Shooting Misfire: ಬೇಟೆಗೆ ಹೋಗಿ ಆಕಸ್ಮಿಕವಾಗಿ ಗುಂಡೇಟಿಗೆ ಬಲಿಯಾದ ಪ್ರತಿಭಾನ್ವಿತ ಶೂಟರ್..!

By Suvarna News  |  First Published Jan 10, 2022, 9:00 AM IST

* ಜೂನಿಯರ್ ವಿಶ್ವಚಾಂಪಿಯನ್‌ ಶೂಟರ್‌ ಆಕಸ್ಮಿಕವಾಗಿ ಬಲಿ

* ಪೆರುವಿನಲ್ಲಿ ನಡೆದ ಜೂನಿಯರ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 1 ಕಂಚು ಗೆದ್ದಿದ್ದ ಶೂಟರ್

* ಶಿಕಾರಿಗೆ ಹೋಗಿ ಗುಂಡೇಟು ತಗುಲಿ ಸಾವನ್ನಪ್ಪಿದ ಇಟಲಿ ಮೂಲದ ಶೂಟರ್


ರೋಮ್‌: ವಿಶ್ವ ಕಿರಿಯರ ಶೂಟಿಂಗ್‌ ಚಾಂಪಿಯನ್‌, ಇಟಲಿಯ ಕ್ರಿಸ್ಟಿಯನ್‌ ಘಿಲ್ಲಿ (Cristian Ghilli) ಆಕಸ್ಮಿಕವಾಗಿ ಸಿಡಿದ ಗುಂಡೇಟಿನಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಘಿಲ್ಲಿ ಕಳೆದ ವರ್ಷ ಪೆರುವಿನಲ್ಲಿ ನಡೆದ ಜೂನಿಯರ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ, 1 ಕಂಚು ಗೆದ್ದಿದ್ದರು. ಪ್ರತಿಭಾನ್ವಿತ ಶೂಟರ್‌ ಬೇಟೆಗೆ ಹೋಗಿ ದುರಂತ ಅಂತ್ಯ ಕಂಡಿರುವುದು ವಿಪರ್ಯಾಸ. 

19 ವರ್ಷದ ಘಿಲ್ಲಿ ಸ್ನೇಹಿತರ ಜೊತೆ ಇಟಲಿಯ ಪಿಸಾ ನಗರದಲ್ಲಿರುವ ಕಾಡಿಗೆ, ಬೇಟೆಗೆ ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಬೇಟೆ ವೇಳೆ ಕೈಯಲ್ಲಿ ರೈಫಲ್‌ ಹಿಡಿದು ಕೆಳಗೆ ಬಿದ್ದಿದ್ದ ಕಾಟ್ರ್ರಿಡ್ಜ್‌ಗಳನ್ನು ಎತ್ತಿಕೊಳ್ಳಲು ಮುಂದಾದಾಗ ಆಕಸ್ಮಿಕವಾಗಿ ಟ್ರಿಗರ್‌ ಒತ್ತಿದ ಪರಿಣಾಮ, ಗುಂಡು ಹೊಟ್ಟೆಯ ಭಾಗಕ್ಕೆ ತಾಗಿದೆ. ಕೂಡಲೇ ಘಿಲ್ಲಿಯನ್ನು ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. 

Tap to resize

Latest Videos

ಈ ಕುರಿತಂತೆ ಹೇಳಿಕೆ ನೀಡಿರುವ ಇಟಲಿ ಶೂಟಿಂಗ್ ಫೆಡರೇಷನ್‌ನ ಲೂಸಿನೊ ರೊಸ್ಸಿ, ಕಳೆದ ಅಕ್ಟೋಬರ್‌ನಲ್ಲಿ ಯುವ ಶೂಟರ್‌ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನ (World Junior Shooting Championship) ಪುರುಷರ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಇದರ ಜತೆಗೆ ವೈಯಕ್ತಿಕ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಇನ್ನು 2021ರ ಮೇ ತಿಂಗಳಿನಲ್ಲಿ ಕ್ರೊವೇಷಿಯಾದಲ್ಲಿ ನಡೆದ ಯೂರೋಪಿಯನ್‌ ಚಾಂಪಿಯನ್‌ಶಿಪ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ, ತಂಡ ವಿಭಾಗದಲ್ಲಿ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು. ಅವರ ಸಾವಿನ ಸುದ್ದಿ ತಿಳಿದು ನಾವೆಲ್ಲರೂ ಆಘಾತಕ್ಕೊಳಗಾಗಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

🇮🇹World sports shooting champion, Cristian Ghilli, dies in a hunting accident at age 19 after accidentally shooting himself while on a hunting trip near Pisa with a group of friends. pic.twitter.com/pSc2LcBK4P

— Moises Lopez (@chapoisat)

