸಲು ಕಾಂಗ್ರೆಸ್ ನಾಯಕತ್ವ ಉದ್ದೇಶಿಸಿತ್ತು. ಆದರೆ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಬುಧವಾರ ಬೆಂಗಳೂರಿನಲ್ಲಿದ್ದು ಮಹತ್ವದ ಸಮಾಲೋಚನೆಗಳನ್ನು ನಡೆಸಲಿದ್ದಾರೆ. ಹೀಗಾಗಿ ಪಟ್ಟಿಬಿಡುಗಡೆಯನ್ನು ಒಂದು ದಿನ ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪತ್ನಿ, ಪುತ್ರನೊಂದಿಗೆ ಚರ್ಚಿಸಿ ಕ್ಷೇತ್ರ ಬಗ್ಗೆ ತೀರ್ಮಾನ: ಸಿದ್ದು
ಬೆಂಗಳೂರು: ಕೋಲಾರದಿಂದ ಸ್ಪರ್ಧಿಸಬೇಡಿ ಎಂದು ಹೈಕಮಾಂಡ್ ಹೇಳಿಲ್ಲ. ಆದರೆ ರಿಸ್‌್ಕ ತೆಗೆದುಕೊಳ್ಳಬೇಡಿ ಎಂದು ಸಲಹೆ ಮಾಡಿದೆ. ಹೀಗಾಗಿ ಪತ್ನಿ, ಪುತ್ರನ ಜತೆ ಚರ್ಚಿಸಿ ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ನಿರ್ಧರಿಸಿ ತಿಳಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.