ವುಶು ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಹರ್ಯಾಣದ ಪಟು ಪ್ರವೀಣ್ ಕುಮಾರ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ..
ಶಾಂಘೈ (ಅ.24): ಭಾರತದ ಪ್ರವೀಣ್ ಕುಮಾರ್, ಬುಧವಾರ ಇಲ್ಲಿ ನಡೆದ ವುಶು ವಿಶ್ವ ಚಾಂಪಿಯನ್‌ಶಿಪ್‌ನ 48 ಕೆ.ಜಿ ವಿಭಾಗದ ಫೈನಲ್‌ನಲ್ಲಿ ಜಯಭೇರಿ ಬಾರಿಸುವ ಮೂಲಕ ಚಿನ್ನಸ ಪದಕ ಜಯಿಸಿದರು. ವಿಶ್ವ ಚಾಂಪಿಯನ್ ಆದ ಭಾರತದ ಮೊದಲ ಪುರುಷ ಹಾಗೂ ಒಟ್ಟಾರೆ 2ನೇ ಕ್ರೀಡಾಪಟು ಎನಿಸಿಕೊಂಡರು.
ಫ್ರೆಂಚ್ ಓಪನ್ 2019: ದ್ವಿತೀಯ ಸುತ್ತಿಗೇರಿದ ಸೈನಾ
Praveen Kumar made history as he became the first Indian man to win a gold medal at the Wushu World Championship. pic.twitter.com/hPcsedNhzI
— DD India - English News (@DDIndiaLive)ಫೈನಲ್‌ನಲ್ಲಿ ಪ್ರವೀಣ್, ಫಿಲಿಪೈನ್ಸ್‌ನ ರಸೆಲ್ ಡಯಾಜ್‌ರನ್ನು 2-1ರಲ್ಲಿ ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮಂಗಳವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಉಜ್ಬೇಕಿಸ್ತಾನದ ಖಾಸನ್ ಇಕ್ರೊಮೊವ್ ವಿರುದ್ಧ 2-0ರಲ್ಲಿ ಪ್ರವೀಣ್ ಗೆದ್ದಿದ್ದರು.
2017ರಲ್ಲಿ ಚಿನ್ನ ಗೆದ್ದಿದ್ದ ಪೂಜಾ ಕಡಿಯಾನ್ ವಿಶ್ವ ಚಾಂಪಿಯನ್ ಆದ ಮೊದಲ ಭಾರತೀಯ ವುಶುಪಟು ಎಂಬ ದಾಖಲೆ ಬರೆದಿದ್ದರು.