ಎಟಿಪಿ ಟೆನಿಸ್ ಟೂರ್ನಿ‌: ಬೋಪಣ್ಣ, ರಾಮ್‌ಗೆ ಪ್ರಶಸ್ತಿ

ಅಡಿಲೇಡ್‌: ಭಾರತದ ರೋಹನ್‌ ಬೋಪಣ್ಣ-ರಾಮ್‌ಕುಮಾರ್‌ ರಾಮನಾಥನ್‌ ಜೋಡಿ ಅಡಿಲೇಡ್‌ ಇಂಟರ್‌ನ್ಯಾಷನಲ್‌ ಎಟಿಪಿ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಭಾನುವಾರ ನಡೆದ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಈ ಜೋಡಿ ಕ್ರೊವೇಷಿಯಾದ ಇವಾನ್‌ ಡೊಡಿಗ್‌-ಬ್ರೆಜಿಲ್‌ನ ಮಾರ್ಸೆಲೊ ಮೆಲೋ ಜೋಡಿ ವಿರುದ್ಧ 7​-6(6), 6-​1 ಸೆಟ್‌ಗಳಿಂದ ಜಯಭೇರಿ ಬಾರಿಸಿತು. ಇದು ಬೋಪಣ್ಣ ಗೆದ್ದ 20ನೇ ಎಟಿಪಿ ಡಬಲ್ಸ್‌ ಪ್ರಶಸ್ತಿಯಾಗಿದ್ದು, ರಾಮ್‌ಕುಮಾರ್‌ ಮೊದಲ ಬಾರಿ ಪ್ರಶಸ್ತಿ ಜಯಿಸಿದ್ದಾರೆ. ಇವರಿಬ್ಬರು ಆಸ್ಪ್ರೇಲಿಯನ್‌ ಓಪನ್‌ನಲ್ಲಿ ಸ್ಪರ್ಧಿಸುವ ನಿರೀಕ್ಷೆ ಇದೆ.

ಐಎಸ್‌ಎಲ್‌: ಬಿಎಫ್‌ಸಿಗೆ ಇಂದು ಮುಂಬೈ ಸವಾಲು

ಮಾರ್ಗೋ: 8ನೇ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌(Indian Super League) (ಐಎಸ್‌ಎಲ್‌)ನಲ್ಲಿ ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ(Bengaluru FC), ಸೋಮವಾರ ಮುಂಬೈ ಸಿಟಿ ಎಫ್‌ಸಿ (Mumbai City FC) ವಿರುದ್ಧ ಸೆಣಸಾಡಲಿದೆ. ಈ ಆವೃತ್ತಿಯ ಮೊದಲ ಮುಖಾಮುಖಿಯಲ್ಲಿ ಮುಂಬೈಗೆ 1-3 ಗೋಲುಗಳಿಂದ ಶರಣಾಗಿದ್ದ ಸುನಿಲ್‌ ಚೆಟ್ರಿ ಪಡೆ, ಈ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. 

Power Lifting Athletics: ಅಂತರಾಷ್ಟ್ರೀಯ ಮಟ್ಟದಲ್ಲಿ 5 ಚಿನ್ನದ ಪದಕಗಳನ್ನು ಗೆದ್ದ ಕಿರಣ

ಕಳೆದ 4 ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ಮುಂಬೈ ಗೆಲುವಿನ ಹಳಿಗೆ ಮರಳುವ ನಿರೀಕ್ಷೆಯಲ್ಲಿದೆ. ಮುಂಬೈ 10 ಪಂದ್ಯಗಳಲ್ಲಿ 5ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಕೇವಲ 2 ಪಂದ್ಯ ಜಯಿಸಿರುವ ಬಿಎಫ್‌ಸಿ 9ನೇ ಸ್ಥಾನದಲ್ಲಿದೆ.

ಐಎಸ್‌ಎಲ್‌ ಫುಟ್ಬಾಲ್‌ಗೂ ಕೊರೋನಾ ಸೋಂಕಿನ ಕಾಟ!

ಮಾರ್ಗೋ: ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಲ್‌) ಫುಟ್ಬಾಲ್‌ ಟೂರ್ನಿಗೂ ಕೊರೋನಾ ಸೋಂಕಿನ ಕಾಟ ಶುರುವಾಗಿದ್ದು, ಕೋಲ್ಕತಾ ತಂಡದ ಆಟಗಾರನೊಬ್ಬನಿಗೆ ಸೋಂಕು ದೃಢಪಟ್ಟಕಾರಣ ಶನಿವಾರ ನಡೆಯಬೇಕಿದ್ದ ಎಟಿಕೆ ಮೋಹನ್‌ ಬಗಾನ್‌ ಹಾಗೂ ಒಡಿಶಾ ಎಫ್‌ಸಿ ತಂಡಗಳ ನಡುವಿನ ಪಂದ್ಯ ಮುಂದೂಡಿಕೆಯಾಯಿತು. ಟೂರ್ನಿಯನ್ನು ಕಳೆದೊಂದು ತಿಂಗಳಿಗೂ ಹೆಚ್ಚು ಸಮಯದಿಂದ ಬಯೋಬಬಲ್‌ನೊಳಗೆ ನಡೆಸುತ್ತಿದ್ದರೂ ಸೋಂಕು ಪತ್ತೆಯಾಗಿರುವುದು ಆಯೋಜಕರಲ್ಲಿ ಆತಂಕ ಮೂಡಿಸಿದೆ.

click me!