ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಏರ್‌ಪೋರ್ಟ್‌ಗೆ ತೆರಳುತ್ತಿದ್ದಾಗ ವಿಶ್ವ ನಂ.1 ಬ್ಯಾಡ್ಮಿಂಟನ್ ಪಟು ಕೆಂಟೊ ಮೊಮೊಟಾ ಅವರಿದ್ದ ವ್ಯಾನ್ ಅಪಘಾತಕ್ಕೊಳಗಾಗಿದೆ. ವ್ಯಾನ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..
ಕೌಲಾಲಂಪುರ(ಜ.14): ವಿಶ್ವ ನಂ.1 ಬ್ಯಾಡ್ಮಿಂಟನ್ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ, ಭಾನುವಾರ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಪುರುಷರ ಸಿಂಗಲ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ ಕೆಲವೇ ಗಂಟೆಗಳಲ್ಲಿ ಅಪಘಾತದಲ್ಲಿ ಗಾಯಗೊಂಡ ಘಟನೆ ನಡೆದಿದೆ.
𝐢𝐬 𝐢𝐧 𝐚𝐥𝐥 𝐨𝐟 𝐨𝐮𝐫 𝐰𝐚𝐫𝐦𝐞𝐬𝐭 𝐭𝐡𝐨𝐮𝐠𝐡𝐭𝐬 𝐚𝐬 𝐡𝐞 𝐫𝐞𝐜𝐨𝐯𝐞𝐫𝐬 𝐟𝐫𝐨𝐦 𝐭𝐡𝐞 𝐚𝐜𝐜𝐢𝐝𝐞𝐧𝐭. 𝐒𝐞𝐧𝐝𝐢𝐧𝐠 🤗𝐡𝐮𝐠𝐬 𝐚𝐧𝐝 ❤️𝐥𝐨𝐯𝐞!
pic.twitter.com/eUmhf80tqT
ಪ್ರಶಸ್ತಿ ಗೆದ್ದ ಬಳಿಕ ಸೋಮವಾರ ಬೆಳಗ್ಗಿನ ಜಾವ ಮೊಮೊಟಾ ಇಲ್ಲಿನ ಏರ್‌ಪೋರ್ಟ್‌ಗೆ ತೆರಳುತ್ತಿದ್ದಾಗ ಹೆದ್ದಾರಿಯಲ್ಲಿ ಅವರು ಚಲಿಸುತ್ತಿದ್ದ ವ್ಯಾನ್, ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅವರ ಮೂಗಿನ ಮೂಳೆ ಮುರಿದಿದ್ದು, ಮುಖದ ಮೇಲೆ ಗಾಯಗಳಾಗಿವೆ.
ಇಂಡೋನೇಷ್ಯಾ ಮಾಸ್ಟರ್ಸ್: ಸಿಂಧು-ಸೈನಾ ಮುಖಾಮುಖಿ?
ವ್ಯಾನ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೊಮೊಟಾ ಸ್ಥಳೀ ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ವರ್ಷದ ಒಲಿಂಪಿಕ್ಸ್ ಸಿದ್ಧತೆಗೆ ಹಿನ್ನಡೆಯಾಗಿದೆ.
ಭಾನುವಾರ ನಡೆದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಕೆಂಟೊ ಮೊಮೊಟಾ, ಮಾಜಿ ವಿಶ್ವಚಾಂಪಿಯನ್ ವಿಕ್ಟರ್ ಅಲೆಕ್ಸನ್ ಅವರನ್ನು ಮಣಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಮೂಲಕ 2020ರ BWF ಟೂರ್'ನ ಮೊದಲ ಪ್ರಶಸ್ತಿ ಜಯಿಸಿದ್ದರು.