ಕಾಂಗ್ರೆಸ್ನ ಇನ್ನೂ 10 ಶಾಸಕರು ಬೆಜೆಪಿಗೆ ಬರಲು ಸಜ್ಜಾಗಿದ್ದಾರೆ ಎಂದು ಉಪಚುನಾವಣೆ ಹೊತ್ತಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಡಿಕೇರಿ, (ಅ.24): ಕಾಂಗ್ರೆಸ್ಸಿನ ಇನ್ನೂ ಹತ್ತು ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ.
ಮಡಿಕೇರಿಯಲ್ಲಿ ಇಂದು (ಶನಿವಾರ) ಆಯೋಜಿಸಿದ್ದ ಬಿಜೆಪಿ ಕೊಡಗು ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯನ್ನು ಇಷ್ಟಪಟ್ಟು, ಕಾಂಗ್ರೆಸ್ ಬಗ್ಗೆ ಭ್ರಮನಿರಸನಗೊಂಡು 10 ಶಾಸಕರು ಬಿಜೆಪಿ ಸೇರಲು ಆಸಕ್ತಿ ತೋರುತ್ತಿದ್ದಾರೆ ಎಂದರು.
undefined
ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ, ಬಿಜೆಪಿ ಶಾಸಕಿ ಪತಿ ಉಚ್ಛಾಟನೆ..!
ಕಾಂಗ್ರೆಸ್ನಲ್ಲಿ ಬಂಡೆ (ಡಿ.ಕೆ. ಶಿವಕುಮಾರ್) ಹಾಗೂ ಹುಲಿ(ಸಿದ್ದರಾಮಯ್ಯ) ನಡುವೆ ನಾಯಕತ್ವಕ್ಕಾಗಿ ಪೈಪೋಟಿ ಪ್ರಾರಂಭವಾಗಿದೆ. ಆರ್.ಆರ್. ನಗರದಲ್ಲಿ ಡಿಕೆಶಿ, ಶಿರಾದಲ್ಲಿ ಸಿದ್ದರಾಮಯ್ಯ ಚುನಾವಣಾ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇಬ್ಬರೂ ಪರಸ್ಪರ ಸೋಲಿಸುತ್ತಾರೆ. ಹೀಗಾಗಿ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಲಿದೆ ಎಂದು ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಪಕ್ಷ ತೊರೆದು ಬಂದ 17 ಜನರಿಗೂ ಸ್ಪರ್ಧಿಸಲು ಅವಕಾಶ ನೀಡಿದೆ. ಬಿಜೆಪಿ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನುಡಿದಂತೆ ನಡೆಯುತ್ತಿದ್ದಾರೆ. ಕಾಡು ಮನುಷ್ಯನಿಗಿಂತ ಕಾಡುಪ್ರಾಣಿ ಹೆಚ್ಚು ಅಪಾಯಕಾರಿ. ರಾಜ್ಯದಲ್ಲಿ ಒಂದು ಹುಲಿ ಇದೆ. ಅದಕ್ಕೆ ಗೋಮಾತೆ ಮೇಲೂ ಕನಿಕರವಿಲ್ಲ ಎಂದು ಸಿದ್ದರಾಮಯ್ಯ ಹೆಸರನ್ನು ಪ್ರಸ್ತಾಪಿಸದೆ ಕಟೀಲ್ಪರೀಕ್ಷವಾಗಿ ಟೀಕಿಸಿದರು.
ಡಿ.ಕೆ. ಶಿವಕುಮಾರ್- ಸಿದ್ದರಾಮಯ್ಯ ನಡುವಿನ ನಾಯಕತ್ವ ಪೈಪೋಟಿ ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿಯಲ್ಲಿ ಬೆಂಕಿ ಹಚ್ಚಿದ್ದಾರೆ. ಸಂಪತ್ ರಾಜ್-ಡಿಕೆಶಿ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ-ಸಿದ್ದರಾಮಯ್ಯ ಬೆಂಬಲಿಗರು. ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದ ಬಗ್ಗೆ ಕಾಂಗ್ರೆಸ್ ನಾಯಕರು ಏಕೆ ಮೌನ ವಹಿಸಿದ್ದಾರೆಂದು ಕಟೀಲ್ ಪ್ರಶ್ನಿಸಿದರು.